ವಿಂಬಲ್ಡನ್ ಮಿಶ್ರ ಡಬಲ್ಸ್: ಪೇಸ್–ಹಿಂಗಿಸ್ ಜೋಡಿಗೆ ಚಾಂಪಿಯನ್ ಮುಕುಟ

ಭಾರತೀಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಹಾಗೂ ಸ್ವಿಜರ್ಲ್ಯಾಂಡ್ ನ ಮಾರ್ಟೀನಾ ಹಿಂಗೀಸ್ ಜೋಡಿ ವಿಂಬಲ್ಡನ್ ಚಾಂಪಿಯನ್ ಶಿಪ್ ಮಿಶ್ರ ಡಬಲ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ...
ಲಿಯಾಂಡರ್ ಪೇಸ್, ಮಾರ್ಟಿನಾ ಹಿಂಗೀಸ್
ಲಿಯಾಂಡರ್ ಪೇಸ್, ಮಾರ್ಟಿನಾ ಹಿಂಗೀಸ್

ಲಂಡನ್: ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ- ಮಾರ್ಟಿನಾ ಹಿಂಗೀಸ್ ಜೋಡಿ ಮಹಿಳೆಯರ ಡಬಲ್ಸ್ ನಲ್ಲಿ ಚಾಂಪಿಯನ್ ಆಗಿ ಮೆರೆದ ಬೆನ್ನಲ್ಲೇ ಭಾರತೀಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಹಾಗೂ ಸ್ವಿಜರ್ಲ್ಯಾಂಡ್ ನ ಮಾರ್ಟೀನಾ ಹಿಂಗೀಸ್ ಜೋಡಿ ವಿಂಬಲ್ಡನ್ ಚಾಂಪಿಯನ್ ಶಿಪ್ ಮಿಶ್ರ ಡಬಲ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ತಡರಾತ್ರಿ ನಡೆದ ಮಿಶ್ರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಲಿಯಾಂಡರ್ ಪೇಸ್ ಹಾಗೂ ಸ್ವಿಜರ್ಲ್ಯಾಂಡ್ ನ ಮಾರ್ಟೀನಾ ಹಿಂಗೀಸ್ ಜೋಡಿ ಅಲೆಗ್ಯಾಂಡರ್ ಪೆಯಾ ಮತ್ತು ಟೀಮಾ ಬಾಬೋಸ್ ಜೋಡಿಯನ್ನು 6-1, 6-1 ಸೆಟ್ ಅಂತರದಲ್ಲಿ ಮಣಿಸಿ ವಿಂಬಲ್ಡನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಲಿಯಾಂಡರ್ ಪೇಸ್ ಗೆ ಇದು 16ನೇ ಗ್ರ್ಯಾನ್ ಸ್ಲ್ಯಾಮ್ ಟ್ರೋಫಿಯಾಗಿದೆ. 8ನೇ ಗ್ರ್ಯಾನ್ ಸ್ಲಾಮ್ ಮಿಶ್ರ ಡಬಲ್ಸ್ ಪ್ರಶಸ್ತಿಯಾಗಿದೆ. ಮಾರ್ಟಿನಾ ಹಿಂಗಿಸ್ ಜೊತೆ ಗೆದ್ದ 2ನೇ ಗ್ರ್ಯಾನ್ ಸ್ಲಾ ಟೂರ್ನಿಯಾಗಿದೆ.

ಮಿಶ್ರ ಡಬಲ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದ ಬಳಿಕ ಮಾತನಾಡಿದ ಲಿಯಾಂಡರ್ ಪೇಸ್ ವಿಂಬಲ್ಡನ್ ನಲ್ಲಿ ಪ್ರಶಸ್ತಿ ಗೆದ್ದಿರುವುದು ತುಂಬಾ ಸಂತೋಷವಾಗಿದೆ. ಅಲ್ಲದೆ ಈ ಗೆಲುವನ್ನು ಭಾರತದ ಗೆಲವು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com