ಜೈಶಾ ದಾಖಲೆ, ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ

ಭಾರತದ ಓಟಗಾರ್ತಿ ಒ.ಪಿ ಜೈಶಾ ರಾಷ್ಟ್ರೀಯ ದಾಖಲೆ ಮುರಿಯುವ ಮೂಲಕ ಮ್ಯಾರಥಾನ್‌ಗೆ ಪದಾರ್ಪಣೆ ಮಾಡಿದ್ದಾರೆ.
ಸುಧಾ ಸಿಂಗ್, ಒ.ಪಿ ಜೈಶಾ, ಲಲಿತಾ ಬಬರ್
ಸುಧಾ ಸಿಂಗ್, ಒ.ಪಿ ಜೈಶಾ, ಲಲಿತಾ ಬಬರ್

ಮುಂಬೈ: ಭಾರತದ ಓಟಗಾರ್ತಿ ಒ.ಪಿ ಜೈಶಾ ರಾಷ್ಟ್ರೀಯ ದಾಖಲೆ ಮುರಿಯುವ ಮೂಲಕ ಮ್ಯಾರಥಾನ್‌ಗೆ ಪದಾರ್ಪಣೆ ಮಾಡಿದ್ದಾರೆ. ಈ ಮೂಲಕ ಜೈಶಾ ಇದೇ ವರ್ಷ ಬೀಜಿಂಗ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ.

ಭಾನುವಾರ ನಡೆದ 12ನೇ ಸ್ಟಾಂಡರ್ಡ್ ಚಾಟರ್ಡ್ ಮುಂಬೈ ಮ್ಯಾರಥಾನ್‌ನ ಭಾರತೀಯ ಮಹಿಳೆಯರ ವಿಭಾಗದಲ್ಲಿ ಭಾಗವಹಿಸಿದ್ದ ಜೈಶಾ 2 ಗಂಟೆ 37 ನಿಮಿಷ ಮತ್ತು 29 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ 19 ವರ್ಷಗಳ ಈ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

1995ರ ಡಿ. 21ರಂದು ಚೆನ್ನೈನಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಸತ್ಯಭಾಮ ಅವರ ದಾಖಲೆ ಮುರಿದರು. ಅಲ್ಲದೆ ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆಯು ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಫೆಡರೇಷನ್ ಪರವಾಗಿ ನಿಗದಿ ಪಡಿಸಿದ್ದ 2:44 ಗಂಟೆಗಳ ಕಾಲಾವಧಿಯಲ್ಲಿ ಗುರಿ ತಲುಪುವ ಮೂಲಕ ಅಗ್ರ ಸ್ಥಾನ ಪಡೆದು ವಿಶ್ವ ಚಾಂಪಿಯನ್ ಶಿಪ್‌ಗೆ ಅರ್ಹತೆ ಪಡೆದರು.

ಜೈಶಾ ಜತೆಗೆ ಲಲಿತಾ ಬಬರ್(2:38:21) ದ್ವಿತೀಯ ಸ್ಥಾನ ಹಾಗೂ ಸುಧಾ ಸಿಂಗ್(2:24:12) ತೃತೀಯ ಸ್ಥಾನ ಪಡೆದರು. ಈ ಮೂಲಕ ಈ ಇಬ್ಬರೂ ಓಟಗಾರ್ತಿಯರೂ ಸಹ ನಿಗದಿತ ಅವಧಿಯಲ್ಲಿ ಗುರಿ ತಲುಪಿ ವಿಶ್ವಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದರು.

ಇನ್ನು ಪ್ರಮುಖ ರೇಸ್‌ನ ಪುರುಷರ ವಿಭಾಗದಲ್ಲಿ ಇಥೋಪಿಯಾದ ತೆಸ್‌ಫಯೆ ಅಬೆರಾ(2:9:46) ಹಾಗೂ ಮಹಿಳೆಯರ ವಿಭಾಗದಲ್ಲಿ ಹಾಲಿ ಚಾಂಪಿಯನ್ ಡಿಂಕನೇಶ್ ಮೆಕಾನ್(2:30:00) ಚಾಂಪಿಯನ್ ಆಗಿ ಹೊರ ಹೊಮ್ಮಿದರು.
 
ಭಾರತೀಯ ಪುರುಷರ ವಿಭಾಗದಲ್ಲಿ ಕಳೆದ ವರ್ಷ ಅಗ್ರಸ್ಥಾನ ಪಡೆದಿದ್ದ ಕರಣ್ ಸಿಂಗ್(2:21:35) ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com