ಮಡಿಕೇರಿ ಸೌಂದರ್ಯಕ್ಕೆ ಮನಸೋತ ಸಾನಿಯಾ

ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಇತ್ತೀಚೆಗೆ ಕೊಡಗು ಜಿಲ್ಲೆಯ ಮಾದಾಪುರಕ್ಕೆ ಭೇಟಿ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮಡಿಕೇರಿಗೆ ಭೇಟಿ ನೀಡಿದ್ದ ವೇಳೆ ಸಹ ಆಟಗಾರರರೊಂದಿಗೆ ಸಾನಿಯಾ (ಸಂಗ್ರಹ ಚಿತ್ರ)
ಮಡಿಕೇರಿಗೆ ಭೇಟಿ ನೀಡಿದ್ದ ವೇಳೆ ಸಹ ಆಟಗಾರರರೊಂದಿಗೆ ಸಾನಿಯಾ (ಸಂಗ್ರಹ ಚಿತ್ರ)
Updated on

ಮಡಿಕೇರಿ: ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಇತ್ತೀಚೆಗೆ ಕೊಡಗು ಜಿಲ್ಲೆಯ ಮಾದಾಪುರಕ್ಕೆ ಭೇಟಿ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಸದ್ದಿಲ್ಲದೇ ಕನ್ನಡ ನಾಡಿನ ಕಾಶ್ಮೀರವೆಂದೇ ಖ್ಯಾತವಾಗಿರುವ ಕೊಡಗಿನಲ್ಲಿ ಅವರು ಈ ಬಾರಿಯ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಇದೇ ವೇಳೆ, ಮಡಿಕೇರಿಯ ಸೌಂದರ್ಯಕ್ಕೆ ಹಾಗೂ ಕಾಫಿಗೆ ಮನಸೋತಿದ್ದಾರೆಂದು ಅವರ ಆಪ್ತ ವಲಯಗಳು ತಿಳಿಸಿವೆ.

ಬೋಪಣ್ಣ ಮನೆಗೆ ಆಗಮನ: ಬಯಸಿದರೆ ವಿಶ್ವದ ಯಾವುದೇ ಐಶಾರಾಮಿ ನಗರಕ್ಕೆ ಹೋಗಿ ವರ್ಷಾಚರಣೆ ಮಾಡಬಹುದಿದ್ದ ಸಾನಿಯಾ ಮಿರ್ಜಾ, ಹೇಗೆ ಏಕಾಏಕಿ ಕೊಡಗಿಗೆ ಬಂದು ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾದರೂ ಹೇಗೆ ಎಂಬುದಕ್ಕೆ ಉತ್ತರ ಸಿಕ್ಕಿದೆ.

ಮಿರ್ಜಾ ಅವರನ್ನು ಹೊಸವರ್ಷದ ಸಂಭ್ರಮಕ್ಕೆ ಆಹ್ವಾನಿಸಿದ್ದು, ಕರ್ನಾಟಕದ ಟೆನ್ನಿಸ್ ತಾರೆ ರೋಹನ್ ಬೋಪಣ್ಣ. ಆವರ ಆಮಂತ್ರಣದ ಮೇರೆಗೆ ಕೊಡಗಿಗೆ ಆಗಮಿಸಿದ್ದ ಸಾನಿಯಾ, ಬೋಪಣ್ಣ ಮನೆಯಲ್ಲೇ 3. ದಿನ ತಂಗಿದ್ದರು. ಹೊಸ ವರ್ಷದ ಸ್ವಾಗತಕ್ಕಾಗಿ ಮಡಿಕೇರಿಯ ನಾರ್ಥ್ ಕೂರ್ಗ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ರೋಹನ್ ಬೋಪಣ್ಣ ಮನೆ ಬಳಿಯೇ ಇರುವ ಹೆಸರಾಂತ ಮಾದಾಪುರ ಸ್ಫೋರ್ಟ್ ಕ್ಲಬ್‌ಗೂ ಭೇಟಿ ನೀಡಿದ್ದ ಸಾನಿಯಾ ಅಲ್ಲಿನ ಟೆನ್ನಿಸ್ ಕೋರ್ಟ್‌ನಲ್ಲಿ ರೋಹನ್ ಜತೆ ಆಟವಾಡಿದರು. ಸಾನಿಯಾ ಜತೆ ಮತ್ತೊಬ್ಬ ಹೆಸರಾಂತ ಆಟಗಾರ ಸೋಮ್‌ದೇವ್ ದೇವವರ್ಮನ್ ಕೂಡ ಬಂದಿದ್ದರು.

ಸಾನಿಯಾ ಮಿರ್ಜಾ ಅವರ ಆಗಮನದ ಬಗ್ಗೆ ಮಾಹಿತಿ ನೀಡಿದ ರೋಹನ್ ಅವರ ತಂದೆ ಎಂಎ ಬೋಪಣ್ಣ, ಎರಡು ವರ್ಷಗಳ ಹಿಂದೆ ನಡೆದಿದ್ದ ರೋಹನ್ ಮದುವೆ ಸಮಾರಂಭಕ್ಕೆ ಆಹ್ವಾನಿಸಿದ್ದರೂ ಸಾನಿಯಾ ಅವರಿಗೆ ಬರವಾಗಿರಲಿಲ್ಲ. ಹಾಗಾಗಿ, ಈಗ ಬಿಡುವು ಮಾಡಿಕೊಂಡು ಮನೆಗೆ ಬಂದಿದ್ದರು. ನಮ್ಮ ಮನೆಯ ಹುಡುಗಿಯಂತೆ ಮನೆಯಲ್ಲಿ 3 ದಿನ ಕಾಲಕಳೆದರು ಎಂದು ತಿಳಿಸಿದರು.

ಕಾಫಿ ತೋಟಕ್ಕೂ ಭೇಟಿ ನೀಡಿದ್ದ ಸಾನಿಯಾ, ಕಾಫಿ ಕೊಯ್ಲು, ಕಾಫಿ ಹಣ್ಣು ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದ್ದರಲ್ಲದೆ, ತೆರಳುವಾಗ ತಮ್ಮೊಂದಿಗೆ ಕೆಲವು ಕಾಫಿ ಹಣ್ಣನ್ನು ಕೊಂಡೊಯ್ದರು ಎಂದು ಎಂಎ ಬೋಪಣ್ಣ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com