ಹೌರಾ ಪಾಲಿಕೆಯಲ್ಲಿ ಕಸ ಗುಡಿಸುತ್ತಿರುವ ಸ್ವರ್ಣ ಪದಕ ವಿಜೇತ ಬಾಕ್ಸರ್!

ಬಂಗಾರದ ಪದಕವನ್ನು ಸ್ಪರ್ಷಿಸಿದ್ದ ಕೈಗಳು ಈಗ ಕಸ ಗುಡಿಸುತ್ತಿರುವುದನ್ನು ನೋಡಿದರೆ ನಮ್ಮ ದೇಶದಲ್ಲಿ ಕ್ರೀಡಾಳುಗಳನ್ನು ನಡೆಸಿಕೊಳ್ಳುವ ಪರಿ ಬೇಸರ ತರಿಸುತ್ತದೆ.
ಕೃಷ್ಣಾ ರಾವುತ್
ಕೃಷ್ಣಾ ರಾವುತ್

ಕೊಲ್ಕತ್ತಾ: ಪ್ರತಿದಿನ ಮುಂಜಾನೆ ಈತನಿಗೆ ಹಾದಿಬೀದಿಗಳೇ ಕಾರ್ಯಸ್ಥಾನ. ಅಲ್ಲಿನ ಕಸವೇ ಈತನಿಗೆ ವರದಾನ. ಕೈಯಲ್ಲಿ ಹಿಡಿಯುವ ಪೊರಕೆಯೇ ಇಂದು ಅನ್ನದಾತ. ಆದರೆ ಒಂದು ಕಾಲದಲ್ಲಿ ಬಂಗಾರದ ಪದಕವನ್ನು ಸ್ಪರ್ಷಿಸಿದ್ದ ಕೈಗಳು ಈಗ ಕಸ ಗುಡಿಸುತ್ತಿರುವುದನ್ನು ನೋಡಿದರೆ ನಮ್ಮ ದೇಶದಲ್ಲಿ ಕ್ರೀಡಾಳುಗಳನ್ನು ನಡೆಸಿಕೊಳ್ಳುವ ಪರಿ ಬೇಸರ ತರಿಸುತ್ತದೆ.

ಈತನ ಹೆಸರು ಕೃಷ್ಣಾ ರಾವುತ್. ಹಿಂದೊಮ್ಮೆ ರಾಷ್ಟ್ರಮಟ್ಟದ ಬಾಕ್ಸರ್. ಒಂದು ಕಾಲದಲ್ಲಿ ರಾಷ್ಟ್ರೀಯ ಚಾಂಪಿಯನ್, ಆದರೀಗ, ಪಶ್ಚಿಮ ಬಂಗಾಳದ ಹೌರಾ ಮಹಾನಗರ ಪಾಲಿಕೆಯಲ್ಲಿ ಡಿ ಗ್ರೂಪ್ ನೌಕರ. ಹೌರಾ ಜಿಲ್ಲೆಯ ಶಿವಪುರದಲ್ಲಿ ಬಾಗಡೀಪರಾ ಎಂಬ ಪ್ರದೇಶದಲ್ಲಿ ಒಂದು ರೂಮಿನ ಮನೆಯಲ್ಲಿ ವಾಸವಿರುವ ಇರುವ ಇವರು, ಪತ್ನಿ, ಮೂವರು ಮಕ್ಕಳು 70 ವರ್ಷ ದಾಟಿದ ತಾಯಿ ಹಾಗೂ ಒಬ್ಬ ಸಹೋದರನೊಟ್ಟಿಗೆ ಜೀವನ ನಡೆಸುತ್ತಿದ್ದಾರೆ.

ಸ್ಥಳೀಯ ಆರೋಗ್ಯ ಸಂಸ್ಥೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಓರ್ವ ಪೌರ ಕಾರ್ಮಿಕನಗಿ ನಿಯುಕ್ತಿಯಾಗಿರುವ ಅವರು, ದಿನಕ್ಕೆ ರೂ 232  ಕೂಲಿ ಗಳಿಸುತ್ತಾರೆ. ಆದರೆ ಹೌರಾ ಜಿಲ್ಲೆಯಲ್ಲಿ ಎರಡು ಹೊತ್ತಿನ ಊಟಕ್ಕೂ  ಇದು ಸಾಕಾಗುವುದಿಲ್ಲ. ಹಾಗಾಗಿ ಕುಟುಂಬದ ಇತರ ಖರ್ಚುವೆಚ್ಚಗಳನ್ನು ಭರಿಸಲು ಇವರಿಗೆ ಕಷ್ಟವಾಗುತ್ತಿದೆ.

10 ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಕೃಷ್ಣಾ ರಾವುತ್ ಗೆ ಇಡಿ ಕುಟುಂಬ ನಿರ್ವಹಣೆಯ ಭಾರ ಹೆಗಲ ಮೇಲೆ ಬಿಟ್ಟು. ಇದೇ ಕಾರಣಕ್ಕಾಗಿ ತಮ್ಮ ಓದಿಗೆ ಇತಿಶ್ರೀ ಹಾಡಬೇಕಾಯಿತು. ಈ ಸಂಕಷ್ಟಗಳ ನಡುವೆಯೂ ಓರ್ವ ಬಾಕ್ಸರ್ ಆಗಿ ಬೆಳೆದ ಅವರು 1987 ರಲ್ಲಿ ನಡೆದಿದ್ದ ಅಖಿಲ ಭಾರತ ಆಹ್ವಾನಿತ ಚಾಂಪಿಯನ್ ಶಿಪ್ ನಲ್ಲಿ ಸ್ವರ್ಣ ಪದಕ ಗೆದ್ದಿದ್ದರು ಇಷ್ಟೇ ಅಲ್ಲದೇ 1992 ರಲ್ಲಿ ರನ್ನರ್ ಅಪ್ ಪ್ರಶಸ್ತಿಗೂ ಭಾಜನರಾಗಿದ್ದರು. ಅದಕ್ಕೂ ಮುನ್ನ ಹಲವಾರು ರಾಜ್ಯಮಟ್ಟದ ಕ್ರೀಡಾಕೂತಗಳಲ್ಲಿ ಪದಕ ಸಾಧನೆ ಮಾಡಿದ್ದಾರೆ.

ಆದರೆ ಮನೆಯಲ್ಲಿನ ಕಿತ್ತು ತಿನ್ನುವ ಬಡತನ ಇವರ ಕ್ರೀಡಾ ಭವಿಷ್ಯವನ್ನೇ ನುಂಗಿ ಹಾಕಿತು. ಹಾಗಾಗಿ ಈಗ ತಮ್ಮ 43 ರ ವಯಸ್ಸಿನಲ್ಲಿಯೂ ದಿನಗೂಲಿ ನೌಕರರಾಗಿ ಜೀವನ ತಳ್ಳುವಂತಾಗಿದೆ. ಇಷ್ಟೆಲ್ಲಾ ಕಷ್ಟಗಳಿದ್ದರೂ ಅವರು ತಮ್ಮ ಬಾಕ್ಸಿಂಗ್ ಅಭೀಪ್ಸೆಯನ್ನು ಬಿಟ್ಟಿಲ್ಲ. ಪ್ರತಿದಿನ ಸಂಜೆ 5 ರಿಂದ 7 ವರೆಗೆ ಬಾಕ್ಸಿಂಗ್ ಅಭ್ಯಾಸ ನಡೆಸುತ್ತಾರೆ. ಇವರನ್ನು ಗುರುವಾಗಿ ಸ್ವೀಕರಿಸಿರುವ ಸುಮಾರು 150 ಮಂದಿ ಬಾಲಕರು ಇವರಲ್ಲಿ ಬಾಕ್ಸಿಂಗ್ ಕಲಿಯಲು ಬರುತ್ತಾರೆ. ಹಾಗೆಂದ ಮಾತ್ರಕ್ಕೆ ಇದನ್ನು ವಾಣಿಜ್ಯೀಕರಣ ಮಾಡುವ ಮನಸ್ಸು ಕೃಷ್ಣಾ ರಾವುತ್ ಅವರಿಗಿಲ್ಲ.     

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com