2018 ರ ಫಿಫಾ ವಿಶ್ವಕಪ್ ಅರ್ಹತಾ ಸುತ್ತು: ಓಮನ್ ಸವಾಲು

ಫಿಫಾ ವಿಶ್ವಕಪ್ ನಲ್ಲಿ ಭಾರತ ತಂಡ ಆಡುವ ಕನಸು ಕೇವಲ ಫುಟ್ಬಾಲಿಗರ ಕನಸಲ್ಲ.ಇದು ಕೋಟ್ಯಂತರ ಭಾರತೀಯ ಅಭಿಮಾನಿಗಳ ಹೆಬ್ಬಯಕೆ...
ಕೋಚ್ ಜೊತೆ ಫುಟ್ಬಾಲ್ ತಂಡದ ಆಟಗಾರರ ಚರ್ಚೆ
ಕೋಚ್ ಜೊತೆ ಫುಟ್ಬಾಲ್ ತಂಡದ ಆಟಗಾರರ ಚರ್ಚೆ
Updated on

ಬೆಂಗಳೂರು: ಫಿಫಾ ವಿಶ್ವಕಪ್ ನಲ್ಲಿ ಭಾರತ ತಂಡ ಆಡುವ ಕನಸು ಕೇವಲ ಫುಟ್ಬಾಲಿಗರ ಕನಸಲ್ಲ.ಇದು ಕೋಟ್ಯಂತರ  ಭಾರತೀಯ ಅಭಿಮಾನಿಗಳ ಹೆಬ್ಬಯಕೆ. ಈ ಆಸೆ ಯಾವಾಗ ಈಡೇರುವುದು ಎಂಬ ಪ್ರಶ್ನೆ ಎಲ್ಲರ ಮನದಲ್ಲಿದೆ. ಈ ಆಸೆಯ ಬೆನ್ನತ್ತಿರುವ ಭಾರತ ಫುಟ್ಬಾಲ್ ತಂಡ ಪ್ರತಿ ಹಂತದಲ್ಲೂ ಅಗ್ನಿ ಪರೀಕ್ಷೆ ಎದುರಿಸಬೇಕಿದೆ., 2018ರ ಫಿಫಾ ವಿಶ್ವಕಪ್ ನ ಪ್ರಾಥಮಿಕ ಹಂತದ ಅರ್ಹತಾ ಸುತ್ತಿನಲ್ಲಿ  ಭಾರತ ಡಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಮೊದಲ ಪಂದ್ಯದಲ್ಲಿ ಪ್ರಬಲ ಓಮನ್ ವಿರುದ್ಧ ಸೆಣಸಲು ಸಜ್ಜಾಗಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಗೆಲುವು ದಾಖಲಿಸಿ ಶುಭಾರಂಭ ಮಾಡಲು, ಉಭಯ ತಂಡಗಳು ಎದುರು ನೋಡುತ್ತಿವೆ. ಓಮನ್ ತಂಡ ಫಿಫಾ ರ್ಯಾಂಕಿಂಗ್ ಪಟಿಟಯಲ್ಲಿ 101ನೇ ಸ್ಥಾನ ಪಡೆದಿದ್ದು ಭಾರತ 141 ನೇ ಸ್ಥಾನದಲ್ಲಿದೆ. ಈ ಮೂಲಕ 40 ಸ್ಥಾನಗಳ ಮೇಲಿರುವ ಓಮನ್ ಗೆ ಭಾರತ ತವರಿನ ಅಂಗಣದಲ್ಲಿ ಯಾವ ರೀತಿ ಸವಾಲು ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ, ಐದು ಸ್ಥಾನ ಪಡೆಯಲಿರುವ ತಂಡಗಳ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯಲಿರುವ ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಲಿವೆ. ಹಾಗಾಗಿ ಭಾರತ ತಂಡ, ಓಮನ್, ಇರಾನ್, ತುರ್ಕಮೆನಿಸ್ತಾನ್ ಹಾಗೂ ಗುಹಾಮ್ ವಿರುದ್ಧ ಸೆಣಸಲಿವೆ.

ಓಮನ್ ಮೇಲುಗೈ: ಈವರೆಗೂ ಭಾರತ ಎದುರಿನ ಕಾದಾಟದಲ್ಲಿ ಓಮನ್ ತಂಡ ಮೇಲುಗೈ ಸಾಧಿಸಿದೆ, ಉಭಯ ತಂಡಗಳು ನಾಲ್ಕು ಭಾರಿ ಪರಸ್ಪರ ಮುಖಾಮುಖಿಯಾಗಿದ್ದು, ಆ ಫೈಕಿ ಭಾರತ ಕೇವಲ 1ರಲ್ಲಿ ಗೆಲುವು ದಾಖಲಿಸಿದ್ದರೆ, 2ರಲ್ಲಿ ಸೋಲನುಭವಿಸಿದೆ. ಇನ್ನೊಂದು ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಈ ಮೂಲಕ ಓಮನ್ ತಂಡ ಭಾರತದ ವಿರುದ್ಧ ಈವರೆಗಿನ ಸೆಣಸಿನಲ್ಲಿ ಪ್ರಾಬಲ್ಯ ಮೆರೆದಿದೆ, ಅಲ್ಲದೆ ಭಾರತ ಈ ನಾಲ್ಕು ಪಂದ್ಯಗಳ ಪೈಕಿ ಒಟ್ಟು 11 ಗೋಲುಗಳನ್ನು ಬಿಟ್ಟುಕೊಟ್ಟಿದೆ, 2012 ರ ಫೆಬ್ರವರಿಯಲ್ಲಿ ಮಸ್ಕಾಟ್ ನಲ್ಲಿ ಉಭಯ ತಂಡಗಳು  ಕಳೆದ ಬಾರಿ ಮುಖಾಮುಕಿಯಾಗಿದ್ದವು. ಆ ಪಂದ್ಯದಲ್ಲಿ ಓಮನ್ ತಂಡ 5-1 ಗೋಲುಗಳ ಅಂತರದಲ್ಲಿ ಗೆದ್ದಿತ್ತು.

ಭಾರತಕ್ಕೆ ಅರ್ನಾಭ್ ಸಾರಥ್ಯ: ಈ ಪಂದ್ಯದಲ್ಲಿ ಭಾರತ ತಂಡವನ್ನು  ರಕ್ಷಣಾತ್ಮಕ  ವಿಭಾಗದ ಆಟಗಾರ ಅರ್ನಾಬ್ ಮೊಂದಲ್ ಮುನ್ನಡೆಸಲಿದ್ದಾರೆ, ಇನ್ನು ಮಾಜಿ ನಾಯಕ ಸುನೀಲ್ ಛೆಟ್ರಿ ಉಪನಾಯಕರಾಗಿದ್ದಾರೆ. ಇನ್ನು ಐಎಸ್ಎಲ್ ನಲ್ಲಿ ಭುಜದ ಗಾಯದ ಸಮಸ್ಯೆಗೆ ಸಿಲುಕಿದ್ದ ಸಂದೇಶ ಜಿಂಗನ್ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಭಾರತ ತಂಡ ಈ ವರ್ಷ ಕೇವಲ ಎರಡು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದೆ. ಮಹತ್ವದ ಟೂರ್ನಿಗೂ ಮುನ್ನ ಹೆಚ್ಚು ಸೌಹಾರ್ದ ಪಂದ್ಯಗಳನ್ನಾಡಬೇಕಿತ್ತು. ಇನ್ನೂ ಮೇ 31 ರಂದು ಐ ಲೀಗ್ ಟೂರ್ನಿ ಮುಕ್ತಾಯಗೊಂಡಿದ್ದು ಭಾರತ ತಂಡ ಈ ಪಂದ್ಯಕ್ಕೆ ತಯಾರಿ ನಡೆಸಲು ಕೇವಲ 4-5 ದಿನಗಳ ಕಾಲಾವಕಾಶ ಮಾತ್ರ ಸಿಕ್ಕಿದೆ.

ಟೂರ್ನಿಯಲ್ಲಿ ಪ್ರಬಲ ತಂಡಗಳನ್ನು ಎದುರಿಸಲಿದ್ದೇವೆ. ಆದರೂ ಸದ್ಯಕ್ಕೆ ನಮ್ಮ ಗುರಿ ಓಮನ್ ಮೇಲಿದೆ. ಎಲ್ಲ ಆಟಗಾರರು ಮಾನಸಿಕ ಹಾಗೂ ದೈಹಿಕವಾಗಿ ಸಜ್ಜಾಗಿದ್ದಾರೆ. ಪ್ರತಿ ಆಟಗಾರರು  ತಮ್ಮದೇ ಆದ ಜವಬ್ದಾರಿ ಹೊಂದಿದ್ದಾರೆ. ಪಂದ್ಯದ ಆರಂಭದಿಂದಲೇ ಪ್ರಬಲ ಹೋರಾಟ ನೀಡುವ ವಿಶ್ವಾಸ ನಮ್ಮಲಿದೆ.
ಅರ್ನಾಬ್ ಮೊಂದಲ್, ಭಾರತ ತಂಡದ ನಾಯಕ

ನಮ್ಮ ತಂಡ ಸಾಕಷ್ಟು ಅನುಭವ ಹೊಂದಿದೆ. ಪಂದ್ಯದಲ್ಲಿ ನಾವು ಯಾವ ರೀತಿಯ ಧೋರಣೆ ತೋರುತ್ತೇವೆ ಎಂಬುದು ಮುಖ್ಯ. ಎದುರಾಳಿ ತಂಡವನ್ನು ನಾವು ಗೌರವಿಸುತ್ತೇವೆ, ಪ್ರತಿ ಪಂದ್ಯ ಪ್ರತಿ ಗೋಲ್ ಹಾಗೂ ಪ್ರತಿ ಅಂಕವೂ ಮಹತ್ವದ ಪಾತ್ರ ನಿರ್ವಹಿಸಲಿದೆ. ಬೆಂಗಳೂರಿನ ವಾತಾವರಣ ಹಾಗೂ ಮೈದಾನದ ಪರಿಸ್ಥಿತಿ ಅತ್ಯುತ್ತಮವಾಗಿದ್ದು ನಮಗೆ ಹೆಚ್ಚು ಸೂಕ್ತವಾಗಿದೆ.
ಆಲ್ ಅಲಿ, ಹಬ್ಸಿ, ಓಮನ್ ತಂಡದ ನಾಯಕ

ಒತ್ತಡದಲ್ಲಿ ಓಮನ್
ಓಮನ್  ತಂಡ ಈಗಾಗಲೇ ಪ್ರಸಕ್ತ ಸಾಲಿನಲ್ಲಿ 8 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದೆ. ಈ ಪೈಕಿ 3 ಪಂದ್ಯ ಏಷ್ಯನ್ ಕಪ್ ನಲ್ಲಿ ಆಡಿದ್ದು 5 ಸೌಹಾರ್ದ ಪಂದ್ಯಗಳನ್ನಾಡಿದೆ. ಈ ವರ್ಷ 8 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ ಸೋಲನುಭವಿಸಿರುವ ಓಮನ್ 1 ರಲ್ಲಿ ಡ್ರಾ ಹಾಗೂ 2 ರಲ್ಲಿ ಜಯಿಸಿದೆ, ತಂಡದಲ್ಲಿ ಸಾಕಷ್ಟು ಅನುಭವಿ ಆಟಗಾರರಿದ್ದರೂ ಈ ಸಾಲಿನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ಎಡವಿರುವ ಓಮನ್ ಸಹಜವಾಗಿ ಒತ್ತಡದಲ್ಲಿದೆ. ತಂಡದ ಪ್ರಮುಖ ಆಟಗಾರರಾದ ಜಬರ್ ಆಲ್ ಒವೈಸಿ, ಮೊಹಮದ್  ಅಲಿ ಶಿಯಾಬಿ ಗಾಯದ ಸಮಸ್ಯೆಯಿಂದ ಹೊರಗುಳಿದಿರುವುದು ತಂಡಕ್ಕೆ ಹಿನ್ನಡೆ ತಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com