ಜಿಂಬಾಬ್ವೆ ವಿರುದ್ಧ ಮೂರನೇ ಏಕದಿನ ಪಂದ್ಯಕ್ಕೆ ಮನೀಶ್ ಪಾಂಡೆ ಆಯ್ಕೆ

ಮಂಗಳವಾರ ಆರಂಭಗೊಂಡಿರುವ ಭಾರತ-ಜಿಂಬಾಬ್ವೆ ನಡುವಣ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ...
ಕರ್ನಾಟಕದ ಬ್ಯಾಟ್ಸ್ ಮನ್ ಮನೀಶ್ ಪಾಂಡೆ ಬ್ಯಾಟ್ ಮಾಡುತ್ತಿರುವುದು.
ಕರ್ನಾಟಕದ ಬ್ಯಾಟ್ಸ್ ಮನ್ ಮನೀಶ್ ಪಾಂಡೆ ಬ್ಯಾಟ್ ಮಾಡುತ್ತಿರುವುದು.

ಹರಾರೆ: ಮಂಗಳವಾರ ಆರಂಭಗೊಂಡಿರುವ ಭಾರತ-ಜಿಂಬಾಬ್ವೆ ನಡುವಣ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ ಕೇದಾರ್ ಜಾಧವ್ 105 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು, ಮನೀಷ್ ಪಾಂಡೆ 71 ರನ್ ಗಳಿಸಿದರು. ಇದುವರೆಗೆ ಭಾರತ 276/5 ಸ್ಕೋರ್ ಮಾಡಿದೆ.

ಕರ್ನಾಟಕದ ಮನೀಶ್ ಪಾಂಡೆ ಅವರು ಜಿಂಬಾಬ್ವೆ ವಿರುದ್ಧ ಆರಂಭಗೊಂಡಿರುವ ಮೂರನೇ ಹಾಗೂ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ ಪಂದ್ಯವಾಡುವ ಅವರ ಕನಸು ನನಸಾಗಿದೆ.

25 ವರ್ಷ ವಯಸ್ಸಿನ ಬಲಗೈ ಬ್ಯಾಟ್ಸ್ ಮನ್ ಮನೀಶ್ ಪಾಂಡೆ ಅವರು ಕರ್ನಾಟಕದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿದ್ದಾರೆ. ಇವರು ಭಾರತದ ಪರ ಆಡುತ್ತಿರುವ 206ನೇ ಆಟಗಾರ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com