ಇಂಗ್ಲೆಂಡ್ ವಿರುದ್ಧ ಲಂಕೆಗೆ ಭರ್ಜರಿ ಜಯ

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾನುವಾವಾರ ನಡೆದ ಶ್ರೀಲಂಕಾ ಮತ್ತು ಇಂಗ್ಲೆಂಡ್ ತಂಡ ನಡುವಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಇಂಗ್ಲೆಂಡ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ..
ಸ್ಫೋಟಕ ಶತಕ ಸಿಡಿಸಿದ ಸಂಗಕ್ಕಾರ (ಸಂಗ್ರಹ ಚಿತ್ರ)
ಸ್ಫೋಟಕ ಶತಕ ಸಿಡಿಸಿದ ಸಂಗಕ್ಕಾರ (ಸಂಗ್ರಹ ಚಿತ್ರ)

ವೆಲ್ಲಿಂಗ್ಟನ್‌: ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾನುವಾವಾರ ನಡೆದ ಶ್ರೀಲಂಕಾ ಮತ್ತು ಇಂಗ್ಲೆಂಡ್ ತಂಡ ನಡುವಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಇಂಗ್ಲೆಂಡ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

ಇಂಗ್ಲೆಂಡ್ ನೀಡಿದ್ದ 309 ರನ್ ಗಳ ಟಾರ್ಗೆಟ್ ಅನ್ನು ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದ ಲಂಕಾ ತಂಡ ಭರ್ಜರಿ 9 ವಿಕೆಟ್ಗಳ ಗೆಲುವು ಸಾಧಿಸಿತು. ಲಂಕಾ ಪರವಾಗಿ ಲಾಹಿರು ತಿರುಮಾನ್ನೆ ಮತ್ತು ಕುಮಾರ ಸಂಗಕ್ಕಾರ ಅವರು ಸಿಡಿಸಿದ ಅಮೋಘ ಶತಕಗಳು ಲಂಕೆಗೆ ಭರ್ಜರಿ ಜಯ ತಂದು ಕೊಟ್ಟಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ಗಿಳಿದ ಇಂಗ್ಲೆಂಡ್‌ ಜೋ ರೂಟ್‌  ಅವರ ಅಮೋಘ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 309 ರನ್‌ ಗಳಿಸಿತ್ತು. ಇಯಾನ್‌ ಬೆಲ್‌ 49 ರನ್ , ಮೋಯಿನ್‌ ಅಲಿ 15 ರನ್, ಗ್ಯಾರಿ ಬ್ಯಾಲೆನ್ಸ್‌ 6 ರನ್, ಜೋ ರೂಟ್‌ 121 ರನ್, ಎವೋನ್‌ ಮಾರ್ಗನ್‌ 27ರನ್ , ಜೇಮ್ಸ್‌ ಟಯ್ಲರ್‌ 25 ರನ್ ರನ್‌ ಗಳಿಸಿ ಔಟಾದರು. ಜೋಸ್‌ ಬಟ್ಲರ್‌ 39 ರನ್ ಮತ್ತು ಕ್ರಿಸ್‌ ವೋಕ್ಸ್‌9 ರನ್‌ ಗಳಿಸಿ ಔಟಾಗದೆ ಉಳಿದರು.

ಇಂಗ್ಲೆಂಡ್ ತಂಡ ನೀಡಿದ 309 ರನ್ ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಲಂಕಾ ತಂಡ ಭರ್ಜರಿ ಆರಂಭವನ್ನೇ ಪಡೆಯಿತು. ಆರಂಭಿಕ ಆಟಗಾರರಾರ ಲಾಹಿರು ತಿರುಮಾನ್ನೆ ಮತ್ತು ಸಂಗಕ್ಕಾರ ಸಿಡಿಸಿದ ಸ್ಫೋಟಕ ಶತಕಗಳು ಇಂಗ್ಲೆಂಡ್‌ನ‌ ಸವಾಲು ದೊಡ್ಡ ಸವಾಲು ಅಲ್ಲವೇ ಅಲ್ಲ ಎಂಬಂತೆ ಮಾಡಿತು. ಕೇವಲ 47. 2ಓವರ್‌ಗಳಲ್ಲಿ ಲಂಕಾ 312 ರನ್‌ಗಳಿಸಿ 9 ವಿಕೆಟ್ ಗಳ ಅಮೋಘ ಜಯ ಸಾಧಿಸಿತು.

ತಿಲಕರತ್ನ ದಿಲ್ಶಾನ್‌ ಮತ್ತು  ಲಾಹಿರು ತಿರಿಮಾನ್ನೆ ಮುರಿಯದ ಮೊದಲ ವಿಕೆಟ್‌ಗೆ 100 ರನ್‌ ಜೊತೆಯಾಟವಾಡಿದರು. ಈ ವೇಳೆ ದಿಲ್ಶಾನ್‌ 44 ರನ್‌ ಗಳಿಸಿ ಅರ್ಧಶತಕದ ಅಂಚಿನಲ್ಲಿದ್ದಾಗ ಔಟಾದರು. ಬಳಿಕ ಬಂದ ಸಂಗಕ್ಕಾರ ಕೇವಲ 70 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿ ತಮ್ಮ ಕ್ರಿಕೆಟ್‌ ಜೀವನದ ಅತಿ ವೇಗದ ಶತಕ ದಾಖಲಿಸಿದರು. ಅವರು ಭರ್ಜರಿ 11 ಬೌಂಡರಿ ಮತ್ತು 2 ಸಿಕ್ಸರ್‌ಗಳ ಮೂಲಕ 117 ರನ್‌ಗಳಿಸಿ ಅಜೇಯರಾಗಿ ಉಳಿದರು. ಇವರಿಗೆ ಉತ್ತಮ ಸಾಥ್ ನೀಡಿದ ಲಾಹಿರು ತಿರುಮಾನ್ನೆ 143 ಎಸೆತಗಳಲ್ಲಿ 139 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಸ್ಫೋಟಕ ಆಟವಾಡಿ ಗತಂಡದ ಗೆಲುವಿಗೆ ಕಾರಣರಾದ ಸಂಗಕ್ಕಾರ ಅರ್ಹವಾಗಿಯೇ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com