ಸೆರೆನಾ ವಿಲಿಯಮ್ಸ್ ಹೊಸ ಹೊಸ ಸಾಧನೆ

ವಿಶ್ವದ ನಂಬರ್‍ಒನ್ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರ ತುರಾಯಿಗೆ ಮತ್ತೊಂದು ಗರಿ ಸೇರ್ಪಡೆಗೊಂಡಿದೆ.
ಸೆರೆನಾ ವಿಲಿಯಮ್ಸ್
ಸೆರೆನಾ ವಿಲಿಯಮ್ಸ್

ಲಂಡನ್: ವಿಶ್ವದ ನಂಬರ್‍ಒನ್ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರ ತುರಾಯಿಗೆ ಮತ್ತೊಂದು ಗರಿ ಸೇರ್ಪಡೆಗೊಂಡಿದೆ.

ಇದೇ ವ ರ್ಷಾಂತ್ಯಕ್ಕೆ ಸಿಂಗಾಪುರದಲ್ಲಿ ನಡೆಯಲಿರುವ ಡಬ್ಲ್ಯೂಟಿಎ ಟೆನಿಸ್ ಚಾಂಪಿಯನ್‍ಶಿಪ್ ಗೆ ಇನ್ನು ಮೂರು ತಿಂಗಳು ಬಾಕಿಯಿರುವಂತೆಯೇ, ಸೆರೆನಾ ಅವರು ಆ ಟೂರ್ನಿಯಲ್ಲಿ ಆಡುವ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಹಾಲಿ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಸೆರೆನಾ, ಮಹಿಳೆಯರ ಸಿಂಗಲ್ಸ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಬ್ರಿಟನ್‍ನ ಹೀತರ್ ವ್ಯಾಟ್ಸನ್ ಅವರ ಸೋಲಿಸಿದ್ದರು.

ಈ ಪಂದ್ಯದಲ್ಲಿ ಸಾಧಿಸಿದ ಜಯ, ಅವರನ್ನು ನೇರವಾಗಿ ಡಬ್ಲ್ಯೂಟಿಎ ಟೆನಿಸ್ ಚಾಂಪಿಯನ್‍ಶಿಪ್ ಗೆ ಪ್ರವೇಶ ಕಲ್ಪಿಸಿದೆ. ಟೆನಿಸ್ ಋತುವಿನಲ್ಲಿ ಶ್ರೇಷ್ಠ ಸಾಧನೆ ಮಾಡಿದ ಅಗ್ರ ಎಂಟು ಆಟಗಾರ್ತಿಯರು ಮಾತ್ರವೇ ಪಾಲ್ಗೊಳ್ಳುವ ಡಬ್ಲ್ಯೂಟಿಎ ಟೂರ್ನಿಗೆ ಅವಧಿಗೂ ಮೊದಲೇ ಪ್ರವೇಶ ಪಡೆದಿರುವ ಸೆರೆನಾ ಈ ಮೂಲಕವೂ ದಾಖಲೆ ನಿರ್ಮಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com