ಇಂದು ಬೌಲರ್, ಅಂದು ಸರ್ವರ್

ಅಚ್ಚರಿಯಾದರೂ ಇದು ಸತ್ಯ. ಸೋಮವಾರ ನಡೆದ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಮಜೀದ್ ಹಕ್ ಏಕದಿನ ಕ್ರಿಕೆಟ್‍ನಲ್ಲಿ..
ಸ್ಕಾಟ್ಲೆಂಡ್ ತಂಡದ ಬೌಲರ್ ಮಜೀದ್ ಹಕ್ (ಸಂಗ್ರಹ ಚಿತ್ರ)
ಸ್ಕಾಟ್ಲೆಂಡ್ ತಂಡದ ಬೌಲರ್ ಮಜೀದ್ ಹಕ್ (ಸಂಗ್ರಹ ಚಿತ್ರ)

ಕ್ರೈಸ್ಟ್ ಚರ್ಚ್: ಅಚ್ಚರಿಯಾದರೂ ಇದು ಸತ್ಯ. ಸೋಮವಾರ ನಡೆದ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಮಜೀದ್ ಹಕ್ ಏಕದಿನ ಕ್ರಿಕೆಟ್‍ನಲ್ಲಿ 59ನೇ ವಿಕೆಟ್ ಪಡೆಯುವ ಮೂಲಕ ಸ್ಕಾಟ್ಲೆಂಡ್ ಪರ ಯಶಸ್ವಿ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಆದರೆ, ಇದೇ ಹಕ್ ಕೇವಲ 10 ವರ್ಷಗಳ ಹಿಂದೆ `ರಾಜಾ' ಎಂಬ ರೆಸ್ಟೋರೆಂಟ್‍ನಲ್ಲಿ ವಾರಕ್ಕೆರಡು ಬಾರಿ ಸರ್ವರ್ ಆಗಿ ಕೆಲಸ ಮಾಡುತ್ತಿದ್ದರು. ಈ ರಾಜಾ ಹೋಟೆಲ್ ಅವರ ಕುಟುಂಬಕ್ಕೆ ಸೇರಿದ್ದು. ಹಕ್  ಕುಟುಂಬ ಮೂಲ ಪಾಕಿಸ್ತಾನದ ಮುಲ್ತಾನ್ ನಗರ. ನಲವತ್ತು ವರ್ಷಗಳ ಹಿಂದೆ ಇಲ್ಲಿಗೆ ಅವರ ತಾತ ಕೆಲಸಕ್ಕೆಂದು ಬಂದಿದ್ದರು. ನಂತರ ಹಕ್ ತಂದೆ ಬಾಲ್ಯದಲ್ಲೇ ಇಲ್ಲಿಗೆ ಬಂದರು. ಹಾಗೆ ಹೀಗೆ ಕಷ್ಟಪಟ್ಟು ದುಡಿದು ಉಳಿಸಿದ್ದ ಹಣದಲ್ಲಿ ಪುಟ್ಟ ರೆಸ್ಟೋರೆಂಟ್ ತೆರೆದರು. ಆದರೆ, ಸ್ಕೂಲ್‍ನಲ್ಲಿ ಓದುತ್ತಿರುವಾಗಲೇ ಕ್ರಿಕೆಟ್ ಗುಂಗು ಹಿಡಿಸಿಕೊಂಡಿದ್ದ ಹಕ್ ವಾರಾಂತ್ಯದ ದಿನಗಳಲ್ಲಿ ಇಲ್ಲಿ ಸರ್ವರ್ ಆಗಿ ದುಡಿಯುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com