ದ.ಆಪ್ರಿಕಾ-ಬಾಂಗ್ಲಾ ಟೆಸ್ಟ್ ಡ್ರಾ

ಕಳೆದೆರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಸಿ ದ.ಆಫ್ರಿಕಾ ಹಾಗೂ ಅತಿಥೇಯ ಬಾಂಗ್ಲಾದೇಶ...
ಮಳೆಯಿಂದಾಗಿ ಡ್ರಾ ನಲ್ಲಿ ಅಂತ್ಯಗೊಂಡ ಪಂದ್ಯ
ಮಳೆಯಿಂದಾಗಿ ಡ್ರಾ ನಲ್ಲಿ ಅಂತ್ಯಗೊಂಡ ಪಂದ್ಯ

ಚಿತ್ತಗಾಂಗ್: ಕಳೆದೆರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಸಿ ದ.ಆಫ್ರಿಕಾ ಹಾಗೂ ಅತಿಥೇಯ ಬಾಂಗ್ಲಾದೇಶ ನಡುವಣದ ಮೊದಲ ಟೆಸ್ಟ್  ಪಂದ್ಯ ಡ್ರಾನಲ್ಲಿ ಕೊನೆಕಂಡಿದೆ.

ಇಲ್ಲಿನ ಜಹೂರ್ ಅಹಮದ್ ಚೌದರಿ ಮೈದಾನದಲ್ಲಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಮೂರು ದಿನ ಮಾತ್ರ ಆಟ ನಡೆಯಿತಾದರೂ ನಾಲ್ಕನೇ ದಿನ ವರುಣನದ್ದೇ ಆಟವಾಯಿತು! ಪಂದ್ಯದ ಕೊನೆಯ ದಿನವಾದ ಶನಿವಾರವೂ ವರುಣ ಮುನಿದಿದ್ದರಿಂದ ಅನಿವಾರ್ಯವಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಪ್ರಭಾವಿ ದಾಳಿ ನಡೆಸಿದ್ದರಿಂದ ಬಾಂಗ್ಲಾದೇಶ ಪ್ರವಾಸಿಗರನ್ನು 248 ರನ್‍ಗಳಿಗೆ ಕಟ್ಟಿಹಾಕಿತ್ತು. ಯುವ ಬೌಲರ್ ಮುಸ್ತಫಿಜುರ್ ತೋರಿದ ಪರಿಣಾಕಾರಿ ದಾಳಿಗೆ ಹರಿಣಗಳು ಬೆದರಿದ್ದವು.

ಇದಕ್ಕೆ ಪ್ರತಿಯಾಗಿ 326 ರನ್ ಮಾಡಿ 78 ರನ್‍ಗಳ ಇನ್ನಿಂಗ್ಸ್ ಮುನ್ನಡೆ ಕಂಡಿತ್ತು. ಇನ್ನು ದ್ವಿತೀಯ ಇನ್ನಿಂಗ್ಸ್ ಗೆ ಮುಂದಾಗಿದ್ದ ದ.ಆಫ್ರಿಕಾ ವಿಕೆಟ್ ನಷ್ಟವಿಲ್ಲದೆ 61 ರನ್ ಗಳಿಸಿತ್ತು. ಭಾರತದೊಂದಿಗಿನ ಏಕೈಕ ಟೆಸ್ಟ್ ಪಂದ್ಯವೂ ಇದೇ ಮಳೆಯ ಕಾರಣದಿಂದ ಡ್ರಾ ಕಂಡಿತ್ತು.  ಅಂದ್ಹಾಗೆ ಬಾಂಗ್ಲಾದೇಶ ಮತ್ತು ದ.ಆಫ್ರಿಕಾ ನಡುವಿನ ಮೊಟ್ಟಮೊದಲ ಡ್ರಾ ಇದೆಂಬುದೂ ಗಮನಾರ್ಹ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 8 ಇನ್ನಿಂಗ್ಸ್ ಸೋಲನುಭವಿಸಿದೆ. ಉಭಯರ ಎರಡನೇ ಟೆಸ್ಟ್ ಪಂದ್ಯ ಇದೇ ತಿಂಗಳು 30 ರಿಂದ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com