ಪೇಸ್‍ಗೆ ಮಿಶ್ರಫಲ : ಹೊರಬಿದ್ದ ಭೂಪತಿ

ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಡಬಲ್ಸ್ ಪ್ರವೀಣ ಲಿಯಾಂಡರ್ ಪೇಸ್ ಮಿಶ್ರಫಲ ಅನುಭವಿಸಿದ್ದಾರೆ...
ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್
ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್

ಲಂಡನ್ : ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಡಬಲ್ಸ್ ಪ್ರವೀಣ ಲಿಯಾಂಡರ್ ಪೇಸ್ ಮಿಶ್ರಫಲ ಅನುಭವಿಸಿದ್ದಾರೆ. ಜೊತೆಯಾಟಗಾರ್ತಿ ಮಾರ್ಟಿನಾ ಹಿಂಗಿಸ್ ಜತೆ ಪ್ರತಿಷ್ಠಿತ ಟೂರ್ನಿಯ ಮಿಶ್ರ ಡಬಲ್ಸ್ ನಲ್ಲಿ ಮುನ್ನಡೆ ಸಾಧಿಸಿದ ಪೇಸ್ ಡಬಲ್ಸ್ ನಿಂದ ಹೊರಬಿದ್ದಿದ್ದಾರೆ. ಸೋಮವಾರ ನಡೆದ ಪುರುಷರ  ಡಬಲ್ಸ್ ವಿಭಾಗದ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೇಸ್ ತಮ್ಮ ಜತೆಯಾಟಗಾರ ಕೆನಡಾದ ಡೇನಿಯಲ್ ನೆಸ್ಟರ್ ಅವರೊಂದಿಗೆ ನಿರಾಸೆ ಅನುಭವಿಸಿದರು. ಆಸ್ಟ್ರಿಯಾದ ಅಲೆಕ್ಸಾಂಡರ್ ಪೆಯಾ ಹಾಗೂ ಬ್ರೆಜಿಲ್‍ನ ಬ್ರುನೊ ಸೊರೆಸ್ ಜೋಡಿ ಎದುರು ನಡೆದ ಐದು ಸೆಟ್‍ಗಳ ಸುದೀರ್ಘ ಕಾಲದ ಸೆಣಸಾಟದಲ್ಲಿ 8ನೇ ಶ್ರೇಯಾಂಕಿತ ಇಂಡೋ-ಕೆನಡಿಯನ್ ಜೋಡಿ 3-6, 5-7, 6-3, 6-2 ಹಾಗೂ 2-6 ಸೆಟ್‍ಗಳಿಂದ ಸೋತು ನಿರಾಸೆ ಅನುಭವಿಸಿತು.

ಆದರೆ ಡಬಲ್ಸ್ ನಲ್ಲಿ ಏಳನೇ ಶ್ರೇಯಾಂಕಿತ ಪೇಸ್ ಹಾಗೂ ಹಿಂಗೀಸ್  ಜೋಡಿ ಭಾನುವಾರ ತಡರಾತ್ರಿ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ _ಫ್ರಾನ್ಸ್ ನ ಎಡ್ವರ್ಡ್ ರೋಜರ್ -ವಸ್ಸೆಲಿನ್ ಹಾಗೂ ಅಲಿಸಿ ಕಾರ್ನೆಟ್ ವಿರುದ್ಧಛಿ 6-4, 6-2ರ ಎರಡು ನೇರ ಸೆಟ್‍ಗಳಲ್ಲಿ ಮಣಿಸಿ ತೃತೀಯ ಸುತ್ತಿಗೆ ಮುನ್ನಡೆದರು. ಪ್ರೀ-ಕ್ವಾರ್ಟರ್_ಫೈನಲ್‍ನಲ್ಲಿ ನ್ಯೂಜಿಲೆಂಡ್  ಆರ್ಟೆಮ್  ಸಿಟಾಕ್ ಹಾಗೂ ಆಸ್ಟ್ರೇಲಿಯಾದ ಅನಸ್ಟಾಸಿಯಾ ಆಡಿನೋವಾ ವಿರುದ್ಧ ಪೇಸ್ ಹಾಗೂ ಹಿಂಗಿಸ್ ಜೋಡಿ ಸೆಣಸಲಿದೆ.

ಇತ್ತ ಸ್ಪೇನ್ ನ ಮರಿಯಾ ಜೋಸ್ ಮಾರ್ಟಿನೆಸ್ ಸ್ಯಾಂಚೆಜ್  ಜತೆಗೂಡಿದ್ದ ಮಹೇಶ್ ಭೂಪತಿ ಆರನೇ ಶ್ರೇಯಾಂಕಿತ ಜೋಡಿ ರೊಮೇನಿಯಾದ ಹೊರಿಯಾ ಟೆಕೌ ಹಾಗೂ ಸ್ಲೊವೇನಿಯಾದ ಕ್ಯಾತರೀನಾ ಶ್ರೀಬಾಟ್ನಿಕ್ ಜೋಡಿ ಎದುರು ಎರಡನೇ ಸುತ್ತಿನ ಪಂದ್ಯದಲ್ಲಿ 2-6, 4-6 ಸೆಟ್‍ಗಳ ಅಂತರದಿಂದ ಸೋಲನುಭವಿಸಿತು.

ಸಾನಿಯಾ-ಹಿಂಗಿಸ್ ಕ್ವಾರ್ಟರ್‍ಗೆ:
ಅಗ್ರಶ್ರೇಯಾಂಕಿತ ಜೋಡಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಮಹಿಳೆಯರ ಡಬಲ್ಸ್  ವಿಭಾಗದಲ್ಲಿ ಕ್ವಾರ್ಟರ್ ಫೈ ನಲ್ ಪ್ರವೇಶಿಸಿದೆ. ಸೋಮವಾರ ಇಲ್ಲಿನ ಆರನೇ ಕೋರ್ಟ್‍ನಲ್ಲಿ ನಡೆದ ಪ್ರೀ-ಕ್ವಾರ್ಟರ್ ಪಂದ್ಯದಲ್ಲಿ ಈ ಇಂಡೋ ಸ್ವಿಸ್  ಜೋಡಿ ಹದಿನಾರನೇ ಶ್ರೇಯಾಂಕಿತ  ಸ್ಪೇನ್ ನ ಅನಬೆಲ್ ಮೆಡಿನಾ  ಗಾರ್ಗಿಯಸ್ ಹಾಗೂ ಅರಾಂಕ್ಸ ಪರ್ರಾ ಸ್ಯಾಂಟೋಜ ವಿರುದ್ಧ  6-4, 6-3 ಸೆಟ್‍ಗಳಲ್ಲಿ ಜಯ ಪಡೆಯಿತು. ಒಂದು ತಾಸು, ಆರು ನಿಮಿಷಗಳ ಕಾಲ ನಡೆದ ಎರಡೂ ಸೆಟ್‍ಗಳಲ್ಲಿ ಪಾರಮ್ಯ ಮೆರೆದ ಸಾನಿಯಾ ಹಾಗೂ ಹಿಂಗಿಸ್, ಪಂದ್ಯದಾದ್ಯಂತ ಪ್ರತಿಸ್ಪರ್ಧಿಗಳ ವಿರುದ್ಧಛಿ ಹಿಡಿತ ಸಾಧಿಸಿದರು. ಮೊದಲ ಸರ್ವ್‍ನಲ್ಲೇ ಪಾಯಿಂಟ್ಸ್ ಕಲೆಹಾಕಿದ ಸಾನಿಯಾ- ಹಿಂಗಿಸ್, ಆನಂತರವೂ ಶ್ರೇಷ್ಠ ನಿರ್ವಹಣೆ ನೀಡಿದರು. ಅದರ ಫಲವಾಗಿ ಪಂದ್ಯದಲ್ಲಿ 104 ಪಾಯಿಂಟ್ಸ್ ಗಳಲ್ಲಿ 59 ಪಾಯಿಂಟ್ಸ್ ಗಳನ್ನು ತಮ್ಮದಾಗಿಸಿಕೊಂಡರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com