ಶಾಸ್ತ್ರಿ ನೆರವು ಕೋರಿದ ಧೋನಿ

ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಗೆಲವು ದಾಖಲಿಸಿದ್ದರೂ ಟೀಂ ಇಂಡಿಯಾದಲ್ಲಿ ಇನ್ನೂ ನ್ಯೂನತೆಗಳಿವೆ..
ರವಿಶಾಸ್ತ್ರಿ ಮತ್ತು ಮಹೇಂದ್ರ ಸಿಂಗ್ ಧೋನಿ (ಸಂಗ್ರಹ ಚಿತ್ರ)
ರವಿಶಾಸ್ತ್ರಿ ಮತ್ತು ಮಹೇಂದ್ರ ಸಿಂಗ್ ಧೋನಿ (ಸಂಗ್ರಹ ಚಿತ್ರ)

ಮೆಲ್ಬರ್ನ್: ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಗೆಲವು ದಾಖಲಿಸಿದ್ದರೂ ಟೀಂ ಇಂಡಿಯಾದಲ್ಲಿ ಇನ್ನೂ ನ್ಯೂನತೆಗಳಿವೆ.

ಅದರಲ್ಲೂ ರನ್ ಗಳಿಸಲು ಪರದಾಡುತ್ತಿರುವ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಎಲ್ಲಾ ಸಂಕಷ್ಟಗಳನ್ನು ನಿಭಾಯಿಸಲು ತಂಡದ ನಿರ್ದೇಶಕ ರವಿಶಾಸ್ತ್ರಿ ಅವರ ಸಲಹೆ ಕೋರಿದ್ದಾರೆ. ಬುಧವಾರ ಸೆಂಟ್ ಕಿಲ್ಡಾಸ್ ಜಂಕ್ಷನ್ ಓವಲ್ ಕ್ರೀಡಾಂಗಣದಲ್ಲಿ ತಂಡದ ಅಭ್ಯಾಸದ ವೇಳೆ ಮಹೇಂದ್ರ ಸಿಂಗ್ ಧೋನಿ ರವಿಶಾಸ್ತ್ರಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು.

ಧೋನಿ ತಮ್ಮ ಪುಲ್ ಹೊಡೆತದಲ್ಲಿ ಬ್ಯಾಟ್‍ನ ಕೋನದ ಬಗ್ಗೆ ಚರ್ಚಿಸಿದ್ದು ಸಹ ಕಂಡುಬಂದಿತು. ನೆಟ್ಸ್‍ನಲ್ಲಿ ಅಭ್ಯಾಸದ ನಂತರ ಧೋನಿ ರವಿಶಾಸ್ತ್ರಿ ಬಳಿಗೆ ಬಂದು ಸುದೀರ್ಘ ಚರ್ಚೆ ನಡೆಸಿದರು. ನಂತರ ಎದ್ದು ತಮ್ಮ ಬ್ಯಾಟಿಂಗ್ ವೇಳೆ ದೈಹಿಕ ಶೈಲಿಯನ್ನು ತೋರಿಸಿದರು. ಆಸ್ಟ್ರೇಲಿಯಾ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರವಿಶಾಸ್ತ್ರಿ ಅವರಿಂದ ಧೋನಿ ಸಲಹೆ ಪಡೆದಿರುವುದರಲ್ಲಿ ಆಶ್ಚರ್ಯವಿಲ್ಲ. ಕಾರಣ, ರವಿಶಾಸ್ತ್ರಿ 1985ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬೆನ್ಸನ್ ಅಂಡ್ ಹೆಡ್ಜಸ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರಲ್ಲದೇ, 1991-92ರ ಪ್ರವಾಸದಲ್ಲಿ ಸಿಡ್ನಿಯಲ್ಲಿ ದ್ವಿಶತಕ ದಾಖಲಿಸಿದ್ದರು.

ಟೀಂ ಇಂಡಿಯಾ ನಾಯಕ ಧೋನಿ, ಕಳೆದ 10 ಏಕದಿನ ಪಂದ್ಯಗಳ ಪೈಕಿ ಒಂದು ಬಾರಿ ಅಜೇಯ 51 ರನ್ ಗಳಿಸಿದರೆ, ಉಳಿದ 7 ಪಂದ್ಯಗಳಲ್ಲಿ ಒಂದು ಬಾರಿ 30ರ ಗಡಿ ದಾಟಿದ್ದಾರೆ. ಉಳಿದಂತೆ ಕೆಟ್ಟ ಹೊಡೆತಗಳಿಂದ ವಿಕೆಟ್ ನೀಡಿದ್ದಾರೆ. ಹಾಗಾಗಿ ಅವರು ಮತ್ತೆ ಲಯ ಕಂಡುಕೊಳ್ಳಲು ಶಾಸ್ತ್ರಿ ಸಲಹೆ ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com