ಮೂರನೇ ಏಕದಿನ ಪಂದ್ಯ: ಪ್ರವಾಸಿ ಕಿವೀಸ್ ಗೆ 6 ವಿಕೆಟ್ ಭರ್ಜರಿ ಜಯ

ತವರಿನಲ್ಲಿ ಮತ್ತೊಮ್ಮೆ ಮುಗ್ಗರಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ ಪ್ರವಾಸಿ ನ್ಯೂಜಿಲೆಂಡ್ ವನಿತಾ ತಂಡದೆದುರು ಇನ್ನೊಮ್ಮೆ ಮುಖಭಂಗ ಅನುಭವಿಸಿದೆ...
ಭಾರತ ಮಹಿಳಾ ಕ್ರಿಕೆಟ್ ತಂಡ
ಭಾರತ ಮಹಿಳಾ ಕ್ರಿಕೆಟ್ ತಂಡ
Updated on

ಬೆಂಗಳೂರು: ತವರಿನಲ್ಲಿ ಮತ್ತೊಮ್ಮೆ ಮುಗ್ಗರಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ ಪ್ರವಾಸಿ ನ್ಯೂಜಿಲೆಂಡ್ ವನಿತಾ ತಂಡದೆದುರು ಇನ್ನೊಮ್ಮೆ ಮುಖಭಂಗ ಅನುಭವಿಸಿದೆ.

ಶುಕ್ರವಾರ ಚಿನ್ನಸ್ವಾಮಿ  ಕ್ರೀಡಾಂಗಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ  ಸಂಘಟನಾತ್ಮಕ  ಪ್ರದರ್ಶನ ನೀಡಿದ ಪ್ರವಾಸಿ ಕಿವೀಸ್  6 ವಿಕೆಟ್ ಗಳ ಭರ್ಜರಿ ಗೆಲುವಿನೊಂದಿಗೆ ಐಸಿಸಿ ಮಹಿಳಾ ರ್ಯಾಂಕಿಂಗ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿಯಿತು.  ಆದರೆ ಅನಿರೀಕ್ಷಿತ ಸೋಲಿನಿಂದ ಕಂಗೆಟ್ಟ ಮಿಥಾಲಿ ರಾಜ್ ನಾಯಕತ್ವದ ಭಾರತ ತಂಡ ಕೊನೆ ಸ್ಥಾನದಲ್ಲೇ ಪವಡಿಸಿದೆ. ಇದೀಗ ಸೋಮವಾರ ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ ಗೆಲ್ಲಲು  183 ರನ್ ಗುರಿ ಪಡೆದ ಕಿವೀಸ್ , ಇನ್ನೂ 26 ಎಸೆತಗಳು ಬಾಕಿ ಇರುವಂತೆಯೇ, ಅಂದರೆ 45.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 186 ರನ್ ಕಲೆ ಹಾಕಿ ಜಯಶಾಲಿಯಾಯಿತು.

ನಾಯಕಿ ಹಾಗೂ ಆರಂಭಿಕ ಆಟಗಾರ್ತಿ ಸುಜಿ ಬೇಟ್ಸ್ ಹಾಗೂ ರಾಖೇಲ್ ಪ್ರೀಸ್ಟ್ ಮೊದಲ ವಿಕೆಟ್ ಗೆ ಅಮೋಘ 125 ರನ್ ಗಳ ಜೊತೆಯಾಟವಾಡಿ ತಂಡದ ಗೆಲುವಿಗೆ ಭದ್ರ ಅಡಿಪಾಯ ಹಾಕಿದರು. ಈ ಇಬ್ಬರು ಆಟಗಾರ್ತಿಯರ ನಿರ್ಗಮನದ ನಂತರ ತಂಡ ಅಷ್ಟೇನೂ ತಡವರಿಸಿದೇ ಸುನಾಯಾಸವಾಗಿ ಗೆಲುವಿನ ದಡ ಮುಟ್ಟಿತ್ತು, ಮ್ಯಾಡಿ ಗ್ರೀನ್ ಮತ್ತು ಸೋಫಿ ಡೆವಿನಿ 17 ರನ್ ಗಳಿಸಿ ಔಟಾದರೇ, ಏಮಿ ಸ್ಯಾಟರ್ ವೈಟ್ ಹಾಗೂ ಕ್ಯಾಟಿ ಪರ್ಕಿನ್ಸ್ 4 ರನ್ ಗಳಿಸಿ ಅಜೇಯರಾಗುಳಿದರು.

ಭಾರತದ ಪರ ಗೋಸ್ವಾಮಿ (28ಕ್ಕೆ 1), ಏಕ್ತಾಬಿಷ್ತ್ (36ಕ್ಕೆ ), ದೀಪ್ತಿ ಶರ್ಮಾ (38ಕ್ಕೆ 1) ಹಾಗೂ ಹರ್ಮನ್ ಪ್ರೀತ್ ಕೌರ್ 14 ಕ್ಕೆ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ವನಿತಾ ತಂಡ, ವೇದಾ ಕೃಷ್ಣಮೂರ್ತಿ ಅವರ ಶತಕದ ನೆರವಿನಿಂದ ಆರಂಭಿಕ ಹಂತದ ದಾಳಿಯನ್ನು ಯಶಸ್ವಿಯಾಗಿ ಮೆಟ್ಟಿನಿಂತು 50 ಓವರ್ ಗಳಲ್ಲಿ 9 ವಿಕೆಟ್ ಗೆ  182 ರನ್ ಗಳಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com