ಕಾಂಗರೂ ಫೈನಲ್ ಜಿಗಿತ

ನಾಯಕ ಸ್ಟೀವನ್ ಸ್ಮಿತ್ (ಅಜೇಯ 102 ರನ್, 95 ಎಸೆತ, 6 ಬೌಂಡರಿ, 1 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ...
ಆಸ್ಟ್ರೇಲಿಯಾ ತಂಡ
ಆಸ್ಟ್ರೇಲಿಯಾ ತಂಡ

ಹೊಬರ್ಟ್: ನಾಯಕ ಸ್ಟೀವನ್ ಸ್ಮಿತ್ (ಅಜೇಯ 102 ರನ್, 95 ಎಸೆತ, 6 ಬೌಂಡರಿ, 1 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ತ್ರಿಕೋನ ಏಕದಿನ ಸರಣಿಯ ಪಂದ್ಯದಲ್ಲಿ ಗೆಲವು ದಾಖಲಿಸಿದೆ.ಶುಕ್ರವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾತಂಡ ಇಂಗ್ಲೆಂಡ್ ವಿರುದ್ಧ 3 ವಿಕೆಟ್‍ಗಳ ಜಯ ಸಂಪಾದಿಸಿದೆ. ಈ ಮೂಲಕ ಆಡಿರುವ ಮೂರು ಪಂದ್ಯಗಳಿಂದ 13 ಅಂಕ ಸಂಪಾದಿಸಿದ್ದು, ಸರಣಿಯ  ಫೈನಲ್ ಸುತ್ತಿಗೆ ಪ್ರವೇಶಿಸಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ  ತಂಡ ಮೊದಲು ಫೀಲ್ಡಿಂಗ್  ಆಯ್ಕೆ ಮಾಡಿಕೊಂಡಿತು. ಆಗ ಬ್ಯಾಟಿಂಗ್‍ಗೆ ಇಳಿದ ಆಂಗ್ಲರು ಆರಂಬಿsಕ ಇಯಾನ್ ಬೆಲ್ (141 ರನ್, 125 ಎಸೆತ, 15 ಬೌಂಡರಿ, 1ಸಿಕ್ಸರ್) ಅವರ ಆಕರ್ಷಕ ಶತಕದ ನೆರವಿನಿಂದ 50 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 303 ರನ್ ದಾಖಲಿಸಿದರು.
ಈ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ  ತಂಡ ನಾಯಕ ಸ್ಟೀವನ್ ಸ್ಮಿತ್ ಶತಕದ ನೆರವಿನಿಂದ 49.5 ಓವರ್‍ಗಳಲ್ಲಿ 7 ವಿಕೆಟ್ ಗೆ 304 ರನ್ ದಾಖಲಿಸಿ ಗೆಲವಿನ ದಡ ಸೇರಿತು. ಈ ಮೂಲಕ ಆಸ್ಟ್ರೇಲಿಯಾ  ಆಡಿರುವ ಮೂರು ಪಂದ್ಯದಲ್ಲಿ ಗೆಲವು ದಾಖಲಿಸಿ ಅಜೇಯವಾಗುಳಿದಿದೆ.

ಮೊಯೀನ್ ಸಿ ದೊಹಾರ್ಟಿ ಬಿ ಫಾಲ್‍ಕ್ನರ್ 46,ಬೆಲ್ ಸಿ ಸ್ಟಾರ್ಕ್ ಬಿ ಸಂಧು 141, ಟೇಲರ್ ಸಿ ಫಾಲ್‍ಕ್ನರ್ ಬಿ ಹೆನ್ರಿಕ್ಸ್ 5, ರೂಟ್ ಸಿ ಪೀಜಿಚ್ ಬಿ ಕಮಿನ್ಸ್ 69, ಮೊರ್ಗನ್ ಸಿ ಹ್ಯಾಡಿನ್ ಬಿ ಸಂಧು 0, ಬಟ್ಲರ್ ರನೌಟ್ (ಹ್ಯಾಡಿನ್) 25, ಬೊಪಾರ ಬಿ ಸ್ಟಾರ್ಕ್ 7, ವೊಕ್ಸ್ ರನೌಟ್ (ಹ್ಯಾಡಿನ್) 0, ಬ್ರಾಡ್ ಅಜೇಯ 0, ಇತರೆ: (ಬೈ 1, ಲೆಗ್‍ಬೈ 4, ವೈಡ್ 5) 10.
ವಿಕೆಟ್ ಪತನ: 1--113, 2--132, 3--253, 4--254, 5--275, 6--303, 7--303, 8--303.
ಬೌಲಿಂಗ್ ವಿವರ: ಸ್ಟಾರ್ಕ್ 10-0-60-1, ಕಮಿನ್ಸ್ 10-0-74-1, ಸಂಧು 10-0-49-2, ಮ್ಯಾಕ್ಸ್‍ವೆಲ್ 3-0-22-0, ಫಾಲ್‍ಕ್ನರ್  10-0-59-1, ಹೆನ್ರಿಕ್ಸ್ 7-0-34-1.
ಆಸ್ಟ್ರೇಲಿಯಾ 49.5 ಓವರ್‍ಗಳಲ್ಲಿ 7 ವಿಕೆಟ್‍ಗೆ 304 ಫೀಜಿಚ್ ಬಿ ಅಲಿ 32, ಮಾರ್ಷ್ ಸಿ ಬೆಲ್ ಬಿ ಪಿsನ್ 45, ಸ್ಮಿತ್ ಅಜೇಯ 102, ವೈಟ್ ಎಲ್‍ಬಿ ಪಿsನ್ 0, ಮ್ಯಾಕ್ಸ್‍ವೆಲ್ ಸಿ
ರೂಟ್ ಬಿ ಅಲಿ 37, ಫಾಲ್‍ ಸಿ ಬೆಲ್ ಬಿ ವೊಕ್ಸ್ 35, ಹ್ಯಾಡಿನ್ ಸಿ ಬೆಲ್ ಬಿ ವೊಕ್ಸ್ 42, ಹೆನ್ರಿಕ್ಸ್ ರನೌಟ್
(ಟೇಲರ್) 4, ಸ್ಟಾರ್ಕ್ ಅಜೇಯ 1, ಇತರೆ: (ಲೆಗ್‍ಬೈ 3, ವೈಡ್ 3) 6.
ವಿಕೆಟ್ ಪತನ: 1--76, 2--92, 3--92, 4--161, 5--216, 6--297, 7--302.
ಬೌಲಿಂಗ್ ವಿವರ: ವೊಕ್ಸ್ 9.5-0-58-2, ಆ್ಯಂಡರ್ಸನ್ 10-0-56-0, ಬ್ರಾಡ್ 9-0-61-0, ಅಲಿ 10-0-50-2, ಪಿನ್ 10-0-65-2, ಬೊಪಾರ 1-0-11-0.
ಪಂದ್ಯಶ್ರೇಷ್ಠ: ಸ್ಟೀವನ್ ಸ್ಮಿತ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com