ಕ್ಯಾಸಿನೊದಲ್ಲಿ ಮೊಯಿನ್: ತನಿಖೆಗೆ ಪಿಸಿಬಿ ಸೂಚನೆ

ಮೊಯಿನ್ ಖಾನ್
ಮೊಯಿನ್ ಖಾನ್

ಕ್ರೈಸ್ಟ್ ಚರ್ಚ್: ಸದಾ ವಿವಾದದ ಸುಳಿಯಲ್ಲಿ ಸಿಲುಕುವ ಪಾಕಿಸ್ತಾನ ಕ್ರಿಕೆಟ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ ಪಾಕಿಸ್ತಾನ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಹಾಗೂ ಪ್ರವಾಸ ಆಯ್ಕೆ ಸಮಿತಿ ಸದಸ್ಯ ಮೊಯಿನ್ ಖಾನ್ ವಿರುದ್ಧ  ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನಿಖೆ ನಡೆಸಲು ಮುಂದಾಗಿದೆ.

ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯಕ್ಕೆ ಕೇವಲ 2 ದಿನಗಳು ಮಾತ್ರ ಬಾಕಿ ಉಳಿದಿರುವಾಗ ಮೊಯಿನ್ ಖಾನ್, ರಾತ್ರಿ ಕ್ರೈಸ್ಟ್ ಚರ್ಚ್ ನಲ್ಲಿರುವ ಕ್ಯಾಸಿನೊಗೆ ತೆರಳಿದ್ದು, ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನಿಖೆ ನಡೆಸಲು ಮುಂದಾಗಿದೆ.

ಮೊಯಿನ್, ಪತ್ನಿಯೊಂದಿಗೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕ್ಯಾಸಿನೊಗೆ ತೆರಳಿರುವುದು ಖಚಿತವಾಗಿದೆ. ಹಾಗಾಗಿ ಅವರಿಗೆ ಪಾಕಿಸ್ತಾನಕ್ಕೆ ಮರಳುವಂತೆ ಸೂಚಿಸಲಾಗಿದ್ದು, ತನಿಖೆಗೆ ಒಳಪಡಿಸಲಾಗುವುದು ಎಂದು ತಂಡದ ಮ್ಯಾನೇಜರ್ ನವೀದ್ ಚೀಮಾ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಯಾವುದಾದರು ತಪ್ಪು ಮಾಡಿರುವುದು ಖಚಿತವಾದರೆ, ಕಠಿಣ ಕ್ರಮ ಕೈಗೊಳ್ಳುವುದಾಗಿ ಪಿಸಿಬಿ ಅಧ್ಯಕ್ಷ ಶಹರಿಯಾರ್ ಖಾನ್ ತಿಳಿಸಿದ್ದಾರೆ. ಮೊಯಿನ್ ವಿರುದ್ಧ  ತನಿಖೆ ಆರಂಭಿಸಿದ್ದೇವೆ. ವರದಿ ನಿಜವಾದರೆ ಶಿಸ್ತು ಕ್ರಮ ಜರುಗಿಸಲಾಗುವುದು. ಯಾರನ್ನೂ ಹರಕೆಯ ಕುರಿಯನ್ನಾಗಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com