
ಮೆಲ್ಬರ್ನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಅಲ್ರೌಂಡರ್ ಜೇಮ್ಸ್ ಫಾಕ್ನರ್ ಇತ್ತೀಚೆಗೆ ಬ್ರಿಟನ್ ನಲ್ಲಿ ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಅವರನ್ನು ನಾಲ್ಕು ಪಂದ್ಯಗಳಿಂದ ನಿಷೇಧಿಸಿದೆ.
ಈ ಮೂಲಕ ಜೇಮ್ಸ್ ಫಾಕ್ನರ್ ಮುಂದಿನ ತಿಂಗಳು ಐರ್ಲೆಂಡ್ ವಿರುದ್ಧ 1 ಏಕದಿನ ಮತ್ತು 1 ಟಿ.20 ಪಂದ್ಯ ಹಾಗೂ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಆರಂಭಿಕ 2 ಪಂದ್ಯಗಳಲ್ಲಿ ಕಣಕ್ಕಿಳಿಯಲು ಸಾಧ್ಯವಿಲ್ಲ.
ಬೇಜವಾಬ್ದಾರಿ ವರ್ತನೆ ತೋರಿದ ಹಿನ್ನೆಲೆಯಲ್ಲಿ ಜೇಮ್ಸ್ ಫಾಕ್ನರ್ ಅವರಿಗೆ ನಾಲ್ಕು ಪಂದ್ಯಗಳ ಅಮಾನತಿನ ಶಿಕ್ಷೆ ನೀಡಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆಗಸ್ಟ್ ಮಧ್ಯಭಾಗದಲ್ಲಿ ಟಿ 20 ತಂಡ ಪ್ರಕಟಿಸುವಾಗ ಜೇಮ್ಸ್ ಫಾಕ್ನರ್ ಅವರನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದೆ. ಫಾಕ್ನರ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು ಶಿಕ್ಷೆಯನ್ನು ಸ್ವೀಕರಿಸಿದ್ದಾರೆ.
Advertisement