ಫೈನಲ್‌ಗೆ ಬಿಎಫ್‌ಸಿ

ಪಂದ್ಯದ 28ನೇ ನಿಮಿಷದಲ್ಲಿ ತಂಡದ ಗೋಲು ಖಾತೆ ತೆರೆಯುವಲ್ಲಿ ನೆರವಾಯಿತು...
ಬೆಂಗಳೂರು ಎಫ್‌ಸಿ ತಂಡ
ಬೆಂಗಳೂರು ಎಫ್‌ಸಿ ತಂಡ

ಗೋವಾ: ಆಕ್ರಮಣಕಾಗಿ ಆಟ ಮುಂದುವರೆಸುವ ಮೂಲಕ ಬೆಂಗಳೂರು ಎಫ್‌ಸಿ ತಂಡ ಅತಿಥೇಯ ಸ್ಟೊರ್ಟಿಂಗ್ ಕ್ಲಬ್ ಡಿ ಗೋವಾ ವಿರುದ್ಧದ ಫೆಡರೇಷನ್ ಕಪ್ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಅರ್ಹ ಗೆಲುವು ದಾಖಲಿಸಿತು.

ಶುಕ್ರವಾರ ಫಟೋರ್ಡಾದ ಜವಾಹರಲಾಲ್ ನೆಹಲು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ 3-0 ಗೋಲುಗಳ ಅಂತರದಿಂದ ಜಯಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿತು.

ಬೆಂಗಳೂರು ಎಫ್‌ಸಿ ತಂಡ ಆರಂಭದಿಂದಲೇ ಚುರುಕಿನ ಆಟ ಪ್ರದರ್ಶಿಸುವ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹಾಕಿತು. ಪಂದ್ಯದ 28ನೇ ನಿಮಿಷದಲ್ಲಿ ತಂಡದ ಪ್ರಮುಖ ಸ್ಟ್ರೈಕರ್ ಸೀನ್ ರೂನಿ ದಾಖಲಿಸಿದ ಗೋಲು ತಂಡದ ಗೋಲು ಖಾತೆ ತೆರೆಯುವಲ್ಲಿ ನೆರವಾಯಿತು.

ನಂತರ ಮಿಂಚಿನ ದಾಳಿ ನಡೆಸಿದ ನಾಯಕ ಸುನೀಲ್ ಛೆಟ್ರಿ 37ನೇ ನಿಮಿಷದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ತಂಡದ ಅಂತರವನ್ನು ಹೆಚ್ಚಿಸಿದರು. ಈ ಮೂಲಕ ಪಂದ್ಯದ ಮೊದಲ ಅವಧಿಯಲ್ಲೇ ಬೆಂಗಳೂರು ಎಫ್‌ಸಿ 2-0 ಗೋಲುಗಳ ಅಂತರದ ಮುನ್ನಡೆ ಕಾಯ್ದುಕೊಂಡಿತು.

ಇನ್ನು ಎರಡನೇ ಅವಧಿಯಲ್ಲಿ ಅಂದರೆ 87ನೇ ನಿಮಿಷದಲ್ಲಿ ಯುಗೆನೆ ಗೋಲು ದಾಖಲಿಸಿ ತಂಡವನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದರು. ನಂತರ ಆತಿಥೇಯರು ಪ್ರತಿರೋಧ ತೋರುವ ಪ್ರಯತ್ನ ಮಾಡಿದರೂ ಅಂತಿಮವಾಗಿ ಯಶಸ್ವಿಯಾಗದೇ ಪರಾಭವಗೊಂಡರು.

ಪ್ರಶಸ್ತಿ ಸುತ್ತಿಗೆ ಡೆಂಪೊ: ಇಂದೇ ನಡೆದ ಮೊದಲ ಉಪಾಂತ್ಯದ ಪಂದ್ಯದಲ್ಲಿ ಡೆಂಪೊ ತಂಡ ತನ್ನ ಎದುರಾಳಿ ಸಲ್ಗಾಂವ್‌ಕರ್ ಎಫ್‌ಸಿ ವಿರುದ್ಧ 2-0 ಗೋಲುಗಳಿಂದ ಗೆಲುವು ದಾಖಲಿಸಿ ಫೈನಲ್‌ಗೆ ಪ್ರವೇಶಿಸಿತು.

ಪಂದ್ಯದ ಉಭಯ ಅವಧಿಗಳಲ್ಲಿ ತಲಾ ಒಂದೊಂದು ಗೋಲು ದಾಖಲಿಸಿದ ಡೆಂಪೊ ತಂಡ, ಎದುರಾಳಿ ವಿರುದ್ಧ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಯಿತು.

ಡೆಂಪೊ ಪರ ಮಿಂಚಿನ ಪ್ರದರ್ಶನ ನೀಡಿದ ಟೊಲ್ಗೆ ಒಚ್ಬೆ ಎರಡು ಗೋಲು ದಾಖಲಿಸುವ ಮೂಲಕ ತಂಡದ ಗೆಲುವಿನ ರೂವಾರಿಯಾದರು.

ಪಂದ್ಯದ 11ನೇ ನಿಮಿಷದಲ್ಲಿ ಫ್ರಾನ್ಸಿಸ್ ಫರ್ನಾಂಡೀಸ್ ಅವರು ನೀಡಿದ ಪಾಸ್ ಅನ್ನು ಉತ್ತಮವಾಗಿ ಬಳಸಿಕೊಂಡ ಒಚ್ಬೆ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ನಂತರ 74ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಅಂತರವನ್ನು ಹೆಚ್ಚಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com