ಅಭ್ಯಾಸ ಪಂದ್ಯ: ಆಸೀಸ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು

ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ನಡೆದ ಅಭ್ಯಾಸ ಪಂದ್ಯ
ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ನಡೆದ ಅಭ್ಯಾಸ ಪಂದ್ಯ

ಅಡಿಲೇಡ್: 2015ರ ವಿಶ್ವಕಪ್ ಪಂದ್ಯಾವಳಿಯ ಪೂರ್ವಭಾವಿಯಾಗಿ ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ನಡೆದ ಅಭ್ಯಾಸ ಪಂದ್ಯದಲ್ಲೂ ಭಾರತ ಹೀನಾಯ ಸೋಲು ಕಂಡಿದೆ.

ಅಡಿಲೇಡ್ ನಲ್ಲಿ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಧೋನಿ ಪಡೆ ಆಸ್ಟ್ರೇಲಿಯಾ ವಿರುದ್ಧ 106 ರನ್ ಗಳಿಂದ ಹೀನಾಯ ಸೋಲು ಕಂಡಿದೆ. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯ 371 ರನ್ಗಳ ಸವಾಲನ್ನು ನೀಡಿತ್ತು.

372 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಭಾರತ ಆರಂಭದಲ್ಲೇ ಮುಗ್ಗರಿಸಿತು. 8 ರನ್ ಗಳಿಸಿದ್ದ ರೋಹಿತ್ ಶರ್ಮಾ ಔಟಾದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಶಿಖರ್ ಧವನ್ 59 ಗಳಿಸಿದರೆ ಭರವಸೆಯ ಆಟಗಾರ ವಿರಾಟ್ ಕೊಹ್ಲಿ 18 ಗಳಿಸಿ ಪೆವಿಲಿಯನ್ ಸೇರಿದರು.

ಅಜಿಂಕ್ಯಾ ರಹಾನೆ 66 ರನ್ ಗಳಿಸಿದರೆ ಸ್ಫೋಟಕ ಆಟಗಾರ ಸುರೇಶ್ ರೈನಾ ಕೇವಲ 9 ರನ್ ಗಳಿಸಿ ಔಟಾದರು. ಬಳಿಕ ಬಂದ ನಾಯಕ ಎಂ.ಎಸ್ ಧೋನಿ ಶೂನ್ಯಕ್ಕೆ ಔಟಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಭಾರತದ ಬಾಲಂಗೋಚಿಗಳು ಒಂದಕ್ಕಿಗೆ ಔಟಾಗಿದ್ದು, ಭಾರತ 265 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು.

ಆಸ್ಟ್ರೇಲಿಯಾ ಪರ ಕಮ್ಮಿನ್ಸ್ 3 ವಿಕೆಟ್, ಸ್ಟಾರ್ಕ್, ಜಾನ್ಸನ್ ಮತ್ತು ಹ್ಯಾಜಲ್ವುಡ್ ತಲಾ 2 ವಿಕೆಟ್ ಪಡೆದು ಆಸ್ಟ್ರೇಲಿಯಾ ಗೆಲುವಿಗೆ ಕಾರಣರಾದರು.

ಡೇವಿಡ್ ವಾರ್ನರ್ 104, ಫಿಂಚ್ 20, ವಾಟ್ಸನ್ 22, ಸ್ಮಿತ್ 1, ಬೈಲಿ 44, ಮ್ಯಾಕ್ಸ್ ವೆಲ್ 122, ಮಾರ್ಷ್ 21, ಜಾನ್ಸನ್ 19, ಸ್ಟಾರ್ಕ್ 0, ಕಮ್ಮಿನ್ಸ್ 5 ಹಾಗೂ ಡೊಹೆರ್ಟಿ ಅಜೇಯ ಶೂನ್ಯದೊಂದಿಗೆ ಆಸ್ಟ್ರೇಲಿಯಾ 371 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು.

ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲೂ ಸೋಲು ಅನುಭವಿಸಿದ್ದ ಭಾರತ ತನ್ನ ಸೋಲು ಯೋಶೋಗಾಥೆ ಮುಂದುವರೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com