ಸರಣಿ ಮೇಲೆ ಭಾರತ ಕಣ್ಣು

ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಅಗ್ನಿಪರೀಕ್ಷೆ ಎದುರಾಗಿದೆ...
ಭಾರತ ಮಹಿಳಾ ಕ್ರಿಕೆಟ್ ತಂಡ
ಭಾರತ ಮಹಿಳಾ ಕ್ರಿಕೆಟ್ ತಂಡ

ಬೆಂಗಳೂರು: ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಅಗ್ನಿಪರೀಕ್ಷೆ  ಎದುರಾಗಿದೆ. ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯ ಕೊನೆಯ ಪಂದ್ಯ ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಉಭಯರೂ ಸರಣಿ ಮೇಲೆ ಕಣ್ಣಿಟ್ಟಿದ್ದಾರೆ.

ಐದು ಪಂದ್ಯಗಳ ಸರಣಿಯಲ್ಲಿ, ಇತ್ತಂಡಗಳು ಈಗಾಗಲೇ 2-2 ಸಮಬಲ ಸಾಧಿಸಿರುವುದರಿಂದ ಸರಣಿಯನ್ನು ನಿರ್ಧರಿಸಲಿರುವ ಈ ಅಂತಿಮ ಪಂದ್ಯ ಈರ್ವರಿಗೂ ಮಹತ್ವವೆನಿಸಿದೆ. ಅದರಲ್ಲೂ ನ್ಯೂಜಿಲೆಂಡ್ ತಂಡಕ್ಕೆ ಬುಧವಾರದ ಪಂದ್ಯ ಗೆಲ್ಲುವುದು ಮಹತ್ವದ ವಿಚಾರವಾಗಿದೆ. ಹಾಗೊಂದು ವೇಳೆ, ಬುಧವಾರದ ಪಂದ್ಯದಲ್ಲಿ ಜಯ ಗಳಿಸಿ, ಸರಣಿಯನ್ನು ಗೆದ್ದುಬಿಟ್ಟರೆ, ಭಾರತದ ನೆಲದಲ್ಲಿ ನ್ಯೂಜಿಲೆಂಡ್ ತಂಡ ಮೊಟ್ಟಮೊದಲ ಬಾರಿಗೆ ಸರಣಿ ಗೆದ್ದಂತಾಗುತ್ತದೆ. ಈ ಹಿಂದೆ, ಮೂರು ಬಾರಿ ಭಾರತ ಪ್ರವಾಸ ಕೈಗೊಂಡಿದ್ದರೂ, ಕಿವೀಸ್ ಮಹಿಳೆಯರಿಗೆ ಇಲ್ಲಿ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ, ಮಿಥಾಲಿ ರಾಜ್ ಪಡೆಗೆ ಹಾಗಲ್ಲ. ತವರಿನಲ್ಲೇ ಅಂತಾರಾಷ್ಟ್ರೀಯ ಸರಣಿಯೊಂದನ್ನು ಸೋತ ಅಪಮಾನದಿಂದ ತಪ್ಪಿಸಿಕೊಳ್ಳಲು ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಹಾಗಾಗಿ, ಬುಧವಾರದ ಪಂದ್ಯ ಭಾರತ ತಂಡಕ್ಕಂತೂ ಅತ್ಯಂತ ನಿರ್ಣಾಯಕವೆನಿಸಿದೆ.

ಮೊದಲ ಪಂದ್ಯದಲ್ಲಿ ಗೆಲುವು ಕಂಡಿದ್ದರೂ, ಭಾರತ ತಂಡ ಆನಂತರದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಆದರೆ, ಸೋಮವಾರ ನಡೆದ ಮೂರನೇ ಪಂದ್ಯದಲ್ಲಿ ಪುಟಿದೆದ್ದ ಅದು, 220 ರನ್ ಗುರಿಯನ್ನು ಕೇವಲ 2 ವಿಕೆಟ್‍ಗಳಲ್ಲಿ ಮುಟ್ಟಿ ಜಯದ ನಗೆ ಬೀರಿತ್ತು. ಈ ಮೂಲಕ, ಪುನಃ ಸರಣಿಯನ್ನು ಜೀವಂತವಾಗಿರಿಸಿಕೊಂಡಿತು. ಆದರೆ, ಈವರೆಗೆ ನಡೆದಿರುವ ನಾಲ್ಕೂ ಪಂದ್ಯಗಳನ್ನು ಗಮನಿಸಿದರೆ, ಭಾರತದ ಬ್ಯಾಟಿಂಗ್ ಲೈನ್‍ಅಪ್ ಕೊಂಚ ಅಸ್ಥಿರತೆಯಿಂದ ಕಾಣುತ್ತದೆ. ಅಗ್ರಕ್ರಮಾಂಕದ ಆಟಗಾರ್ತಿಯರನ್ನು ಬಿಟ್ಟರೆ, ಮಧ್ಯಮ ಕ್ರಮಾಂಕ ಪದೇ ಪದೇ ವೈಫಲ್ಯ ಕಾಣುತ್ತಿರುವುದರ ಬಗ್ಗೆ ಭಾರತ ತಂಡ ಗಮನ ಹರಿಸಬೇಕಿದೆ.

ಹೆಚ್ಚು ಕಡಿಮೆ ಇದೇ ವೈಫಲ್ಯಗಳು ಕಿವೀಸ್ ತಂಡವನ್ನೂ ಕಾಡಿದೆ. ಇಡೀ ಸರಣಿಯಲ್ಲಿ, ಯಾವುದೇ ತಂಡ ಸ್ಥಿರ ದರ್ಶನ ನೀಡಲು ಸಾಧ್ಯವಾಗಿಲ್ಲ. ಹಾಗಾಗಿ, ಬುಧವಾರದ ದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮಂಗವಾರ, ಮಾಧ್ಯಮಗಳೊಂದಿಗೆ ಮಾತನಾಡಿದ
ನ್ಯೂಜಿಲೆಂಡ್ ತಂಡದ ನಾಯಕಿ ಸುಝಿ ಬೇಟ್ಸ್ ಕೊನೆಯ ಪಂದ್ಯಕ್ಕಾಗಿ ತಮ್ಮ ತಂಡ ಕೈಗೊಂಡಿರುವ ತಯಾರಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com