

ನ್ಯೂಯಾರ್ಕ್: ಫೋರ್ಬ್ಸ್ ನಿಯತಲಾಕಿಗೆ ಪ್ರಕಟಿಸಿರುವ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ವಿಶ್ವದ 100 ಆಟಗಾರರ ಪಟ್ಟಿಯಲ್ಲಿ ಏಕೈಕ ಭಾರತೀಯ, ಟೀಂ ಇಂಡಿಯಾದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಥಾನ ಪಡೆದಿದ್ದಾರೆ.
ಪಟ್ಟಿಯಲ್ಲಿ ಅಮೆರಿಕಾದ ಬಾಕ್ಸರ್ ಫ್ಲಾಯ್ಡ್ ಮೇವೆದರ್ ಮತ್ತೆ ಮೊದಲ ಸ್ಥಾನ ಪಡೆದಿದ್ದು, ಗಾಲ್ಫರ್ ಟೈಗರ್ ವೂಡ್, ಟೆನ್ನಿಸ್ ತಾರೆ ರೋಜರ್ ಫೆಡೆರರ್ ಹಾಗೂ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ನಂತರದ ಸ್ಥಾನದಲ್ಲಿದ್ದಾರೆ.
2015ನೇ ಸಾಲಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಆಟಗಾರರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು 23ನೇ ಸ್ಥಾನ ಪಡೆದಿದ್ದಾರೆ. ಕಳೆದ ಬಾರಿ 22ನೇ ಸ್ಥಾನ ಪಡೆದಿದ್ದರು.
33 ವರ್ಷದ ಕ್ರಿಕೆಟಿಗ ಕಳೆದ ವರ್ಷದ ಅಂತ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದು, ಏಕ ದಿನ ಹಾಗೂ ಟಿ20 ಕ್ರಿಕೆಟ್ ತಂಡದ ನಾಯಕರಾಗಿ ಮುಂದುವರೆದಿದ್ದಾರೆ.