
ಪ್ಯಾರಿಸ್: ವಿಶ್ವದ 8ನೇ ಶ್ರೇಯಾಂಕಿತ, ಸ್ವಿಜರ್ಲೆಂಡ್‍ನ ಸ್ಟಾನಿಸ್ಲಾಸ್ ವಾವ್ರಿಂಕಾ, ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ತಲುಪಿದ್ದಾರೆ.
ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅವರು, ಫ್ರಾಂನ್ಸ್ ನ ಜೊ ವಿಲ್_É್ರಡ್ ಸೋಂಗ ಅವರನ್ನು 6-3, 6-7 (1-7), 7-6 (7-3) ಹಾಗೂ 6-4 ಸೆಟ್‍ಗಳ ಅಂತರದಲ್ಲಿ ಸೋಲಿಸಿ, ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು.
ಹಣಾಹಣಿ ಪಂದ್ಯ
ವಾವ್ರಿಂಕಾ ಹಾಗೂ ಸೋಂಗ ನಡುವಿನ ಪಂದ್ಯ ತೀವ್ರ ಕುತೂಹಲಕಾರಿಯಾಗಿತ್ತು. ಮೊದಲ ಸೆಟ್‍ನಲ್ಲಿ ಸುಲಭ ಜಯ ಸಂಪಾದಿಸಿದ ವಾವ್ರಿಂಕಾ, ನಂತರದ ಎರಡೂ ಸೆಟ್‍ಗಳಲ್ಲಿ ವಿಶ್ವದ 14ನೇ ಶ್ರೇಯಾಂಕಿತ ಆಟಗಾರನಿಂದ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಹಾಗಾಗಿ, ಎರಡನೇ ಸೆಟ್ ಟೈಬ್ರೇಕರ್‍ಗೆ ಒಳಗಾದಾಗ ನಂತರ ಮುಂದುವರಿದ ಆಟದಲ್ಲಿ ಗೆಲುವನ್ನು ಎದುರಾಳಿಗೆ ಬಿಟ್ಟುಕೊಟ್ಟರು. ನಂತರ, ಮೂರನೇ ಸೆಟ್ ಸಹ ಟೈಬ್ರೇಕರ್‍ಗೆ ಬಂದು ನಿಂತಾಗ, ಆನಂತರ ಮುಂದುವರಿದ ಆಟದಲ್ಲಿ ಜಯ ಸಾಧಿಸಿದರು. ಆದರೆ, ಅಂತಿಮ ಸೆಟ್‍ನಲ್ಲಿ ತಮ್ಮ ಮೊನಚು ಕಳೆದುಕೊಂಡ ಸೋಂಗ ಅವರ ದುರ್ಬಲ ಆಟದ ನೆರವು ಪಡೆದ ವಾವ್ರಿಂಕಾ, ಈ ಸೆಟ್‍ನಲ್ಲಿ ಸುಲಭ ಜಯ ದಾಖಲಿಸಿ, ಗೆಲವು ಪಡೆದಿದ್ದರು.
ಜೊಕೊ ಪಂದ್ಯಕ್ಕೆ ಬಿರುಗಾಳಿ ಅಡ್ಡಿ
ವಿಶ್ವದ ನಂಬರ್‍ಒನ್ ಟೆನಿಸಿಗ, ಸರ್ಬಿಯಾದ ಜೊಕೊವಿಚ್ ಹಾಗೂ 3ನೇ ಶ್ರೇಯಾಂಕಿತ ಬ್ರಿಟನ್ ನ ಆ್ಯಂಡಿ ಮರ್ರೆ ನಡುವಿನ ಪಂದ್ಯ ನಿರ್ಣಾಯಕ ಹಂತ ತಲುಪಿದ್ದಾಗ ಮಳೆಹನಿಯುಳ್ಳ ಬಿರುಗಾಳಿ ಬೀಸಿದ್ದರಿಂದ ಅರ್ಧಕ್ಕೆ ನಿಂತಿತು. ಅಷ್ಟರಲ್ಲಿ ಜೊಕೊ ಮೊದಲೆರಡು ಸೆಟ್ ಗಳಲ್ಲಿ ಜಯ ಸಾ„ಸಿದ್ದರೆ, ಮರ್ರೆ 3ನೇ ಸೆಟ್‍ನಲ್ಲಿ ಗೆಲವು ಪಡೆದಿದ್ದರು. 4ನೇ ಸೆಟ್‍ನಲ್ಲಿ ಇಬ್ಬರೂ 3-3 ಅಂಕಗಳ ಸಮಬಲ ಸಾಧಿಸಿದ್ದಾಗ, ಮಳೆ ಬಂದಿದ್ದರಿಂದ ಪಂದ್ಯವನ್ನು ಕೆಲಕಾಲ ನಿಲ್ಲಿಸಲಾಯಿತು. ಶನಿವಾರ ಈ ಪಂದ್ಯ ಮುಂದುವರಿಯಲಿದೆ.
ಈ ಪಂದ್ಯದ ಮೊದಲ ಸೆಟ್ ನಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಜೊಕೊವಿಚ್ ಅವರು, ಎದುರಾಳಿ ವಿರುದ್ಧ ಪ್ರಾಬಲ್ಯ ಸಾಧಿಸುವಲ್ಲಿ ಬೇಗನೇ ಯಶಸ್ವಿಯಾಗಿ ಮೊದಲ ಸೆಟ್‍ನಲ್ಲಿ ಸುಲಭ ಜಯ ಸಂಪಾದಿಸಿದರು. 2ನೇ ಸೆಟ್ ನಲ್ಲಿಯೂ ಜೊಕೋವಿಚ್ ಅವರ ಪಾಲಿಗೆ ದಕ್ಕಿತು. ಆದರೆ, ಇಬ್ಬರ ನಡುವಿನ ಮೂರನೇ ಸೆಟ್ ಮಾತ್ರ ತೀವ್ರ ಹಣಾಹಣಿಯಿಂದ ಕೂಡಿತ್ತು. ಈ ಸೆಟ್‍ನಲ್ಲಿ ಪುಟಿದೆದ್ದ ಮರ್ರೆ, ಆಕ್ರಮಣಕಾರಿ ಪ್ರದರ್ಶನ ನೀಡಿ ಗೆಲುವು ಪಡೆದಿದ್ದರು. ಇನ್ನು ನಾಲ್ಕನೇ ಸೆಟ್ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಮಳೆ ಆರಂಭವಾಗಿ ಇಬ್ಬರೂ 3-3ರ ಸಮಬಲ ಸಾಧಿಸಿದ್ದರು.
Advertisement