ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ (ಸಂಗ್ರಹ ಚಿತ್ರ)
ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ (ಸಂಗ್ರಹ ಚಿತ್ರ)

ಕೇಂದ್ರದಿಂದ ಸೈನಾ ಹೆಸರು ಪದ್ಮಭೂಷಣಕ್ಕೆ ಶಿಫಾರಸ್ಸು

ಪ್ರಸಕ್ತ ಸಾಲಿನ ಪದ್ಮಭೂಷಣ ಪ್ರಶಸ್ತಿಗಾಗಿ..

ನವದೆಹಲಿ: ಪ್ರಸಕ್ತ ಸಾಲಿನ ಪದ್ಮಭೂಷಣ ಪ್ರಶಸ್ತಿಗಾಗಿ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಹೆಸರನ್ನು ಕೇಂದ್ರ ಕ್ರೀಡಾ ಇಲಾಖೆ ಶಿಫಾರಸ್ಸು ಮಾಡಿದೆ.

ಈ ಕುರಿತಂತೆ ಸೋಮವಾರ ನಡೆದ ಕ್ರೀಡಾ ಸಚಿವಾಯಲದ ಉನ್ನತ ಮಟ್ಟದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವಾಲಯ, ಪದ್ಮಭೂಷಣ ಪ್ರಶಸ್ತಿಗಾಗಿ ಸೈನಾ ನೆಹ್ವಾಲ್ ಅವರ ಹೆಸರನ್ನು ಶಿಫಾರಸ್ಸು ಮಾಡುವಂತೆ ಜ.3ರಂದು ಭಾರತೀಯ ಬ್ಯಾಡ್ಮಿಂಟನ್  ಸಂಸ್ಥೆ (ಬಿಎಐ) ಅರ್ಜಿಯನ್ನು ಕಳುಹಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೈನಾ ಅವರು ಮಾಡಿರುವ ಸಾಧನೆ ಹಿನ್ನಲೆಯಲ್ಲಿ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸೈನಾ ಹೆಸರನ್ನು ಪ್ರಶಸ್ತಿಗಾಗಿ ಶಿಫಾರಸ್ಸು ಮಾಡಿ ಗೃಹಸಚಿವಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದೆ.

ಬಿಎಐ ಸ್ಪಷ್ಟನೆ: ಏತನ್ಮಧ್ಯೆ ಪದ್ಮಭೂಷಣ ಪ್ರಶಸ್ತಿಗಾಗಿ ಸೈನಾ ಅವರ ಹೆಸರನ್ನು ಶಿಫಾರಸ್ಸು ಮಾಡುವಂತೆ ಬಿಎಐ ಸಲ್ಲಿಸಿದ್ದ ಅರ್ಜಿ ನಿಗದಿತ ಸಮಯದಲ್ಲಿ ಬಂದಿರಲಿಲ್ಲ ಎಂದು ಹೇಳಿದ್ದ ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ ಸೋನಾವಾಲ್ ಅವರ ಹೇಳಿಕೆಯನ್ನು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಅಲ್ಲಗಳೆದಿದೆ. ಕಳೆದ ಆಗಸ್ಟ್‌ನಲ್ಲೇ ತಾವು ಸೈನಾಗೆ ಪದ್ಮಭೂಷಣ ಪ್ರಶಸ್ತಿಗೆ ಪರಿಗಣಿಸುವಂತೆ ಅರ್ಜಿ ಸಲ್ಲಿಸಿರುವುದಾಗಿ ಹೇಳಿರುವ ಬಿಐಎ ಪೂರಕ ದಾಖಲೆ ಬಿಡುಗಡೆಗೊಳಿಸಿದೆ.

ಸುಶೀಲ್ ಸ್ವಾಗತ
ಕೇಂದ್ರ ಕ್ರಮವನ್ನು ಕುಸ್ತಿಪಟು ಸುಶೀಲ್ ಕುಮಾರ್ ಸ್ವಾಗತಿಸಿದ್ದಾರೆ. ಸೈನಾ ಅವರು ಪದ್ಮಭೂಷಣ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಇತ್ತೀಚೆಗೆ ಪದ್ಮಭೂಷಣಕ್ಕಾಗಿ ಸಲ್ಲಿಸಲಾಗಿದ್ದ ತಮ್ಮ ಅರ್ಜಿಯನ್ನು ತಳ್ಳಿ ಹಾಕಿ ಸುಶೀಲ್ ಕುಮಾರ್ ಹೆಸರನ್ನು ಶಿಫಾರಸ್ಸು ಮಾಡಿದ್ದರ ಬಗ್ಗೆ ಸೈನಾ ಅಸಮಾಧಾನ ವ್ಯಕ್ತಪಡಿಸಿದ್ದರು.

Related Stories

No stories found.

Advertisement

X
Kannada Prabha
www.kannadaprabha.com