
ನವದೆಹಲಿ: ಭಾರತೀಯ ಪುರುಷರ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಅವರಿಗೆ ಶುಕ್ರವಾರ 2014ರ ವರ್ಷದ ಆಟಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಖಿಲ ಭಾರತ ಫುಟ್ಬಾಲ್ ಸಂಸ್ಥೆ (ಎಐಎಫ್ಎಫ್) ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಛೆಟ್ರಿ ಪ್ರಶಸ್ತಿ ಹಾಗೂ ರು. 2 ಲಕ್ಷ ನಗದು ಬಹುಮಾನ ಸ್ವೀಕರಿಸಿದರು.
ಚೆಟ್ರಿ ಅವರಿಗೆ ಈ ಪ್ರಶಸ್ತಿ ಒಲಿದಿರುವುದು ಇದು 4ನೇ ಬಾರಿ. ಈ ಹಿಂದೆ, 2007, 2011 ಹಾಗೂ 2013ರಲ್ಲಿ ಅವರಿಗೆ ಈ ಪ್ರಶಸ್ತಿ ಬಂದಿತ್ತು.
ಇದೇ ಸಮಾರಂಭದಲ್ಲಿ, ಭಾರತೀಯ ಮಹಿಳೆಯರ ಫುಟ್ಬಾಲ್ ತಂಡದ ಸ್ಟ್ರೈಕರ್ ಬಾಲಾದೇವಿ ಶ್ರೇಷ್ಠ ಮಹಿಳಾ ಫುಟ್ಬಾಲ್ ಆಟಗಾರ್ತಿ ಪ್ರಶಸ್ತಿ ಹಾಗೂ ರು. 1 ಲಕ್ಷನಗದು ಬಹುಮಾನಕ್ಕೆ ಭಾಜನರಾದರು. 18 ಅಂತಾರಾಷ್ಟ್ರೀಯ ಪಂದ್ಯಗಳೂ ಸೇರಿದಂತೆ, ಕಳೆದ ವರ್ಷ ಆಡಿರುವ ಪಂದ್ಯಗಳಿಂದ ದೇವಿ ಅವರು, 47 ಗೋಲು ದಾಖಲಿಸಿದ ಸಾಧನೆ ಮಾಡಿದ್ದಾರೆ.
ಪ್ರಶಸ್ತಿ ವಿಜೇತ ಇತರರು: ಸಂದೇಶ್ ಝಿಂಗನ್ (ಉದಯೋನ್ಮುಖ ಆಟಗಾರ), ಸಂತೋಷ್ ಕುಮಾರ್ (ಶ್ರೇಷ್ಠ ರೆಫರಿ), ಸಪ್ಪಂ ಕೆನಡಿ (ಶ್ರೇಷ್ಠ ಸಹಾಯಕ ರೆಫರಿ).
Advertisement