ಕರ್ನಾಟಕಕ್ಕೆ ಭಾರಿ ಮೇಲುಗೈ

ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆ ಹಾಗೂ ಕೆಳಕ್ರಮಾಂಕದಲ್ಲಿ ಶ್ರೇಯಸ್ ಗೋಪಾಲ್...
ಮನೀಷ್ ಪಾಂಡೆ
ಮನೀಷ್ ಪಾಂಡೆ

ಇಂದೋರ್: ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆ ಹಾಗೂ ಕೆಳಕ್ರಮಾಂಕದಲ್ಲಿ ಶ್ರೇಯಸ್ ಗೋಪಾಲ್ ದಾಖಲಿಸಿದ ಅಮೋಘ ಶತಗಳ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಧ್ಯಪ್ರದೇಶದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.

ಹೋಲ್ಕರ್ ಮೈದಾನದಲ್ಲಿ ನಡೆಯುತ್ತಿರುವ 'ಎ' ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶದ ಮೊದಲ ಇನಿಂಗ್ಸ್‌ನ 303 ರನ್‌ಗಳಿಗೆ ಉತ್ತರವಾಗಿ ಕರ್ನಾಟಕ, ಗುರುವಾರ ಮೂರನೇ ದಿನದಾಟ ನಿಂತಾಗ ತನ್ನ ಮೊದಲ ಸರದಿಯಲ್ಲಿ 8 ವಿಕೆಟ್ ನಷ್ಟಕ್ಕೆ 516 ರನ್‌ಗಳಿಸಿತ್ತು. ಆ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 213 ರನ್‌ಗಳ ಮುನ್ನಡೆ ಸಾಧಿಸಿತ್ತು.

ಶುಕ್ರವಾರ ಅಂತಿಮ ದಿನವಾಗಿದ್ದು, ಪಂದ್ಯ ಡ್ರಾಗೊಂಡರೂ ಕರ್ನಾಟಕ ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ 3 ಅಂಕ ಪಡೆಯಲಿದೆ. ಒಂದು ವೇಳೆ ಕರ್ನಾಟಕ, ಈಗಿರುವ ಮೊತ್ತಕ್ಕೆ ಡಿಕ್ಲೇರ್ ಘೋಷಿಸಿದರೆ, ಎದುರಾಳಿಯನ್ನು ಅಂತಿಮ ದಿನದಾಟದಲ್ಲಿ 213 ರನ್‌ಗಳೊಳಗೆ ಆಲೌಟ್ ಮಾಡಿದರೆ, ಇನಿಂಗ್ಸ್ ಅಂತರದಲ್ಲಿ ಜಯ ಸಾಧಿಸಿ 1 ಬೋನಸ್ ಅಂಕವನ್ನೂ ಪಡೆದುಕೊಳ್ಳು ಉತ್ತಮ ಅವಕಾಶವೂ ಇದೆ.

ಎರಡನೇ ದಿನದ ಮೊತ್ತ 3 ವಿಕೆಟ್‌ಗೆ 214 ರನ್‌ಗಳೊಂದಿಗೆ ಮೂರನೇ ದಿನದಾಟ ಮುಂದುವರಿಸಿದ ಕರ್ನಾಟಕದ ಆಟಗಾರರು ದಿಟ್ಟ ಬ್ಯಾಟಿಂಗ್ ಅನ್ನೇ ಪ್ರದರ್ಶಿಸಿದರು. ಮನೀಷ್ ಪಾಂಡೆ ಜೊತೆ ಆಟ ಮಂದುವರಿಸಿದ ಕರುಣ್ ನಾಯರ್, ಮತ್ತೆ ತಮ್ಮ ವೈಯಕ್ತಿಕ ಮೊತ್ತಕ್ಕೆ ಕೇವಲ 6 ರನ್ ಸೇರಿಸುವಷ್ಟರದಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ವಿಕೆಟ್ ಕೀಪರ್ ಸಿ.ಎಂ ಗೌತಮ್(5) ನಿರ್ಗಮಿಸಿದಾಗ ಕರ್ನಾಟಕದ ಮೊತ್ತ 5 ವಿಕೆಟ್‌ಗೆ 236 ರನ್‌ಗಳಾಗಿತ್ತು. ಈ ಹಂತದಲ್ಲಿ ಒಂದು ಕ್ಷಣ, ಕರ್ನಾಟಕಕ್ಕೆ ಮುನ್ನಡೆ ದೊರೆಯುವುದೇ ಎಂಬ ಆತಂಕ ಮೂಡಿತ್ತು. ಆದರೆ, ಪಾಂಡೆ ಜೊತೆಗೂಡಿದ ಶ್ರೇಯಸ್ ಗೋಪಾಲ್, ಆತಿಥೇಯರನ್ನು ಗೋಳುಹೊಯ್ದುಕೊಳ್ಳುವ ಮೂಲಕ ಪಂದ್ಯದ ಮೇಲೆ ಕರ್ನಾಟಕ ಬಿಗಿಹಿಡಿತ ಸಾಧಿಸುವಂತೆ ಮಾಡಿದರು. ಪಾಂಡೆ ಮತ್ತು ಶ್ರೇಯಸ್, ಆರನೇ ವಿಕೆಟ್ ಜೊತೆಯಾಟದಲ್ಲಿ 198 ರನ್‌ಗಳಿಸಿ ಕರ್ನಾಟಕಕ್ಕೆ ಮುನ್ನಡೆ ತಂದುಕೊಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com