ರಿಯೋ ಒಲಿಂಪಿಕ್ಸ್ ವರೆಗೆ ಓಲ್ಟ್ ಮನ್ ಕೋಚ್

ಭಾರತ ಹಾಕಿ ತಂಡದ ನೂತನ ಕೋಚ್ ಆಗಿ ಹಾಕಿ ಇಂಡಿಯಾದಿಂದ ನಿಯುಕ್ತಿಯಾಗಿರುನ ರೋಲಂಟ್ ಓಲ್ಟ್ ಮನ್ ಮುಂದಿನ ವರ್ಷ ನಡೆಯಲಿರುವ ಪ್ರತಿಷ್ಠಿತ....
ರೋಲಂಟ್ ಓಲ್ಟ್ ಮನ್
ರೋಲಂಟ್ ಓಲ್ಟ್ ಮನ್

ನವದೆಹಲಿ: ಭಾರತ ಹಾಕಿ ತಂಡದ ನೂತನ ಕೋಚ್ ಆಗಿ ಹಾಕಿ ಇಂಡಿಯಾದಿಂದ ನಿಯುಕ್ತಿಯಾಗಿರುನ ರೋಲಂಟ್ ಓಲ್ಟ್ ಮನ್ ಮುಂದಿನ ವರ್ಷ ನಡೆಯಲಿರುವ ಪ್ರತಿಷ್ಠಿತ ರಿಯೋ ಡಿ ಜನೈರೋ ಒಲಿಂಪಿಕ್ಸ್ ಕೂಟದವರೆಗೂ ಕಾರ್ಯ ನಿರ್ಹಹಿಸಲಿದ್ದಾರೆ.

ಹಾಕಿ ಇಂಡಿಯಾ ಅಧ್ಯಕ್ಷ ನರೀಂದರ್ ಬಾತ್ರಾ ಜತೆಗಿನ ವೈಮನಸ್ಸಿನಿಂದಾಗಿ ಹಾಲೆಂಡ್ ಮೂಲದ ಪಾಲ್ ವಾನ್ ಆಸ್ ಅವರು ಮರಳಿ ಸೇವೆಗೆ ಬರುವ ಅಗತ್ಯವಿಲ್ಲ ಎಂದು ಒಲಿಂಪಿಯನ್ ಹರೀಂದರ್ ಸಿಂಗ್ ನೇತೃತ್ವದ  9 ಮಂದಿಯ ವಿಶೇಷ ಸಮಿತಿ ವರದಿ ಸಲ್ಲಿಸಿದ ಒಪ್ಪೊತ್ತಿನಲ್ಲೇ ರೋಲಂಟ್ ಅವರ ನೇಮಕವನ್ನು ಹಾಕಿ ಇಂಡಿಯಾ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ ಅಂತಿಮಗೊಳಿಸಿದೆ.

61 ವರ್ಷದ ರೋಲಂಟ್ ಕೂಡ ಹಾಲೆಂಡ್ ಮೂಲದವರಾಗಿದ್ದು ಭಾರತ ಹಾಕಿ ಜೆತಗೆ ಮೂರು ವರ್ಷಗಳ ನಿಕಟ ಸಂಬಂಧ ಹೊಂದಿದ್ದಾರೆ. ಅವರು ಪ್ರಸಕ್ತ ಭಾರತ ತಂಡದ ಉನ್ನತ ಪ್ರದರ್ಶನದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com