ಆಟಗಾರರ ವಿರುದ್ಧ ಲಂಚ ಆರೋಪ, ಐಸಿಸಿ ತನಿಖೆ

ಇತ್ತೀಚೆಗಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೂವರು ಆಟಗಾರರು ಲಂಚ ಸ್ವೀಕರಿಸಿದ್ದಾರೆ....
ಅನುರಾಗ್ ಠಾಕೂರ್
ಅನುರಾಗ್ ಠಾಕೂರ್

ನವದೆಹಲಿ: ಇತ್ತೀಚೆಗಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೂವರು ಆಟಗಾರರು ಲಂಚ ಸ್ವೀಕರಿಸಿದ್ದಾರೆ ಎಂಬ ಲಲಿತ್ ಮೋದಿ  ಆರೋಪಿಸಿರುವ ಕುರಿತು ಐಸಿಸಿ ತನಿಖೆ ನಡೆಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

2013 ರ ಐಪಿಎಲ್ ಆವೃತ್ತಿ  ವೇಳೆ ಸಿಎಸ್ ಕೆ ತಂಡದ ಮೂವರು ಆಟಗಾರರು ಉದ್ಯಮಿಯೊಬ್ಬರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸುವುದರ ಜೊತೆಗೆ ಈ ಕುರಿತು ಐಸಿಸಿ ಗೆ ಇ-ಮೇಲ್ ಸಹ ಕಳುಹಿಸಿದ್ದರು. ಸುರೇಶ್ ರೈನಾ ಸೇರಿದಂತೆ ಮೂವರು ಕ್ರಿಕೆಟಿಗರ ಮೇಲೆ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರ ಆರೋಪದ ಕುರಿತು ಐಸಿಸಿ ತನಿಖೆ ನಡೆಸಲಿದ್ದು, ತನಿಖೆ ನಂತರವಷ್ಟೇ  ಬಿಸಿಸಿಐ ಈ ಕುರಿತ ಬಗ್ಗೆ ಪ್ರತಿಕ್ರಿಯೆ ನೀಡಲು ಸಾಧ್ಯ ಎಂದು ಶನಿವಾರ ಠಾಕೂರ್ ತಿಳಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.  ಈ ಕುರಿತು ನಮಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಐಸಿಸಿ ಜತೆ ಮಾತುಕತೆ  ನಡೆಸಿ ತನಿಖೆಯ ಅಂಶಗಳನ್ನು ತಿಳಿದ ನಂತರವಷ್ಟೇ ನಾವು ಈ ವಿಷಯದ ಬಗ್ಗೆ ಹೇಳಿಕೆ ನೀಡಬಹುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com