ಬಳ್ಳಾರಿಯಿಂದ ಉತ್ತಪ್ಪ ಬಿಡುಗಡೆ

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನ ಹರಾಜು ಪ್ರಕ್ರಿಯೆ ಇದೇ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು...
ರಾಬಿನ್ ಉತ್ತಪ್ಪ
ರಾಬಿನ್ ಉತ್ತಪ್ಪ
Updated on

ಬೆಂಗಳೂರು:ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನ ಹರಾಜು ಪ್ರಕ್ರಿಯೆ ಇದೇ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಸ್ಟಾರ್ ಆಟಗಾರ ರಾಬಿನ್ ಉತ್ತಪ್ಪ ಅವರನ್ನು ಬಳ್ಳಾರಿ ಟಸ್ಕರ್ಸ್ ಫ್ರಾಂಚೈಸಿ ಕರಾರಿನಿಂದ ಮುಕ್ತಗೊಳಿಸಿದೆ.

ಕಳೆದ ವರ್ಷ 5.3 ಲಕ್ಷಕ್ಕೆ ಉತ್ತಪ್ಪ ಅವರನ್ನು ಬಳ್ಳಾರಿ ಫ್ರಾಂಚೈಸಿ ಖರೀದಿಸಿತ್ತು. ಕೆಪಿಎಲ್ ನಿಯಮದ ಪ್ರಕಾರ ಹಾಲಿ ತಂಡದಲ್ಲಿರುವ ಇಬ್ಬರು ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದ್ದು, ಈ ಋತುವಿನಿಂದ ನಟ ಸುದೀಪ್ ಒಡೆತನದ 'ನಮ್ಮ ಬೆಂಗಳೂರು' ಹಾಗೂ ಇದೇ ಸುದೀಪ್ ಸಾರಥ್ಯದ ಆಲ್ ಸ್ಟಾರ್ಸ್ ಸೆಲೆಬ್ರಿಟಿ ಇಲೆವೆನ್ ಸಹ ಕೆಪಿಎಲ್ ನಲ್ಲಿ ಭಾಗವಹಿಸುತ್ತಿದೆ.

ಏತನ್ಮಧ್ಯೆ ಕರ್ನಾಟಕ ರಣಜಿ ತಂಡದ ನಾಯಕ ಆರ್. ವಿನಯ್ ಕುಮಾರ್ ಅವರನ್ನು ಬೆಳಗಾವಿ ಪ್ಯಾಂಥರ್ಸ್ ಉಳಿಸಿಕೊಂಡಿದ್ದರೆ, ಕಳೆದ ಬಾರಿ ಮೈಸೂರು ಮಹಾರಾಜಾಸ್ ಗೆ ಟ್ರೋಫಿ ತಂದಿತ್ತ ಮನೀಶ್ ಪಾಂಡೆ ಅದೇ ತಂಡದಲ್ಲಿ ಮುಂದುವರಿಯಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com