ಕಳಂಕ ತೊಳೆಯಲು ಬಿಸಿಸಿಐ ದಿಟ್ಟ ಕ್ರಮ: ವಿವಿಎಸ್ ಲಕ್ಷ್ಮಣ್

ಐಪಿಎಲ್ ಬೆಟ್ಟಿಂಗ್ ನಿಂದಾಗಿ ಕ್ರಿಕೆಟ್ ಗೆ ಅಂಟಿರುವ ಕಳಂಕವನ್ನು ತೊಡೆದುಹಾಕುವಲ್ಲಿ ಬಿಸಿಸಿಐ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ: ವಿವಿಎಸ್ ಲಕ್ಷ್ಮಣ್
ಕಳಂಕ ತೊಳೆಯಲು ಬಿಸಿಸಿಐ ದಿಟ್ಟ ಕ್ರಮ: ವಿವಿಎಸ್ ಲಕ್ಷ್ಮಣ್

ಬೆಂಗಳೂರು: ಐಪಿಎಲ್ ಬೆಟ್ಟಿಂಗ್ ನಿಂದಾಗಿ ಕ್ರಿಕೆಟ್ ಗೆ ಅಂಟಿರುವ ಕಳಂಕವನ್ನು ತೊಡೆದುಹಾಕುವಲ್ಲಿ ಬಿಸಿಸಿಐ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂಬ ಆಶಯವನ್ನು ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಸಲಹೆಗಾರ ವಿವಿಎಸ್ ಲಕ್ಷ್ಮಣ್ ವ್ಯಕ್ತಪಡಿಸಿರುವುದಾಗಿ ಖಾಸಗಿ ಮಾಧ್ಯಮದ ವರದಿ ತಿಳಿಸಿದೆ

ಐಪಿಎಲ್ ಬೆಟ್ಟಿಂಗ್ ಹಗರಣ ನಡೆದಿದ್ದು ದುರದೃಷ್ಟಕರ ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಇತ್ತೀಚೆಗಷ್ಟೇ ನಿವೃತ್ತ ನ್ಯಾ.ಆರ್.ಎಂ ಲೋಧಾ ನೀಡಿರುವ ಆದೇಶಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಿದೆ ಎಂದರು.

ಐಪಿಎಲ್ ತಂದಗಳಾದ ಚೆನ್ನೈ ಸೂಪರ್ ಕಿಂಗ್ಸ್(ಸಿ.ಎಸ್.ಕೆ) ಹಾಗೂ ರಾಜಸ್ಥಾನ ರಾಯಲ್ಸ್(ಆರ್.ಆರ್) ತಂಡಗಳನ್ನು ಎರಡು ವರ್ಷಗಳ ಕಾಲ ಐಪಿಎಲ್ ನಿಂದ ನಿಷೇಧಿಸಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ ಲಕ್ಷ್ಮಣ್ ಕ್ರಿಕೆಟ್ ಮುಂದೆ ಯಾರೂ ದೊಡ್ಡವರಲ್ಲ. ಎಲ್ಲಾ ಕಪ್ಪುಮಸಿಗಳ ಹೊರತಾಗಿಯೂ ಕ್ರಿಕೆಟ್ ಬೆಳಗಬೇಕು ಇದಕ್ಕಾಗಿ ಬಿಸಿಸಿಐ ಉತ್ತಮ ಕ್ರಮಗಳನ್ನು ಕೈಗೊಂಡು ಐಪಿಎಲ್ ಗೆ ಅಂಟಿಕೊಂಡಿರುವ ಕಳಂಕವನ್ನು ತೊಡೆದುಹಾಕಬೇಕಿದೆ ಎಂದೂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com