ವಿಂಬಲ್ಡನ್ ವಿಜೇತರ ಸಖತ್ ಡ್ಯಾನ್ಸ್

ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯಲ್ಲಿ ಚಾಂಪಿಯನ್ನರೆನಿಸಿದ ಸೆರೆನಾ ವಿಲಿಯಮ್ಸ್ ಹಾಗೂ ನೊವಾಕ್ ಜೊಕೊವಿಚ್ ವಿಂಬಲ್ಡನ್ ಚಾಂಪಿಯನ್ನರಿಗಾಗಿ ಏರ್ಪಡಿಸಲಾಗಿದ್ದ ...
ಸೆರೆನಾ ವಿಲಿಯಮ್ಸ್  ಹಾಗೂ ಜೊಕೊವಿಚ್ ಡ್ಯಾನ್ಸ್
ಸೆರೆನಾ ವಿಲಿಯಮ್ಸ್ ಹಾಗೂ ಜೊಕೊವಿಚ್ ಡ್ಯಾನ್ಸ್

ಲಂಡನ್: ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯಲ್ಲಿ ಚಾಂಪಿಯನ್ನರೆನಿಸಿದ ಸೆರೆನಾ ವಿಲಿಯಮ್ಸ್  ಹಾಗೂ ನೊವಾಕ್ ಜೊಕೊವಿಚ್ ವಿಂಬಲ್ಡನ್ ಚಾಂಪಿಯನ್ನರಿಗಾಗಿ ಏರ್ಪಡಿಸಲಾಗಿದ್ದ ಡಿನ್ನರ್ ಪಾರ್ಟಿಯಲ್ಲಿ ನರ್ತಿಸಿ ಸಂಭ್ರಮಿಸಿದರು. ಭಾನುವಾರ ಸಂಜೆ ಸೆಂಟರ್ ಕೋರ್ಟ್‍ನಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯವು ಮುಕ್ತಾಯವಾಗುತ್ತಿದ್ದಂತೆಂಯೇ ಇಡೀ ವಿಂಬಲ್ಡನ್ ಗಿಲ್ಡ್ ಹಾಲ್‍ನ ಡ್ಯಾನ್ಸಿಂಗ್ ಹಜಾರಕ್ಕೆ ಸ್ಥಳಾಂತರಗೊಂಡಿತು.

ಆರನೇ ವಿಂಬಲ್ಡನ್ ಪ್ರಶಸ್ತಿ ಪಡೆದ ಸೆರೆನಾ ಹಾಗೂ ಸತತ ಎರಡನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿ ಪಡೆದ ಜೊಕೊವಿಚ್, ಬೀ ಗೀಸ್‍ನ ನೈಟ್ ಫೀವರ್ ಡಿಸ್ಕೋ ಸಾಂಗ್‍ಗೆ ಹೆಜ್ಜೆ ಹಾಕಿದರು. ವಿಂಬಲ್ಡನ್‍ನಲ್ಲಿ ಚಾಂಪಿಯನ್ನರಾದವರಿಗೆ ಇಂಥದ್ದೊಂದು ನೃತ್ಯ ಪ್ರಕಾರವನ್ನು ಸಾಂಪ್ರದಾಯಿಕವಾಗಿ ಅಳವಡಿಸಿಕೊಂಡು ಬರಲಾಗುತ್ತಿತ್ತಾದರೂ, 1977ರಲ್ಲಿ ಇದಕ್ಕೆ ಕೊಕ್ ನೀಡಲಾಗಿತ್ತು. ಆದರೆ ಈ ಬಾರಿ ಅದಕ್ಕೆ ಮರು ಚಾಲನೆ ನೀಡಲಾಯಿತು. ಅಂದ್ಹಾಗೆ ಡ್ಯಾನ್ಸ್ ಗೂ  ಮುನ್ನ ನೊವಾಕ್ ಜೊಕೊವಿಚ್ ತನ್ನ ಪತ್ನಿ ಜೆಲೆನಾ ರಿಸ್ಟಿಕ್ ಅವರಲ್ಲಿ ಅನುಮತಿ ಕೋರಿಕೊಂಡದ್ದು ವಿಶೇಷವೆನಿಸಿತು.

ಪೇಸ್- ಜೊಕೊವಿಚ್ ಪರಸ್ಪರ ಅಭಿನಂದನೆ

ವಿಂಬಲ್ಡನ್ ಮಿಶ್ರ ಡಬಲ್ಸ್ ನಲ್ಲಿ ಪ್ರಶಸ್ತಿ ಗೆದ್ದ ನಂತರ ಸಿಎನ್‍ಎನ್ ಐಬಿಎನ್ ಸುದ್ದಿ ವಾಹಿನಿಗೆ ಸಂದರ್ಶನ ನೀಡುತ್ತಿದ್ದ ವೇಳೆ ಲಿಯಾಂಡರ್ ಪೇಸ್ ಹಾಗೂ ಪುರುಷರ ಸಿಂಗಲ್ಸ್ ವಿಭಾಗದ ಚಾಂಪಿಯನ್ ನೊವಾಕ್ ಜೊಕೊವಿಚ್ ಪರಸ್ಪರ ಅಭಿನಂದನೆ ಸಲ್ಲಿಸಿ ಸಂಭ್ರಮಿಸಿದರು.

ಸಂದರ್ಶನದ ಮಧ್ಯೆ ವಿಶ್ವದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಚ್
ಕಾರಿನಲ್ಲಿ ಬಂದರು. ಇದನ್ನು ನೋಡಿದ ಪೇಸ್, ``ನೊವಾಕ್ ಅತ್ಯುತ್ತಮ ಪ್ರದರ್ಶನ ನೀಡಿದ್ದೀರಾ, ನಿಮ್ಮ ಆಟ ನನಗೆ ಸ್ಪೂರ್ತಿ ತುಂಬಿತು'' ಎಂದು ಅಭಿನಂದನೆ ಸಲ್ಲಿಸಿದರು. ಇದಕ್ಕೆ ಪ್ರತಿಯಾಗಿ ಕಾರಿನಿಂದಲೇ ಪೇಸ್‍ಗೆ ಜೊಕೊವಿಚ್ ಮಿಶ್ರ ಡಬಲ್ಸ್ ನಲ್ಲಿ ಪ್ರಶಸ್ತಿ ಗೆದ್ದಿದ್ದಕ್ಕೆ ಶುಭ ಕೋರಿದರು. ನಂತರ ಜೊಕೊವಿಚ್  ಬಗ್ಗೆ ಮಾತನಾಡಿದ ಪೇಸ್ ``ಜೊಕೊವಿಚ್ ಅತ್ಯುತ್ತಮ ವ್ಯಕ್ತಿ, ಒತ್ತಡದ ಸಂದರ್ಭದಲ್ಲೂ ಪ್ರಸಕ್ತ ತಲೆಮಾರಿನ ದಂತಕತೆ ರೋಜರ್ ಫೆಡರರ್ ವಿರುದ್ಧ ಹೋರಾಡಿ ಪ್ರಶಸ್ತಿ ಗೆದ್ದು ಕೊಂಡ ಪರಿ ಎಂಥವರಿಗೂ ಸ್ಪೂರ್ತಿ. ಕಾರಿನಲ್ಲಿ ವಿಂಬಲ್ಡನ್  ಬೌಲ್ ಗೆ ತೆರಳುತ್ತಿದ್ದರೂ ನನ್ನನ್ನು ಅಭಿನಂದಿಸಲು ಸಮಯ ತೆಗೆದುಕೊಂಡದ್ದು ಅವರ ಸೌಜನ್ಯಕ್ಕೆ ಸಾಕ್ಷಿ. ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆಲ್ಲುವುದರೊಂದಿಗೆ ಅತ್ಯುತ್ತಮ ವ್ಯಕ್ತಿತ್ವವನ್ನೂ ನೊವಾಕ್ ಬೆಳೆಸಿಕೊಂಡಿದ್ದಾರೆ'' ಎಂದು ಪೇಸ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com