ರೈಲಿನಲ್ಲಿ ಕಾಣೆಯಾಗಿದ್ದ ಹಾಕಿ ಆಟಗಾರ್ತಿ ಪತ್ತೆ

ಜನವರಿ 8ರಂದು ರೈಲಿನಲ್ಲಿ ಪ್ರಯಾಣಿಸುವಾಗ ನಾಪತ್ತೆಯಾಗಿದ್ದ ಉತ್ತರ ಪ್ರದೇಶದ ಮೂಲದ ರಾಷ್ಟ್ರಮಟ್ಟದ ಆಟಗಾರ್ತಿ ಕರಿಶ್ಮಾ ಸೊಂಕರ್..
ನಾಪತ್ತೆಯಾಗಿದ್ದ ಹಾಕಿ ಆಟಗಾರ್ತಿ ಕರಿಶ್ಮಾ ಸೊಂಕರ್ (ಸಂಗ್ರಹ ಚಿತ್ರ)
ನಾಪತ್ತೆಯಾಗಿದ್ದ ಹಾಕಿ ಆಟಗಾರ್ತಿ ಕರಿಶ್ಮಾ ಸೊಂಕರ್ (ಸಂಗ್ರಹ ಚಿತ್ರ)

ನವದೆಹಲಿ: ಜನವರಿ 8ರಂದು ರೈಲಿನಲ್ಲಿ ಪ್ರಯಾಣಿಸುವಾಗ ನಾಪತ್ತೆಯಾಗಿದ್ದ ಉತ್ತರ ಪ್ರದೇಶದ ಮೂಲದ 16 ವರ್ಷದ ರಾಷ್ಟ್ರಮಟ್ಟದ ಆಟಗಾರ್ತಿ ಕರಿಶ್ಮಾ ಸೊಂಕರ್ ಮಂಗಳವಾರ ಪತ್ತೆಯಾಗಿದ್ದಾರೆ.

ಕರಿಶ್ಮಾ ಸೊಂಕರ್ ಎಂಬ ಆಟಗಾರ್ತಿ ರಾಂಚಿಯಲ್ಲಿ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ್ದ 17 ವರ್ಷದೊಳಗಿನ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲು ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದು, ಒರೈಲಿ ನಿಲ್ದಾಣದಲ್ಲಿ ಕೆಳಗಿಳಿಯುವಾಗ ಕಾಣೆಯಾಗಿದ್ದರು. ಮಂಗಳವಾರ ಕರಿಶ್ಮಾ ತಮ್ಮ ಪ್ರಿಯತಮ ಶಿವಂ ಕಟಿಯಾರ್‌ನೊಂದಿಗೆ ಫಾರೂಖಾಬಾದ್ ಜಿಲ್ಲೆಯಲ್ಲಿ ಪೊಲೀಸರಿಗೆ ಸಿಕ್ಕಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸ್ಥಳೀಯ ಪೊಲೀಸ್ ಅಧಿಕಾರಿ, ಕರಿಶ್ಮಾ ತಾನು ಪ್ರಾಪ್ತ ವಯಸ್ಸಿನವಳಾಗಿದ್ದು, ಶಿವಂ ಜತೆ ಜೀವನ ನಡೆಸಬೇಕು ಎಂದು ಕೇಳಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಜ.8ರಂದು ಕರಿಶ್ಮಾ ರೈಲಿನಿಂದ ಕೆಳಗಿಳಿದು ನಿಲ್ದಾಣದ ಹೊರಗೆ ಬಂದಾಗ ಕಾಣಿಸಲಿಲ್ಲ. ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಹುಡುಕಿದ ನಂತರ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದೆವು ಎಂದು ಕರಿಶ್ಮಾ ಸಹೋದರ ಸೌರಬ್ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com