ವಿಶ್ವಕಪ್: ಮತ್ತೆ ಮುಗ್ಗರಿಸಿದ ಪಾಕ್

ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಭಾರತದ ವಿರುದ್ಧ ಮಂಡಿಯೂರಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ ತನ್ನ ಎರಡನೇ ಪಂದ್ಯದಲ್ಲಿಯೂ ಹಿನಾಯ ಸೋಲು ಕಂಡಿದೆ...
ಗೆಲುವಿನ ಸಂಭ್ರಮದಲ್ಲಿ ವಿಂಡೀಸ್ ಆಟಗಾರರು (ಸಂಗ್ರಹ ಚಿತ್ರ)
ಗೆಲುವಿನ ಸಂಭ್ರಮದಲ್ಲಿ ವಿಂಡೀಸ್ ಆಟಗಾರರು (ಸಂಗ್ರಹ ಚಿತ್ರ)

ಕ್ರೈಸ್ಟ್ ಚರ್ಚ್: ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಭಾರತದ ವಿರುದ್ಧ ಮಂಡಿಯೂರಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ ತನ್ನ ಎರಡನೇ ಪಂದ್ಯದಲ್ಲಿಯೂ ಹಿನಾಯ ಸೋಲು ಕಂಡಿದೆ.

ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 150 ರನ್ ಗಳ ಹೀನಾಯ ಸೋಲು ಅನುಭವಿಸಿದೆ. ವೆಸ್ಟ್ ಇಂಡೀಸ್ ತಂಡದ ಸಾಂಘಿಕ ಹೋರಾಟಕ್ಕೆ ಮಣಿದ ಪಾಕಿಸ್ತಾನ ವಿಶ್ವಕಪ್ ಸರಣಿಯಲ್ಲಿ ತನ್ನ ಎರಡನೇ ಪಂದ್ಯದಲ್ಲಿಯೂ ಸೋಲು ಕಂಡಿದೆ. ಪಾಕಿಸ್ತಾನ ತಂಡದ ನಾಯಕ ಮಿಸ್ಬಾ ಉಲ್ ಹಕ್ ಮೊದಲು ಟಾಸ್ ಗೆದ್ದರೂ ಬೌಲಿಂಗ್ ಮಾಡುವ ನಿರ್ಧಾರಕ್ಕೆ ಬಂದರು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವೆಸ್ಟ್ ಇಂಡೀಸ್ ತಂಡ ಆರಂಭಿಕ ಆಘಾತ ಅನುಭವಿಸಿ 8 ಓವರ್ ಗಳಲ್ಲಿ 28ಕ್ಕೆ2 ವಿಕೆಟ್ ಕಳೆದುಕೊಂಡರೂ ನಂತರ ಚೇತರಿಸಿಕೊಂಡು 50 ಓವರ್ ಗಳಲ್ಲಿ 310ರನ್ ಚೆಚ್ಚಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡ 39 ಓವರ್ ಗಳಲ್ಲಿ 160 ಸ್ಕೋರಿಗೆ ಆಲೌಟ್ ಆಗಿ ಕಳಪೆ ಆಟ ಮುಂದುವರೆಸಿತು.

ಪಾಕಿಸ್ತಾನ ಪರ ಶೋಯಿಬ್ ಮಕ್ಸೂದ್ 50, ಉಮರ್ ಅಕ್ಮಲ್ 59 ಹಾಗೂ ಶಹೀದ್ ಅಫ್ರಿದಿ 28 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಎರಡಂಕಿ ಸ್ಕೋರ್ ದಾಟಲಿಲ್ಲ. ವಿಂಡೀಸ್ ಪರ ಜೆರೋಮಿ ಟೇಲರ್ 7-1-15-3, ಆಂಡ್ರೆ ರಸೆಲ್ 8 ಓವರ್ ಗಳಲ್ಲಿ 33ಕ್ಕೆ 3 ಕಿತ್ತು ಜಯಕ್ಕೆ ತಮ್ಮ ಕೊಡುಗೆ ನೀಡಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡ ಡರೇನ್ ಬ್ರಾವೋ 49,ಸ್ಯಾಮುಯಲ್ಸ್ 38, ರಾಮ್ ದೀನ್ 51, ಲೆಂಡ್ಲ್ ಸಿಮನ್ಸ್ 50 ಹಾಗೂ ಆಂಡ್ರೆ ರಸೆಲ್ ಬಿರುಸಿನ 13 ಎಸೆತಗಳಲ್ಲಿ 42ರನ್  ನೆರವಿನಿಂದ 310 ಸ್ಕೋರ್ ಮುಟ್ಟಿತು. ಪಾಕಿಸ್ತಾನದ ವಿರುದ್ಧ ಗೆಲ್ಲುವ ಮೂಲಕ ವಿಂಡೀಸ್ ಈ ವಿಶ್ವಕಪ್ ನ ಮೊದಲ ಜಯ ದಾಖಲಿಸಿದೆ.

ಪಂದ್ಯದಲ್ಲಿ ಅಜೇಯ 42ರನ್ ಗಳಿಸಿದ್ದಲ್ಲದೇ ಉತ್ತಮವಾಗಿ ಬೌಲಿಂಗ್ ಮಾಡಿ 3 ವಿಕೆಟ್ ಕಬಳಿಸಿದ ಎಡಿ ರಸೆಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಪಂದ್ಯದ ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ 310/6 (50 ಓವರ್ ಗಳು)
ಪಾಕಿಸ್ತಾನ 160/10 (39.0 ಓವರ್ ಗಳು)

ಎಡಿ ರಸೆಲ್ (ವೆಸ್ಟ್ ಇಂಡೀಸ್) ಪಂದ್ಯ ಪುರುಷೋತ್ತಮ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com