
ನವದೆಹಲಿ: ಚಾಂಪಿಯನ್ಸ್ ಲೀಗ್ ಟ್ವೆಂಟಿ -20 ಸ್ಪರ್ಧೆಯನ್ನ ಸ್ಥಗಿತಗೊಳಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ತಕ್ಷಣದಿಂದಲೇ ಈ ನಿರ್ಧಾರ ಜಾರಿಗೆ ಬರಲಿದ್ದು ಸಿ.ಎಲ್.ಟಿ 20 ಯ ನಿಗದಿತ ಎಲ್ಲಾ ಯೋಜನೆಗಳು ಸ್ಥಗಿತಗೊಳ್ಳಲಿವೆ.
ಸಭೆಯಲ್ಲಿ ಭಾಗವಹಿಸಿದ್ದ ಬಿಸಿಸಿಐ , ಕ್ರಿಕೆಟ್ ದಕ್ಷಿಣ ಆಫ್ರಿಕಾ(ಸಿ.ಎಸ್.ಎ) ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಪ್ರತಿನಿಧಿಗಳು ಒಮ್ಮತದಿಂದ ಈ ನಿರ್ಧಾರವನ್ನು ಕೈಗೊಂಡಿದ್ದು ತಕ್ಷಣದಿಂದಲೇ ಜಾರಿಗೆ ಬರಲಿದೆ. 2015 ರ ಆವೃತ್ತಿಯಲ್ಲಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಸಿ.ಎಲ್.ಟಿ 20 ಯ ಪಂದ್ಯಗಳು ನಡೆಯಬೇಕಿತ್ತು. ಆಡಳಿತ ಮಂಡಳಿ ನಿರ್ಧಾರದಿಂದ ಎಲ್ಲಾ ಪಂದ್ಯಗಳು ರದ್ದುಗೊಂಡಿವೆ.
ಬಿಸಿಸಿಐ , ಕ್ರಿಕೆಟ್ ದಕ್ಷಿಣ ಆಫ್ರಿಕಾ(ಸಿ.ಎಸ್.ಎ) ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಮಂಡಳಿಗಳಿಂದ 2009 ರಲ್ಲಿ ಈ ಸ್ಪರ್ಧೆಯನ್ನು ಪ್ರಾರಂಭಿಸಲಾಗಿತ್ತು. ಟೂರ್ನಮೆಂಟ್ ನ್ನು ಅತ್ಯಂತ ಕಡಿಮೆ ಜನರು ವೀಕ್ಷಿಸುತ್ತಿರುವುದರಿಂಡ ಅದನ್ನು ಸ್ಥಗಿತಗೊಳಿಸುವುದೇ ಸೂಕ್ತ ನಿರ್ಧಾರ ಎಂಬ ತೀರ್ಮಾನಕ್ಕೆ ಬರಲಾಗಿದೆ.
ಕಳೆದ ಆರು ಸೀಸನ್ ಗಳಲ್ಲಿ ನಡೆದ ಪಂದ್ಯಾವಳಿಗಳಲ್ಲಿ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವುದಕ್ಕೆ ಸಿ.ಎಲ್.ಟಿ ೨೦ ಉತ್ತಮ ವೇದಿಕೆಯಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಜನರನ್ನು ಸೆಳೆಯಲು ಸಿ.ಎಲ್.ಟಿ-20 ವಿಫಲವಾಗಿತ್ತು ಆದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.
Advertisement