
ಮುಂಬೈ: ವಾಂಖಡೆ ಕ್ರೀಡಾಂಗಣದಲ್ಲಿರುವ ತನ್ನ ಕೇಂದ್ರ ಕಚೇರಿಯನ್ನು ಮುಂಬೈ ಕ್ರಿಕೆಟ್ ಸಂಸ್ಥೆಯ ಒಡೆತನದಲ್ಲಿರುವ ಸುಬುರ್ಬಾನ್ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ)ಗೆ ಸ್ಥಳಾಂತರಿಸಲು ನಿರ್ಧರಿಸಿದೆ. ಈ ಕುರಿತು ಎಂಸಿಎಗೆ ಮನವಿ ಮಾಡಿರುವ ಬಿಸಿಸಿಐ, ಬಿಕೆಸಿಗೆ ಕಚೇರಿಯನ್ನು ಸ್ಥಳಾಂತರಿಸಲು ಬೇಕಾದ ಸ್ಥಳಾವಕಾಶ ನೀಡಲು ಕೋರಿದೆ. ಚತ್ರಪತಿ ವಿಮಾನ ನಿಲ್ದಾಣಕ್ಕೆ ಈ ಕ್ರೀಡಾಂಗಣ ಹತ್ತಿರವಿರುವುದರಿಂದ ಇಲ್ಲಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಬಿಕೆಸಿಯಲ್ಲಿರುವ ಕ್ಲಬ್ ಹೌಸ್ಎದುರಿನಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುತ್ತಿದ್ದು, ಅಲ್ಲಿ ಬಿಸಿಸಿಐ ನೂತನ ಕಚೇರಿಯನ್ನು ಹೊಂದಲು ಅವಕಾಶ ಕಲ್ಪಿಸಲಾಗುವುದು ಎಂದು ಎಂಸಿಎ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
Advertisement