"ವಿಶ್ವಕಪ್‍ಗೆ ಹೊಸ ವಾಹಿನಿ ಸಾಧ್ಯವಿಲ್ಲ"

ವಿಶ್ವಕಪ್ ಪಂದ್ಯಗಳನ್ನು ಪ್ರಸಾರ ಮಾಡುವ ಸಲುವಾಗಿ ಪ್ರತ್ಯೇಕವಾಗಿ ಹೊಸ ವಾಹಿನಿ ಆರಂಭಿಸಲು ಸಾಧ್ಯವಿಲ್ಲ ಎಂದು ಪ್ರಸಾರ ಭಾರತಿ ಸುಪ್ರೀಂ ಕೋರ್ಟ್..
ಸುಪ್ರೀಂಕೋರ್ಟ್ (ಸಂಗ್ರಹ ಚಿತ್ರ)
ಸುಪ್ರೀಂಕೋರ್ಟ್ (ಸಂಗ್ರಹ ಚಿತ್ರ)

ನವದೆಹಲಿ: ವಿಶ್ವಕಪ್ ಪಂದ್ಯಗಳನ್ನು ಪ್ರಸಾರ ಮಾಡುವ ಸಲುವಾಗಿ ಪ್ರತ್ಯೇಕವಾಗಿ ಹೊಸ ವಾಹಿನಿ ಆರಂಭಿಸಲು ಸಾಧ್ಯವಿಲ್ಲ ಎಂದು ಪ್ರಸಾರ ಭಾರತಿ ಸುಪ್ರೀಂ ಕೋರ್ಟ್ ಗೆ ಸ್ಪಷ್ಟನೆ ನೀಡಿದೆ.

ಗುರುವಾರ ನಡೆದ ವಿಚಾರಣೆ ವೇಳೆ ಹೊಸ ವಾಹಿನಿ ಆರಂಭಿಸುವ ಕುರಿತು ತನ್ನ ಅಭಿಪ್ರಾಯ ತಿಳಿಸಿದ ಪ್ರಸಾರ ಭಾರತಿ, ಕೇವಲ ವಿಶ್ವಕಪ್ ಪಂದ್ಯಗಳನ್ನು ಪ್ರಸಾರ ಮಾಡುವ ನಿಟ್ಟಿನಲ್ಲಿ ಹೊಸ ವಾಹಿನಿ ಆರಂಬಿsಸಲು ಸಾಧ್ಯವಿಲ್ಲ ಎಂದಿದೆ. ಸೀಮಿತವಾದ ಟ್ರಾನ್ಸ್‍ಮಿಟರ್‍ಗಳನ್ನು ಹೊಂದಿದ್ದು, ಹೊಸ ವಾಹಿನಿಯೊಂದನ್ನು ಆರಂಭಿಸಲು ಸಾಧ್ಯವಿಲ್ಲ ಎಂದು ಪ್ರಸಾರ ಭಾರತಿ ಪರ ಅಟಾರ್ನಿ ಜನರಲ್ ಮುಕುಲ್ ರೊಹಟಗಿ ಸುಪ್ರೀಂ ಕೋರ್ಟ್‍ಗೆ ತಿಳಿಸಿದರು. ರೊಹಟಗಿ ವಾದ ಆಲಿಸಿದ ಸುಪ್ರೀಂ ಕೋರ್ಟ್, ವಿಶ್ವಕಪ್ ಪಂದ್ಯ ಪ್ರಸಾರ ಕುರಿತಂತೆ ಪ್ರಸಾರ ಭಾರತ ಅರ್ಜಿಯ ತೀರ್ಪನ್ನು ಕಾಯ್ದಿರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com