ಧೋನಿ ನಿವೃತ್ತಿ: ವದಂತಿಗಳಿಗೆ ಶಾಸ್ತ್ರಿ ತೆರೆ

ನಾಯಕ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್‌ಗೆ ಏಕಾಏಕಿ ಗುಡ್ ಬೈ ಹೇಳಿದ ಹಿನ್ನಲೆಯಲ್ಲಿ ಭುಗಿಲೆದ್ದಿದ್ದ..
ಟೀಂ ಇಂಡಿಯಾದ ನಿರ್ದೇಶಕ ರವಿಶಾಸ್ತ್ರಿ (ಸಂಗ್ರಹ ಚಿತ್ರ)
ಟೀಂ ಇಂಡಿಯಾದ ನಿರ್ದೇಶಕ ರವಿಶಾಸ್ತ್ರಿ (ಸಂಗ್ರಹ ಚಿತ್ರ)

ಸಿಡ್ನಿ: ನಾಯಕ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್‌ಗೆ ಏಕಾಏಕಿ ಗುಡ್ ಬೈ ಹೇಳಿದ ಹಿನ್ನಲೆಯಲ್ಲಿ ಭುಗಿಲೆದ್ದಿದ್ದ ವಿವಾದಗಳ ಬಗ್ಗೆ ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ ಮತ್ತೆ ಸ್ಪಷ್ಟನೆ ನೀಡಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ  ಮನದಾಳವನ್ನು ಬಿಚ್ಚಿಟ್ಟಿರುವ ಅವರು, ತಮ್ಮ ಹಾಗೂ ಕೊಹ್ಲಿ ನಡುವಿನ ಆಪ್ತತೆಯ ಫಲವಾಗಿ ಧೋನಿ ಶಸ್ತ್ರತ್ಯಾಗ ಮಾಡಿದ್ದು ಎಂಬ ಬಗ್ಗೆ ಹಬ್ಬಿದ್ದ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ. ಅಲ್ಲದೇ, ಮೈದಾನದಲ್ಲಿ ಕೊಹ್ಲಿ ತೋರುವ ಆಕ್ರಮಣಕಾರಿ ಮನೋಭಾವವನ್ನು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಧೋನಿ ನಿವೃತ್ತಿ ಘೋಷಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

ಶಾಕ್ ನೀಡಿದ ನಿರ್ಧಾರ: ಧೋನಿಯವರ ನಿವೃತ್ತಿ ನಿರ್ಧಾರ ಪ್ರಕಟಿಸಿದಾಗ ಎಲ್ಲರಂತೆಯೇ ತಾವೂ ಶಾಕ್ ಆಗಿದ್ದಾಗಿ ರವಿಶಾಸ್ತ್ರಿ ಹೇಳಿದ್ದಾರೆ. ಮೆಲ್ಬರ್ನ್ ಟೆಸ್ಟ್ ಮುಗಿದ ಮೇಲೆ ಡ್ರೆಸ್ಸಿಂಗ್ ರೂಂಗೆ ಬಂದ ಧೋನಿ, ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯಾಗುವುದಾಗಿ ಹೇಳಿದರು. ಸರಿಯಾಗಿ ಯೋಚಿಸಿಯೇ ತೀರ್ಮಾನ ತೆಗೆದುಕೊಂಡಿರುವುದಾಗಿ ಹೇಳಿದರು ಎಂದು ಶಾಸ್ತ್ರಿ ವಿವರಿಸಿದ್ದಾರೆ. ವೈಯುಕ್ತಿಕವಾಗಿ ಧೋನಿಯವರ ಈ ನಿರ್ಧಾರ ಸಮರ್ಪಕವಾಗಿದೆ ಎಂದ ಅವರು, ತಾವು ನಾಯಕನ ಸ್ಥಾನ ತೊರೆದ ಮೇಲೆ ಸಾರಥ್ಯವಹಿಸುವವರು ಯಾರು ಎಂಬುದು ಸ್ಪಷ್ಟವಾದ ಮೇಲೆಯೇ ಅವರು ತಮ್ಮ ಸ್ಥಾನ ತ್ಯಜಿಸಿದ್ದಾರೆ ಎಂದರು.

ಕೊಹ್ಲಿಯ ತಪ್ಪೇನಿದೆ?
ಮೈದಾನದಲ್ಲಿ ಕೊಹ್ಲಿ ಆಕ್ರಮಣಕಾರಿ ಧೋರಣೆ ತೋರುವುದರಲ್ಲಿ ತಪ್ಪೇನಿಲ್ಲ ಎಂದ ಶಾಸ್ತ್ರಿ, ಇದೇ ಸರಣಿಯಲ್ಲಿ ಅವರು ಮೂರು ಶತಕಗಳನ್ನು ಸಿಡಿಸಿದ್ದಾರೆ. ಅದು ಅವರ ನೈಜತೆ. ವಿಂಡೀಸ್ ನ ಮಾಜಿ ಕ್ರಿಕೆಟಿಗ ರಿಚರ್ಡ್ ಸಹ ಕೊಹ್ಲಿ ಮನೋಭಾವವನ್ನು ಶ್ಲಾಘಿಸಿದ್ದಾರೆ. ಆಕ್ರಮಣಕಾರಿ ಮನೋಭಾವದ ಜೊತೆಗೆ, ಉತ್ತಮ ಪ್ರದರ್ಶನ ತೋರುವುದು, ಸರಿಯಾದ ನಿರ್ಧಾರ ಕೈಗೊಳ್ಳುವ ಗುಣಗಳು ನಾಯಕನಿಗಿರಬೇಕು. ಅವೆಲ್ಲವೂ ಕೊಹ್ಲಿಯಲ್ಲಿವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com