ಜಿಂಬಾಬ್ವೆ ಮೇಲೆ ಆಫ್ರಿಕಾ ಸವಾರಿ

ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್‍ಗಳಾದ ಡೇವಿಡ್ ಮಿಲ್ಲರ್ ಮತ್ತು ಜೀನ್ -ಪಾಲ್- ಡುಮಿನಿ ಐದನೇ ವಿಕೆಟ್ ಜೊತೆಯಾಟದಲ್ಲಿ ...
ದಕ್ಷಿಣ ಆಫ್ರಿಕಾ ತಂಡ
ದಕ್ಷಿಣ ಆಫ್ರಿಕಾ ತಂಡ

ಹ್ಯಾಮಿಲ್ಟನ್: ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್‍ಗಳಾದ ಡೇವಿಡ್ ಮಿಲ್ಲರ್ ಮತ್ತು ಜೀನ್ -ಪಾಲ್- ಡುಮಿನಿ ಐದನೇ ವಿಕೆಟ್ ಜೊತೆಯಾಟದಲ್ಲಿ ದಾಖಲಿಸಿದ ವಿಶ್ವದಾಖಲೆ
ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ, ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ಧ 62 ರನ್‍ಗಳ ಜಯಭೇರಿ ಬಾರಿಸಿದೆ. ಇದರೊಂದಿಗೆ ದಕ್ಷಿಣ ಆಫ್ರಿಕಾ ಆಟಗಾರರು `ಬಿ' ಗುಂಪಿನಿಂದ ತಮ್ಮ ವಿಶ್ವಕಪ್ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸಿದಂತಾಗಿದೆ.
ಸೆಡ್ಡಾನ್ ಪಾರ್ಕ್‍ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ 50 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 339 ರನ್‍ಗಳ ಬೃಹತ್ ಮೊತ್ತ ಕಲೆಹಾಕಿತು. ಆರಂಭದಲ್ಲಿ ಆಫ್ರಿಕಾ ಸ್ಥಿತಿ ಉತ್ತಮವಾಗಿರಲಿಲ್ಲ.
ತಂಡದ ಮೊತ್ತ 20.2 ಓವರುಗಳಲ್ಲಿ 83 ರನ್ ಗಳಾಗುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್‍ಮನ್‍ಗಳು ಪೆವಿಲಿಯನ್ ಸೇರಿದ್ದರು. ಈ ಹಂತದಲ್ಲಿ ಜೊತೆಯಾದ ಮಿಲ್ಲರ್ (ಅಜೇಯ 138) ಮತ್ತು ಡುಮಿನಿ (ಅಜೇಯ 115) ವೈಯಕ್ತಿಕ ಶತಕಗಳ ಮೂಲಕ ತಮ್ಮ ತಂಡವನ್ನು
ಬೃಹತ್ ಮೊತ್ತದತ್ತ ಕೊಂಡೊಯ್ದರು. ಈ ಇಬ್ಬರೂ ದಾಂಡಿಗರು ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 178 ಎಸೆತಗಳಲ್ಲಿ 265 ಪೇರಿಸಿದರು. ಇದು ಈ ವಿಕೆಟ್‍ಗೆ ದಾಖಲಾದ ಗರಿಷ್ಠ ಹಾಗೂ ಯಾವುದೇ ವಿಕೆಟ್‍ಗೆ ದಾಖಲಾದ ಮೂರನೇ ಶ್ರೇಷ್ಠ ಜೊತೆಯಾಟವಾಗಿದೆ.
ಅಂತಿಮ 5 ಓವರುಗಳಲ್ಲಿ ರನ್ ಮಳೆ ಹರಿಸಿದ ಮಿಲ್ಲರ್ ಮತ್ತು ಡುಮಿನಿ 96 ರನ್ ಚಚ್ಚುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿಗೊಳಿಸಿದರು. ಉತ್ತರವಾಗಿ 340 ರನ್‍ಗಳ ಕಠಿಣ ಗುರಿ ಬೆಂಬತ್ತಿದ ಜಿಂಬಾಬ್ವೆ 48.2 ಓವರುಗಳಲ್ಲಿ 277 ರನ್‍ಗಳಿಗೆ ಪತನಗೊಂಡಿತು. ಜಿಂಬಾಬ್ವೆ ಪರ ಚಾಮು ಚಿಭಾಭಾ (64), ಹ್ಯಾಮಿಲ್ಟನ್ ಮಸಕಜ (80) ಮತ್ತು ಬ್ರೆಂಡನ್ ಟೇಲರ್ (40) ಉತ್ತಮ ಹೋರಾಟ ನಡೆಸಿದರು. ಆದರೆ,ಇತರೆ ಬ್ಯಾಟ್ಸ್‍ಮನ್‍ಗಳ ವೈಫಲ್ಯದಿಂದಾಗಿ ಜಿಂಬಾಬ್ವೆ ಅಂತಿಮವಾಗಿ ಸುಲಭ ಸೋಲೋಪ್ಪಿಕೊಳ್ಳುವಂತಾಯಿತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com