ವಿಶ್ವ ಕಪ್ ಮೆಲುಕು: ಅಭ್ಯಾಸ ಪಂದ್ಯಗಳು 8ರಿಂದ

ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯಗಳು ಫೆಬ್ರವರಿ 8ರಿಂದ ಆರಂಭವಾಗಲಿವೆ . ಫೆ 8ರಿಂದ
1987 ವಿಶ್ವಕಪ್  ಚಾಂಪಿಯನ್  ಆಸ್ಟ್ರೇಲಿಯಾ ತಂಡ
1987 ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ತಂಡ
Updated on

ಸಿಡ್ನಿ: ಮುಂದಿನ ತಿಂಗಳು ಆರಂಭವಾಗಲಿರುವ  ಐಸಿಸಿ ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯಗಳು ಫೆಬ್ರವರಿ 8ರಿಂದ ಆರಂಭವಾಗಲಿವೆ . ಫೆ 8ರಿಂದ 13ರ ವರೆಗೆ  14 ಅಭ್ಯಾಸ ಪಂದ್ಯಗಳು ನಡೆಯಲಿವೆ.

ಭಾರತ ತಂಡ  ಫೆ. ೮ ರಂದು ಅಡಿಲೆಡ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.
ಇನ್ನು ಫೆ .10ರಂದು ಇದೇ ಅಂಗಣದಲ್ಲಿ ಅಫಘಾನಿಸ್ತಾನ  ವಿರುದ್ಧ ಸೆಣಸಲಿದೆ.
ಈ ಅಭ್ಯಾಸ ಪಂದ್ಯಗಳು ಟೂರ್ನಿಗಾಗಿ ತಂಡಗಳಿಗೆ ತಾಲೀಮು ನಡೆಸಲು ಉತ್ತಮ ವೇದಿಕೆಯಾಗಲಿದೆ. ಪಂದ್ಯದಲ್ಲಿ ತಂಡದ  15 ಆಟಗಾರರೂ ಸಹ  ಕಣದಲ್ಲಿ
ಆಡ ಬಹುದಾಗಿದ್ದು, ಆದ್ರೆ ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ವೇಳೆ 11 ಆಟಗಾರರು ಆಡಬಹುದಾಗಿದೆ. ಈ ಅಭ್ಯಾಸಪಂದ್ಯಗಳು ಅಡಿಲೇಡ್, ಕ್ರೈಸ್ಟ್‍ಚರ್ಚ್, ಮೆಲ್ಬರ್ನ್,ಸಿಡ್ನಿಯಲ್ಲಿ ನಡೆಯಲಿವೆ.


ಕಾಂಗರೂಗಳ ಕಾರುಬಾರು
ಇಂಗ್ಲೆಂಡ್ ಹೊರತಾಗಿ ಮೊದಲ ಬಾರಿಗೆ ಬೇರೆ ದೇಶದಲ್ಲಿ ನಡೆದದ್ದು ವಿಶ್ವಕಪ್ 4ನೇ ಆವೃತ್ತಿ.
ಇದರ ಆತಿಥ್ಯ ವಹಿಸಿದ್ದು ಭಾರತ, ಪಾಕಿಸ್ತಾನ. ಟೂರ್ನಿಗೆ ರಿಲಯನ್ಸ್ ಕಂಪನಿ ಪ್ರಾಯೋಜಕತ್ವ ವಹಿಸಿದ ಹಿನ್ನೆಲೆಯಲ್ಲಿ ಈ ಪಂದ್ಯಾವಳಿಯನ್ನು ರಿಲಯನ್ಸ್ ಕಪ್ ಎಂದು ಕರೆಯಲಾಗಿತ್ತು.
ಅಲ್ಲದೆ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆ 8ಕ್ಕೆ ನಿಗದಿಗೊಳಿಸಲಾಗಿತ್ತು.
ಅಲ್ಲದೆ, ಓವರ್‍ಗಳ ಮಿತಿಯನ್ನು 50 ಓವರ್‍ಗೆ ಇಳಿಸಲಾಗಿತ್ತು. ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಪ್ರಶಸ್ತಿ ಸುತ್ತಿನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಸೆಣೆಸಿದ್ದವು.
ಆಸ್ಟ್ರೇಲಿಯಾ  7ರನ್‍ಗಳ ರೋಚಕ ಗೆಲವು ದಾಖಲಿಸಿ ಮೊದಲ ಬಾರಿಗೆ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿತು. ಆಟಗಾರರು ಬಿಳಿ ಸಮವಸ್ತ್ರದಲ್ಲಿ ವಿಶ್ವಕಪ್ ಆಡಿದ್ದು ಇದೇ ಕೊನೆ.ಈ ಟೂರ್ನಿಯಲ್ಲಿ ಇಂಗ್ಲೆಂಡ್‍ನ ಗ್ರಾಹಮ್  ಗೂಚ್ (471) ಅತಿ ಹೆಚ್ಚು ರನ್ ದಾಖಲಿಸಿದ ಆಟಗಾರನಾದರೆ, ಆಸ್ಟ್ರೇಲಿಯಾದ ಕ್ರೇಗ್ ಮೆಕ್‍ಡೆರ್ಮೊಟ್ (18) ಅತಿ ಹೆಚ್ಚು ವಿಕೆಟ್ ಪಡೆದ  ಆಟಗಾರನಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com