
ಪ್ಯಾರಿಸ್: ವಿಶ್ವದ 2ನೇ ಶ್ರೇಯಾಂಕಿತ ಆಟಗಾರ ಹಾಗೂ 2009ರ ಚಾಂಪಿಯನ್ ರೋಜರ್ ಫೆಡರರ್, ಈ ಬಾರಿಯ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್ ಚಾಂಪಿಯನ್‍ಶಿಪ್ ನಿಂದ ಹೊರಬಿದ್ದಿದ್ದಾರೆ.
ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು, ಸ್ಟಾನಿಸ್ಲಾಸ್ ವಾವ್ರಿಂಕಾ ವಿರುದ್ಧ 6-4, 6-3, 7-6 (7-4) ಸೆಟ್‍ಗಳ ಅಂತರದಲ್ಲಿ ಮಣಿದರು. ಇಲ್ಲಿನ ಸುಜಾನ್-ಲೆಂಗ್ಲೆನ್
ಅಂಕಣದಲ್ಲಿ ನಡೆದ ಪಂದ್ಯದ ಮೊದಲೆರಡು ಸೆಟ್‍ಗಳಲ್ಲಿ ಮಿಂಚಿನ ಆಟವಾಡಿದ ವಾವ್ರಿಂಕಾ, ಫೆಡರರ್ ಅವರನ್ನು ಸುಲಭವಾಗಿ ಮಣಿಸಿದ್ದರು. ಆದರೆ, ಮೂರನೇ ಸೆಟ್‍ನಲ್ಲಿ ಇಬ್ಬರದ್ದೂ ಸಮಬಲದ ಹೋರಾಟವಾಯಿತು. ಹಾಗಾಗಿ, ಈ ಸೆಟ್ ಟೈ ಬ್ರೇಕರ್‍ಗೆ ಬಂದು ನಿಂತಿತು.
ಆನಂತರ, ಮುಂದುವರಿದ ಪಂದ್ಯದಲ್ಲಿ ವಾವ್ರಿಂಕಾ ಅವರೇ ಜಯ ಗಳಿಸುವ ಮೂಲಕ ಪಂದ್ಯದಲ್ಲಿ ವಿಜಯಿಯಾದರು. 17 ಬಾರಿ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆದ್ದಿರುವ ಸಾಧನೆ ಮಾಡಿರುವ ಸ್ವಿಜರ್‍ಲ್ಯಾಂಡ್‍ನ ಫೆಡರರ್ ಹೀಗೆ, ಸ್ವದೇಶದವರೇ ಆದ, 8ನೇ ಶ್ರೇಯಾಂಕಿತ ವಾವ್ರಿಂಕಾ ವಿರುದ್ಧ ಸೋಲುತ್ತಾರೆಂದು ಅವರ ಅಭಿಮಾನಿಗಳು ಎಣಿಸಿರಲಿಲ್ಲ. 2009ರಲ್ಲಿ ಪ್ರಶಸ್ತಿ ಗೆದ್ದಿದ್ದ ಮಾದರಿಯಲ್ಲೇ ಈ ಬಾರಿಯೂ ಫೆಡರರ್ ಪ್ರಶಸ್ತಿ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತು. 2002ರಿಂದ ಈವರೆಗೆ ತಮ್ಮ ವೃತ್ತಿಜೀವನದಲ್ಲಿ ಸುಮಾರು 219 ಗ್ರ್ಯಾನ್ ಸ್ಲಾಂ ಪಂದ್ಯಗಳನ್ನಾಡಿರುವ ಫೆಡರರ್, ವಾವ್ರಿಂಕಾ ವಿರುದ್ಧ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ದರು.
ಮೊದಲ ಸೆಮೀಸ್
ಫ್ರೆಂಚ್ ಓಪನ್‍ನಲ್ಲಿ ಸ್ಟಾನಿಸ್ಲಾಸ್ ವಾವ್ರಿಂಕಾ ಅವರದ್ದು ಇದು ಮೊದಲ ಸೆಮಿಫೈನಲ್ ಪಯಣ. ಈ ಹಿಂದೆ, ಅವರು ಸುಮಾರು 10 ಬಾರಿ ಫ್ರೆಂಚ್ ಓಪನ್‍ನಲ್ಲಿ ಮುಖ ತೋರಿಸಿದ್ದರೂ, ಈ ಮಟ್ಟದ ಸಾಧನೆ ಅವರಿಂದ ಹೊರಹೊಮ್ಮಿರಲಿಲ್ಲ.
ಸಫರೊವಾ ಸೆಮೀಸ್‍ಗೆ
ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮಾರಿಯಾ ಶರಪೊವಾಗೆ ಸೋಲಿನ ಕಹಿ ನೀಡಿದ್ದ, ಜೆಕ್ ಗಣರಾಜ್ಯದ ಲೂಸಿ ಸಫರೊವಾ, ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್ ಚಾಂಪಿಯನ್‍ನಲ್ಲಿ ಗೆಲವಿನ ಅಭಿಯಾನ ಮುಂದುವರಿಸುವ ಮೂಲಕ, ಸೆಮಿಫೈನಲ್‍ಗೆ ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‍ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು, ಸ್ಪೇನ್‍ನ ಗಾರ್ಸಿಯಾ ಮುಗುರುಜಾ ವಿರುದ್ಧ ಅವರು, 7-6(7-3), 6--3 ಸೆಟ್‍ಗಳ ಅಂತರದಲ್ಲಿ ಗೆಲವು ಪಡೆದು ಉಪಾಂತ್ಯಕ್ಕೆ ಲಗ್ಗೆಯಿಟ್ಟರು. ಮಹಿಳೆಯರ ಸಿಂಗಲ್ಸ್‍ನ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ಏಳನೇ ಶ್ರೇಯಾಂಕಿತೆ, ಸರ್ಬಿಯಾದ ಆ್ಯನಾ ಇವಾನೋವಿಚ್, ಫ್ರೆಂಚ್ ಓಪನ್ ನ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಉಕ್ರೇನ್‍ನ ಎಲೆನಾ ಸ್ಟಿಟೊಲಿನಾ ವಿರುದ್ಧ ಸೆಣಸಿದ್ದ ಅವರು, 3-6, 2-6 ಸೆಟ್‍ಗಳಲ್ಲಿ ಜಯ ಪಡೆದರು.
ಪಂದ್ಯದ ವೇಳೆ ಬಲವಾಗಿ ಬೀಸಿದ ಗಾಳಿಯ ರಭಸಕ್ಕೆ ಆಗಾಗ ವಿಚಲಿತನಾಗುತ್ತಿದ್ದೆ. ಅದು ನನ್ನ ಆಟದ ಮೇಲೆ ಪರಿಣಾಮ ಬೀರಿತು. ಆದರೂ, ವಾವ್ರಿಕಾ ಅವರ ಅದ್ಭುತ ಆಟಕ್ಕೆ ನಾನು ತಲೆಬಾಗಲೇ ಬೇಕಾಯ್ತು.
- ರೋಜರ್ ಫೆಡರರ್, ಸ್ವಿಜರ್ಲೆಂಡ್ ಆಟಗಾರ
Advertisement