ಫೆ. 6ರಿಂದ ರಾಷ್ಟ್ರೀಯ ಮಟ್ಟದ ಥ್ರೋಬಾಲ್ ಟೂರ್ನಿ

ಪ್ರಥಮ ಬಾರಿಗೆ ರಾಷ್ಟ್ರಮಟ್ಟದ 37ನೇ ಪುರುಷ ಹಾಗೂ ಮಹಿಳೆಯರ ಹೊನಲು-ಬೆಳಕಿನ ಥ್ರೋಬಾಲ್ ಪಂದ್ಯಾವಳಿ..
ಥ್ರೋಬಾಲ್ ಪಂದ್ಯಾವಳಿ (ಸಾಂದರ್ಭಿಕ ಚಿತ್ರ)
ಥ್ರೋಬಾಲ್ ಪಂದ್ಯಾವಳಿ (ಸಾಂದರ್ಭಿಕ ಚಿತ್ರ)

ಧಾರವಾಡ: ಪ್ರಥಮ ಬಾರಿಗೆ ರಾಷ್ಟ್ರಮಟ್ಟದ 37ನೇ ಪುರುಷ ಹಾಗೂ ಮಹಿಳೆಯರ ಹೊನಲು-ಬೆಳಕಿನ ಥ್ರೋಬಾಲ್ ಪಂದ್ಯಾವಳಿ ಫೆಬ್ರವರಿ 6ರಿಂದ ಮೂರು ದಿನಗಳ ಕಾಲ ಧಾರವಾಡದಲ್ಲಿ ನಡೆಯಲಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಥ್ರೋಬಾಲ್ ಸಂಸ್ಥೆ ಅಧ್ಯಕ್ಷ ಶರಣಪ್ಪ ಕೊಟಗಿ, ಧಾರವಾಡ ಪೊಲೀಸ್ ಹೆಡ್ ಕ್ವಾರ್ಟರ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ 28 ರಾಜ್ಯಗಳಿಂದ 56 ಪುರುಷ ಹಾಗೂ ಮಹಿಳಾ ತಂಡಗಳು ಸೇರಿದಂತೆ ಸುಮಾರು 700 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದರು.

ಥ್ರೋಬಾಲ್ ಲಾಂಛನ ಅನಾವರ ಣಗೊಳಿಸಿದ ರಾಜ್ಯ ಥ್ರೋಬಾಲ್ ಸಂಸ್ಥೆ ಕಾರ್ಯದರ್ಶಿ ಟಿ. ರಾಮಣ್ಣ ಮಾತನಾಡಿ, ಪಂದ್ಯಾವಳಿ ಲೀಗ್ ಕಂ ನಾಕೌಟ್ ಮಾದರಿಯಲ್ಲಿ ನಡೆಯಲಿದೆ ಎಂದರು.

ಜಿಲ್ಲಾ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಪಿ.ಎಚ್. ನೀರಲಕೇರಿ ಮಾತನಾಡಿ, ಯುವ ಆಟಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಥ್ರೋಬಾಲ್ ಪಂದ್ಯವನ್ನು ಆಯೋಜಿಸಲಾಗುತ್ತಿದೆ. ಸ್ಥಳೀಯ ಯುವ ಆಟಗಾರರು ಥ್ರೋಬಾಲ್ ಕ್ರೀಡೆಯಲ್ಲಿ ಹೆಚ್ಚಾಗಿ ಪಾಲ್ಗೊಳ್ಳಲು ಅವಕಾಶ ನೀಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com