ಸೆಮಿಫೈನಲ್‍ಗೆ ಕಶ್ಯಪ್

ಭಾರತದ ಭರವಸೆಯ ಶಟ್ಲರ್ ಪರುಪಳ್ಳಿ ಕಶ್ಯಪ್ ಇಂಡೊನೇಷ್ಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಅಚ್ಚರಿಯ ಫಲಿತಾಂಶ ನೀಡಿ ಸೆಮಿಫೈನಲ್‍ಗೆ ಹೆಜ್ಜೆ ಹಾಕಿದ್ದಾರೆ...
ಪರುಪಳ್ಳಿ ಕಶ್ಯಪ್
ಪರುಪಳ್ಳಿ ಕಶ್ಯಪ್

ಜಕಾರ್ತ: ಭಾರತದ ಭರವಸೆಯ ಶಟ್ಲರ್ ಪರುಪಳ್ಳಿ ಕಶ್ಯಪ್ ಇಂಡೊನೇಷ್ಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಅಚ್ಚರಿಯ ಫಲಿತಾಂಶ ನೀಡಿ ಸೆಮಿಫೈನಲ್‍ಗೆ ಹೆಜ್ಜೆ ಹಾಕಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ಚೀನಾದ ಚೆನ್ ಲಾಂಗ್ ವಿರುದ್ಧ ಕಶ್ಯಪ್, 14-21, 21-17, 21-14 ಗೇಮ್ ಗಳಿಂದ
ಜಯಗಳಿಸಿ ಮುಂದಡಿ ಇಟ್ಟರು. ವಿಶ್ವದ 12ನೇ ಶ್ರೇಯಾಂಕಿತ ಆಟಗಾರರಾಗಿರುವ ಕಶ್ಯಪ್‍ಗೆ ಈ ಗೆಲವು ಸುಲಭದ ಮಾತಾಗಿರಲಿಲ್ಲ. ಚೀನಾದ ಅಗ್ರಮಾನ್ಯ ಆಟಗಾರರಾಗಿರುವ ಚೆನ್
ಲಾಂಗ್, ಅತ್ಯುತ್ತಮ ಫಾಮರ್ ನಲ್ಲಿ ಇದ್ದಿದ್ದರಿಂದ ಕಶ್ಯಪ್ ಗೆಲ್ಲುವುದು ಅಸಾಧ್ಯದ ಮಾತು ಎಂದೇ ಆರಂಭದಲ್ಲಿ ಹೇಳಲಾಗಿತ್ತು. ಆದರೆ, ಎಲ್ಲರ ನಿರೀಕ್ಷೆಗೂ ಮೀರಿ ಹೋರಾಟ ನಡೆಸಿದ

ಭಾರತೀಯ ಆಟಗಾರ ಒಂದು ಗಂಟೆ 3 ನಿಮಿಷಗಳ ಕಾದಾಟದಲ್ಲಿ ಅಂತಿಮ ಗೆಲವು ದಾಖಲಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು.ಈ ಸಮರಕ್ಕೂ ಮುನ್ನ ಉಭಯ ಆಟಗಾರರು ಪರಸ್ಪರ ಎಂಟು ಬಾರಿ ಮುಖಾಮುಖಿಯಾಗಿದ್ದರು. ಈ ಪೈಕಿ 7-1ರ ಮುನ್ನಡೆ ಹೊಂದಿದ್ದ ಚೀನಾ ಆಟಗಾರ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದರು. ಅಚ್ಚರಿ ಎಂದರೆ ಕಶ್ಯಪ್, 2012ರಲ್ಲಿ ನಡೆದ ಇದೇ ಟೂರ್ನಿಯಲ್ಲಿ ಚೆನ್ ಲಾಂಗ್ ವಿರುದಟಛಿ ತಮ್ಮ ಕಳೆದ ವಿಜಯೋತ್ಸವ ಆಚರಿಸಿದ್ದರು.

ಈ ಬಾರಿ ಸಹ ಹಾಲಿ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಕಶ್ಯಪ್, ಸೂಕ್ತ ಸಮಯದಲ್ಲಿ ತಮ್ಮ ಅನುಭವ ಧಾರೆಯರೆಯುವ ಮೂಲಕ ರೋಚಕ ಗೆಲವು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ತಮ್ಮ ಬತ್ತಳಿಕೆಯಲ್ಲಿನ ಎಲ್ಲ ಸಂಪನ್ಮೂಲ ಗಳನ್ನು ಸಮರ್ಥವಾಗಿ ಬಳಸಿಕೊಂಡ ಭಾರತೀಯ ಆಟಗಾರ, ಅತ್ಯುತ್ತಮ ಹೊಡೆತಗಳ ಮೂಲಕ ಎದುರಾಳಿ ಆಟಗಾರ ಅನಗತ್ಯ ತಪ್ಪುಗಳನ್ನು ಮಾಡುವಂತೆ ಪ್ರಚೋದಿಸಿದ.

ಕಶ್ಯಪ್‍ರ ಆರ್ಭಟಕ್ಕೆ ಉತ್ತರಿಸಲು ವಿಫಲರಾದ ಚೀನಾ ಆಟಗಾರನಿಗೆ ಕೊನೆಗೆ ಸೋಲೇ ಗತಿಯಾಯಿತು. ಮೊದಲ ಗೇಮ್ ನ ಆರಂಭದಲ್ಲೇ 6-2ರ ಮುನ್ನಡೆಯೊಂದಿಗೆ ಪ್ರಭುತ್ವ ಸ್ಥಾಪಿಸಿದ ಚೀನಾ ಆಟಗಾರ ಕೊನೆಯವರೆಗೂ ಮೇಲುಗೈ ಸಾಧಿಸಿಕೊಂಡು ಬಂದು ಯಶಸ್ಸು ಸಾಧಿಸಿದರು. ಆದರೆ, ಎರಡನೇ ಗೇಮ್ ನಲ್ಲಿ ತಿರುಗಿಬಿದ್ದ ಕಶ್ಯಪ್ ಉತ್ತಮ ಹೋರಾಟ ಸಂಘಟಿಸಿದ. ಒಂದು ಹಂತದಲ್ಲಿ ಇಬ್ಬರೂ ಆಟಗಾರರು 7-7ರ ಅಂಕದಲ್ಲಿ ಸಮಸ್ಥಿತಿ ಸಾಧಿಸಿದಾಗ ರೋಚಕ ಹೋರಾಟ ಕಂಡುಬಂದಿತು. ನಂತರದಲ್ಲಿ ಭಾರತೀಯ ಆಟಗಾರ ದಿಟ್ಟತನದ ಪ್ರದರ್ಶನ ನೀಡಿ ಗೇಮ್ ವಶಕ್ಕೆ ಪಡೆಯುವ ಮೂಲಕ ಎದುರಾಳಿ ಜೊತೆ 1-1ರಿಂದ ಸಮಗೌರವ ಸಾಧಿಸಿದರು.

ನಿರ್ಣಾಯ ಮೂರನೇ ಗೇಮ್ ನಲ್ಲಿ ಕಶ್ಯಪ್ ಶುರುವಿನಿಂದಲೇ ಪ್ರಾಬಲ್ಯ ಮೆರೆ ಯುತ್ತ ಒಂದು ಹಂತದಲ್ಲಿ 9-3ರಿಂದ ಮುನ್ನಡೆ ತಲುಪಿದಾಗ ಗೆಲವು ದಾಖಲಿಸುವುದು ಖಚಿತ ವೆನಿಸಿತು. ಮತ್ತೊಂದೆಡೆ ಚೆನ್ ಲಾಂಗ್, ಮೈಕೊಡವಿ ಮೇಲೆದ್ದು ಬರಲು ಸಾಕಷ್ಟು ಪ್ರಯತ್ನ ನಡೆಸಿದರೂ ಸಹ ಭಾರತೀಯ ಆಟ ಗಾರ ಅದಕ್ಕೆ ಅವಕಾಶ ಮಾಡಿಕೊಡದೇ ನಾಲ್ಕರ ಘಟ್ಟದಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com