
ಬರ್ನೀ: ಭಾರತದ ಸೋಮ್ ದೇವ್ ದೇವವರ್ಮನ್ ಆಸ್ಟ್ರೇಲಿಯನ್ ಚಾಲೆಂಜರ್ ಎಟಿಪಿ ಟೆನಿಸ್ ಚಾಂಪಿಯನ್‍ಶಿಪ್‍ನ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನಲ್ಲೇ ಸೋಲಿನ ಕಹಿ ಅನುಭವಿಸಿದ್ದಾರೆ. ಮೂರನೇ ಶ್ರೇಯಾಂಕ ಹೊಂದಿದ್ದ ಸೋಮ್ ದೇವ್, ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿಅರ್ಹತಾ ಸುತ್ತಿನಿಂದ ಬಂದ ನ್ಯೂಜಿಲೆಂಡ್‍ನ ಪಿsನ್ ಟಿಯರ್ನಿ ಅವರ ಎದುರು 6-1, 6-7 (4-7), 4-6 ಸೆಟ್‍ಗಳಿಂದ ಸೋಲನುಭವಿಸಿದರು.ಎರಡು ಗಂಟೆ 27 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ 136ನೇ ಕ್ರಮಾಂಕದ ಭಾರತೀಯ ಆಟಗಾರ, ಮೊದಲ ಸೆಟ್ ಅನ್ನು ಸುಲಭವಾಗಿ ಗೆದ್ದು-ಕೊಂಡು ಶುಭಾರಂಭ ಮಾಡಿದರು. ಆದರೆ, ಎರಡನೇ ಸೆಟ್‍ನಲ್ಲಿ ಉತ್ತಮ ಹೋರಾಟ ನಡೆಸಿದರೂ ಸಹ ಅಂತಿಮವಾಗಿ ಕೆಲ ಅನಗತ್ಯ ತಪ್ಪುಗಳನ್ನು ಎಸಗುವ ಮೂಲಕ ಟೈಬ್ರೇಕ್‍ರನಲ್ಲಿ ಸೋಲನುಭವಿಸಿದರು.ಇನ್ನು ನಿರ್ಣಾಯಕ ಮೂರನೇ ಸೆಟ್‍ನಲ್ಲಿ ಫಿನ್ ನೀಡಿದ ಭರ್ಜರಿ ತಿರುಗೇಟಿಗೆ ಉತ್ತರಿಸಲು ಸೋಮïದೇವ್‍ಗೆ ಸಾಧ್ಯವಾಗಲಿಲ್ಲ.ಸುಮಾರು ಆರು ಅಡಿ ಎತ್ತರದ ನ್ಯೂಜಿಲೆಂಡ್ ಆಟಗಾರ ಎರಡು ಮತ್ತು ಮೂರನೇ ಸೆಟ್‍ಗಳಲ್ಲಿ ಆಕರ್ಷಕ ಸರ್ವ್ ಮತ್ತು ಬೇಸ್‍ಲೈನ್ ಆಟ ಪ್ರದರ್ಶಿಸಿ ಗಮನ ಸೆಳೆದರು.
ಕೋಲ್ಕತಾ ಓಪನ್ ; ಸೋಮ್ ಗೆ ವೈಲ್ಡ್ ಕಾರ್ಡ್: ಬಂಗಾಳ ಟೆನಿಸ್ ಸಂಸ್ಥೆಯ ಕೋರ್ಟ್‍ಗಳಲ್ಲಿ ಇದೇ ಫೆಬ್ರವರಿ 23ರಿಂದ 28ರ ವರೆಗೆ ನಡೆಯಲಿರುವ 50 ಸಾವಿರ ಡಾಲರ್ ಬಹುಮಾನ ಮೊತ್ತದ ಕೋಲ್ಕತಾ ಓಪನ್ ಎಟಿಪಿ ಚಾಲೆಂಜರ್ ಟೂರ್ ಟೂರ್ನಿಯಲ್ಲಿ ಸೋಮ್ ದೇವ್ ವೈಲ್ಡ್ ಕಾರ್ಡ್‍ನೊಂದಿಗೆ ಪ್ರವೇಶ ಪಡೆಯಲಿದ್ದಾರೆ. ಒಟ್ಟು 23 ದೇಶಗಳ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
Advertisement