ನ್ಯಾ.ಲೋಧಾ ಸಮಿತಿ ತೀರ್ಪಿನ ಅಧ್ಯಯನಕ್ಕೆ ಬಿಸಿಸಿಐ ಕಾರ್ಯಕಾರಿ ಸಮಿತಿ

ಐಪಿಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣ ಸಂಬಂಧ ನಿವೃತ್ತ ನ್ಯಾಯಮೂರ್ತಿ ಆರ್. ಎಂ. ಲೋಧಾ ನೀಡಿರುವ ತೀರ್ಪಿನ ಅಧ್ಯಯನಕ್ಕೆ ಬಿಸಿಸಿಐ ...
ಸೌರವ್ ಗಂಗೂಲಿ
ಸೌರವ್ ಗಂಗೂಲಿ

ನವದೆಹಲಿ: ಐಪಿಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣ ಸಂಬಂಧ ನಿವೃತ್ತ ನ್ಯಾಯಮೂರ್ತಿ ಆರ್. ಎಂ. ಲೋಧಾ ನೀಡಿರುವ ತೀರ್ಪಿನ ಅಧ್ಯಯನಕ್ಕೆ ಬಿಸಿಸಿಐ ಕಾರ್ಯಕಾರಿಯ ಸಮಿತಿ ರಚನೆ ಮಾಡಿದೆ. ನಾಲ್ಕು ಜನರ ಸಮಿತಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ನೇಮಕವಾಗಿದ್ದಾರೆ.

ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ, ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್, ಖಜಾಂಚಿ ಅನಿರುದ್ಧ ಚೌಧರಿ ಹಾಗೂ ಸೌರವ್ ಗಂಗೂಲಿ ಅವರನ್ನೊಳಗೊಂಡ ಆಯೋಗ, ತೀರ್ಪಿನ ಅಧ್ಯಯನ ನಡೆಸಿ, ಆರು ವಾರಗಳೊಳಗೆ ವರದಿ ನೀಡುವಂತೆ ಬಿಸಿಸಿಐ ತಿಳಿಸಿದೆ.

ಸಮಿತಿಯು ತೀರ್ಪಿನ ಅಧ್ಯಯನ ನಂತರ ವರದಿ ನೀಡುವ ಮುಂಚೆ ಕಾನೂನು ತಜ್ಞರ ಸಲಹೆ ಪಡೆಯಲಿದೆ ಎಂದು ರಾಜೀವ್ ಶುಕ್ಲಾ ತಿಳಿಸಿದ್ದಾರೆ. ನಿನ್ನೆ ಮುಂಬಯಿಯಲ್ಲಿ ನಡೆದ ಸಭೆಯಲ್ಲಿ ಲೋಧಾ ಸಮಿತಿ ನೀಡಿರುವ  ತೀರ್ಪಿನ ಅಧ್ಯಯನ ನಡೆಸಲು ಸಮಿತಿ ರಚಿಸಲು ನಿರ್ಧಾರ ಕೈಗೊಳ್ಳಲಾಯಿತು.

ನ್ಯಾ.ಲೋಧಾ ನೀಡಿರುವ  ತೀರ್ಪನ್ನು ಬಿಸಿಸಿಐ ಅನುಷ್ಠಾನಗೊಳಿಸಲಿದೆ. ಐಪಿಎಲ್ 9ನೇ ಆವೃತ್ತಿಯ ಸಿದ್ಧತೆ ನಡೆಸುವುದಾಗಿ ಶುಕ್ಲಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com