ಭಾರತೀಯ ಗಾಲ್ಫರ್ ಲಹಿರಿ ಮುಡಿಗೆ ಮಲೇಷ್ಯಾ ಓಪನ್

ಅನಿರ್ಬಾನ್ ಲಹಿರಿ
ಅನಿರ್ಬಾನ್ ಲಹಿರಿ

ಕೌಲಾಲಂಪುರ: ಫೈನಲ್ ಸುತ್ತಿನಲ್ಲಿನ ನಾಯಕೀಯ ತಿರುವಿನಲ್ಲಿ ಕೇವಲ ಒಂದು ಹೊಡೆತದ ಅಂತರದಿಂದ ಎದುರಾಳಿಗಿಂತ ಮುನ್ನಡೆ ಸಾಧಿಸಿದ ಭಾರತದ ಗಾಲ್ಫರ್ ಅನಿರ್ಬಾನ್ ಲಹಿರಿ, ಮಲೇಷ್ಯಾ ಓಪನ್ ಗಾಲ್ಫ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಭಾನುವಾರ ಕೌಲಾಲಂಪುರ ಗಾಲ್ಫ್ ಮತ್ತು ಕಂಟ್ರಿ ಕ್ಲಬ್‌ನಲ್ಲಿ ನಡೆದ ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರಿಯಾದ ಬ್ರೆಂಡ್ ವೈಸ್‌ಬರ್ಗರ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಅನಿರ್ಬಾನ್ ಲಹಿರಿ ರು. 3 ಕೋಟಿ ಮೊತ್ತದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಅನಿರ್ಬಾನ್ 6ನೇ ಏಷ್ಯನ್ ಟೂರ್ ಜತೆಗೆ ಮೊದಲ ಬಾರಿಗೆ ಯೂರೋಪಿಯನ್ ಟೂರ್ ಪ್ರಶಸ್ತಿ ಗೆದ್ದುಕೊಂಡ ಸಾಧನೆ ಮಾಡಿದ್ದಾರೆ.

ಅನಿರ್ಬಾನ್ ಲಹಿರಿ ತಮ್ಮ ವೃತ್ತಿ ಜೀವನದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಅಲ್ಲದೆ ಈ ಪ್ರಶಸ್ತಿ ಗೆದ್ದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಈ ಹಿಂದೆ ಜೀವ್ ಮಿಲ್ಖಾಸಿಂಗ್, ಎಸ್‌ಎಸ್‌ಪಿ ಚವ್ರಾಸಿಯಾ ಹಾಗೂ ಅರ್ಜುನ್ ಅತ್ವಾಲ್ ನಂತರ ಅನಿರ್ಬಾನ್ ಈ ಸಾಧನೆ ಮಾಡಿದ್ದಾರೆ. ಇದು ಸಾಕಷ್ಟು ವಿಶೇಷವಾಗಿದೆ. ಆರನೇ ಪ್ರಶಸ್ತಿಯಾಗಿದ್ದು, ಯೂರೋಪಿಯನ್ ಟೂರ್‌ನ ಮೊದಲ ಪ್ರಶಸ್ತಿಯಾಗಿದೆ. ಹಾಗಾಗಿ ಇದು ಮತ್ತಷ್ಟು ಪ್ರಮುಖವಾಗಿದೆ ಎಂದು ಲಹಿರಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com