
ಪುಣೆ: ಜೂನಿಯರ್ ಹಾಗೂ ಸಬ್ ಜೂನಿಯರ್ ವಿಭಾಗದಲ್ಲಿ ರಾಜ್ಯದ ಈಜುಪಟುಗಳ ಅತ್ಯುತ್ತಮ ಪ್ರದರ್ಶನದ ಪರಿಣಾಮ ಕರ್ನಾಟಕ 42 ನೇ ಜೂನಿಯರ್ ಮತ್ತು 32 ನೇ ಸಬ್ ಜೂನಿಯರ್ ಈಜು ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.
ಜೂನಿಯರ್ ವಿಭಾಗದಲ್ಲಿ ಕರ್ನಾಟಕ 543 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡರೆ, ಸಬ್ ಜೂನಿಯರ್ ವಿಭಾಗದಲ್ಲಿ ರಾಜ್ಯ ತಂದ 320 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದೆ. ಈ ಮೂಲಕ ಎರಡು ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಅಂತಿಮ ದಿನದ ಸ್ಪರ್ಧೆಗಳಲ್ಲಿ ಬಾಲಕರ 100 ಮಿ. ಫ್ರೀಸ್ಟೈಲ್ ನಲ್ಲಿ ಸಂಜಯ್ ಸಿ.ಜೆ(55 .47 ಸೆ) ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೇ 200 ಮಿ. ಬಟರ್ ಪ್ಲೈ ವಿಭಾಗದಲ್ಲಿ (2 :17 .೨೯) ಅಗ್ರಸ್ಥಾನ ಪಡೆದಿದ್ದಾರೆ. 100 ಮಿ. ಫ್ರೀಸ್ಟೈಲ್ ನಲ್ಲಿ ಪ್ರಸಿದ್ಧ ಕೃಷ್ಣ(1 :01 : 21 ನಿ), 50 ಮೀ ಫ್ರೀಸ್ಟೈಲ್ ನಲ್ಲಿ ಶೋಹನ್ ಗಂಗೂಲಿ(30 .95 ) ಮೊದಲಿಗರಾದರು.
ಬಾಲಕಿಯರ ವಿಭಾಗದಲ್ಲಿ 100 ಮೀ. ಫ್ರೀಸ್ಟೈಲ್ ನಲ್ಲಿ ಖುಷಿ ದಿನೇಶ್ ಅಗ್ರಸ್ಥಾನ ಪಡೆದರೆ ಸ್ಮೃತಿ ಮಹಲಿಂಗಮ್ ದ್ವಿತೀಯ ಸ್ಥಾನ ಪಡೆದರು. ವೈಯಕ್ತಿಕ ವಿಭಾಗಗಳ ಪೈಕಿ 4 ಗುಂಪುಗಳ ಪೈಕಿ ಮೂರು ಗುಂಪಿನಲ್ಲಿ ಕರ್ನಾಟಕದ ಲಿಖಿತ್ ಎಸ್.ಪಿ ಸಂಜಯ್ ಸಿ.ಜೆ ಶೋಹನ್ ಗಂಗೂಲಿ ಅತ್ಯುತ್ತಮ ಈಜುಪಟು ಪ್ರಶಸ್ತಿ ಪಡೆದರು.
Advertisement