ಶ್ರೀಲಂಕಾ ಸರಣಿಗೆ ಇಂದು ತಂಡ ಪ್ರಕಟ 3 ನೇ ಸ್ಪಿನ್ನರ್ ಆಯ್ಕೆ ಕಗ್ಗಂಟು

ಶ್ರೀಲಂಕಾ ವಿರುದ್ಧ ಶುರುವಾಗಲಿರುವ ಮೂರು ಟೆಸ್ಟ್ ಪಂದ್ಯ ಸರಣಿಗಾಗಿ ಭಾರತ ತಂಡವನ್ನು ಗುರುವಾರ ಆಯ್ಕೆ ಮಾಡಲಿದ್ದು ಮೂರನೇ ಸ್ಪಿನ್ನರ್ ಆಯ್ಕೆ ಸಂದೀಪ್ ಪಾಟೀಲ್ ಸಾರಥ್ಯದ ಆಯ್ಕೆ ಸಮಿತಿಗೆ ಕಗ್ಗಂಟಾಗಿದೆ
ಭಾರತ ಟೆಸ್ಟ್ ತಂಡ(ಸಾಂದರ್ಭಿಕ ಚಿತ್ರ)
ಭಾರತ ಟೆಸ್ಟ್ ತಂಡ(ಸಾಂದರ್ಭಿಕ ಚಿತ್ರ)
Updated on

ನವದೆಹಲಿ: ಆಗಸ್ಟ್ 12 ರಿಂದ ಶ್ರೀಲಂಕಾ ವಿರುದ್ಧ ಶುರುವಾಗಲಿರುವ ಮೂರು ಟೆಸ್ಟ್ ಪಂದ್ಯ ಸರಣಿಗಾಗಿ ಭಾರತ ತಂಡವನ್ನು ಗುರುವಾರ ಆಯ್ಕೆ ಮಾಡಲಿದ್ದು ಮೂರನೇ ಸ್ಪಿನ್ನರ್ ಆಯ್ಕೆ ಸಂದೀಪ್ ಪಾಟೀಲ್ ಸಾರಥ್ಯದ ಆಯ್ಕೆ ಸಮಿತಿಗೆ ಕಗ್ಗಂಟಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.

ಶ್ರೀಲಂಕಾ ಸರಣಿಗೆ ಹದಿಮೂರು ಆಟಗಾರರು ಸಹಜವಾಗಿಯೇ ಆಯ್ಕೆಯಾಗುವುದು ಖಚಿತವಾಗಿದ್ದರೆ. ಈ ಪೈಕಿ ಮೂರನೇ ಸ್ಪಿನ್ನರ್ ಗಾಗಿನ ಕಾದಾಟ ತಂಡದ ಸಂಖ್ಯೆಯನ್ನು 15 - 16 ಕ್ಕೇರಿಸುವ ಸಾಧ್ಯತೆ ಇದೆ.

ಬ್ಯಾಟಿಂಗ್ ವಿಭಾಗದಲ್ಲಿ ಮುರಳಿ ವಿಜಯ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ಹಾಗೂ ಎ ತಂಡದ ನಾಯಕ ಚೇತೇಶ್ವರ ಪೂಜಾರ ಹಾಗೂ ಯುವ ಆಟಗಾರ ಕೆ.ಎಲ್ ರಾಹುಲ್ ಸರಣಿಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇನ್ನು ವಿಕೆಟ್ ಕೀಪರ್ ಕಂ ಬ್ಯಾಟ್ಸ್ ಮ್ಯಾನ್ ವೃಧಿಮಾನ್ ಸಾಹಾ, ನಮಾನ್ ಓಜಾ ಹಾಗೂ ಸಂಜು ಸ್ಯಾಮ್ಸನ್ ಪೈಕಿ ಸಾಹಾ ಮೊದಲ ಆದ್ಯತೆ ಎನಿಸಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಉಮೇಶ್ ಯಾದವ್, ಇಶಾಂತ್ ಶರ್ಮಾ ಹಾಗೂ ಸದ್ಯ ಜ್ವರದಿಂದ ಬಳಲುತ್ತಿರುವ ವರುಣ್ ಇರಾನ್(ಚೇತರಿಸಿಕೊಂಡರೆ) ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದ್ದು, ಆರ್ ಅಶ್ವಿನ್ ಹಾಗೂ ಹರ್ಭಜನ್ ಸಿಂಗ್ ತಮ್ಮ ಸ್ಥಾನ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಮೂರನೇ ಸ್ಪಿನ್ನರ್ ನ ಆಯ್ಕೆ. ಎಡಗೈ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ, ಕರಣ್ ಶರ್ಮಾ ಹಾಗೂ ಕರ್ನಾಟಕದ ಶ್ರೇಯಸ್ ಗೋಪಾಲ್ ಪೈಕಿ ಯಾರನ್ನು ಲಂಕಾ ಪ್ರವಾಸಕ್ಕೆ ಆರಿಸಬೇಕೆಂಬುದು ಆಯ್ಕೆ ಸಮಿತಿಯ ಮುಂದಿರುವ ದೊಡ್ಡ ಸವಾಲು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com