ಮುಂದಿನ ಪಂದ್ಯ ಗೆಲ್ಲದಿದ್ದರೆ, ಮನೆಗೆ ವಾಪಸ್ ಬನ್ನಿ: ಪಾಕ್ ಕಿವಿ ಹಿಂಡಿದ ವಾಸಿಂ

ವಿಶ್ವಕಪ್ ಪಂದ್ಯಾವಳಿಯಲ್ಲಿ ಸತತ ಹೀನಾಯ ಸೋಲುಗಳನ್ನು ಕಾಣುತ್ತ ಕಂಗಾಲಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ತಾಕತ್ತಿದ್ದರೆ...
ವಾಸಿಂ ಅಕ್ರಂ
ವಾಸಿಂ ಅಕ್ರಂ
Updated on: 

ಕ್ರೈಸ್ಟ್ ಚರ್ಚ್: ವಿಶ್ವಕಪ್ ಪಂದ್ಯಾವಳಿಯಲ್ಲಿ ಸತತ ಹೀನಾಯ ಸೋಲುಗಳನ್ನು ಕಾಣುತ್ತ ಕಂಗಾಲಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ತಾಕತ್ತಿದ್ದರೆ ಮುಂದಿನ ಪಂದ್ಯದಲ್ಲಿ ಜಯ ಗಳಿಸಿ. ಒಂದು ವೇಳೆ ಸಾದ್ಯವಾಗದಿದ್ದರೆ ಮನೆಗೆ ಬನ್ನಿ ಎಂದು ಪಾಕ್ ನ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಚಾಟಿ ಬೀಸಿದ್ದಾರೆ.

ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧದ ಮೊದಲ ಪಂದ್ಯದಲ್ಲಿ ಪಾಕ್ 73 ರನ್ ಗಳ ಹೀನಾಯ ಸೋಲು ಕಂಡಿತ್ತು. ಬಳಿಕ ನಡೆದ ವೆಸ್ಟ್ ಇಂಡೀಸ್ ವಿರುದ್ಧದಲ್ಲೂ ಪಾಕ್ 150 ರನ್ ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು. ಪಾಕ್ ತಂಡದ ಕಳಪೆ ಪ್ರದರ್ಶನದಿಂದ ಬೇಸೆತ್ತ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 1ರಂದು ಜಿಂಬಾಬ್ವೆ ವಿರುದ್ಧ ಪಾಕ್ ಕ್ರಿಕೆಟ್ ಕದನ ನಡೆಸಲಿದೆ. ತಾಕತ್ತಿದ್ದರೆ ಈ ಪಂದ್ಯವನ್ನಾದರೂ ಗೆಲ್ಲಿ, ಇಲ್ಲವಾದರೆ ಆದಷ್ಟು ಬೇಗ ವಿಮಾನ ಹತ್ತಿ ವಾಪಸ್ ಬಂದು ಬಿಡಿ ಎಂದು ವಾಸಿಂ ಅಕ್ರಂ ಕಿಡಿಕಾರಿದ್ಧಾರೆ.

ಜಿಂಬಾಬ್ವೆ ವಿರುದ್ದದ ಪಂದ್ಯವನ್ನು ಗೆದ್ದರಷ್ಟೇ ಪಾಕಿಸ್ತಾನ ಕ್ವಾರ್ಟರ್ ಫೈನಲ್‘ಗೆ ಎಂಟ್ರಿಯಾಗಲಿದ್ದು, ಪಾಕ್ ಗೆ ಈ ಪಂದ್ಯ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ಒಂದು ವೇಳೆ ಪಾಕ್ ಸೋತರೆ ಲೀಗ್ ನಲ್ಲೇ ಸರಣಿಯಿಂದ ಹೊರಬೀಳಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com