ಫುಟ್ಬಾಲ್ ಮೈದಾನದ ಪಿಚ್ ಮೇಲೆ ಸ್ವಸ್ತಿಕ ಚಿಹ್ನೆ: ಕ್ಷಮೆ ಕೇಳಿದ ಕ್ರೊಯೇಶಿಯಾ

ಇಟಲಿ ವಿರುದ್ಧದ ಯೂರೋ ೨೦೧೬ ರ ಆಯ್ಕಾ ಪಂದ್ಯಕ್ಕೆ, ಫುಟ್ಬಾಲ್ ಮೈದಾನದ ಪಿಚ್ ಮೇಲೆ ಸ್ವಸ್ತಿಕ ಚಿಹ್ನೆ ಬರೆದಿದ್ದಕ್ಕೆ ಕ್ರೊಯೇಶಿಯನ್ ಫುಟ್ಬಾಲ್
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸ್ಪ್ಲಿಟ್(ಕ್ರೊಯೇಶಿಯಾ): ಇಟಲಿ ವಿರುದ್ಧದ ಯೂರೋ ೨೦೧೬ ರ ಆಯ್ಕಾ ಪಂದ್ಯಕ್ಕೆ, ಫುಟ್ಬಾಲ್  ಮೈದಾನದ ಪಿಚ್ ಮೇಲೆ ಸ್ವಸ್ತಿಕ ಚಿಹ್ನೆ ಬರೆದಿದ್ದಕ್ಕೆ ಕ್ರೊಯೇಶಿಯನ್ ಫುಟ್ಬಾಲ್ ಫೆಡರೇಶನ್ (ಎಚ್ ಎನ್ ಎಸ್) ಕ್ಷಮೆ ಕೋರಿದೆ.

"ಇದು ವಿಧ್ವಂಸಕ ಮತ್ತು ಘಾತುಕ ಕೃತ್ಯ. ಪೊಲೀಸರು ಕಿಡಿಗೇಡಿಗಳನ್ನು ಗುರುತಿಸಬೇಕು. ಇದು ಎಚ್ ಎನ್ ಎಸ್ ಗಷ್ಟೇ ಅವಮಾನಕಾರಿಯಲ್ಲ ಇಡೀ ಕ್ರೊಯೇಶಿಯಾಗೆ" ಎಂದು ಎಚ್ ಎನ್ ಎಸ್ ವಕ್ತಾರ ತಾಮಿಸ್ಲಾವ್ ಪಕ್ಯಾಕ್ ಬಿಬಿಸಿಗೆ ಶುಕ್ರವಾರ ತಿಳಿಸಿದ್ದಾರೆ.

ಜರ್ಮನಿಯ ನಾಜಿ ಚಿಹ್ನೆ ಎಂದು ಗುರುತಿಸಲಾಗುವ ಸ್ವಸ್ತಿಕ ಚಿಹ್ನೆ ಪಂದ್ಯದ ಮೊದಲಾರ್ಧದಲ್ಲಿ ಕಾಣಿಸಿಕೊಂಡಿತ್ತು. ಮೈದಾನದ ಸಿಬ್ಬಂದಿಗಳು ಅದನ್ನು ಅಳಿಸಿಹಾಕಲು ವ್ಯರ್ಥ ಪ್ರಯಾಣ ಮಾಡಿದ್ದರು. ಪಂದ್ಯ ೧-೧ ರಲ್ಲಿ ಅಂತ್ಯವಾಗಿತ್ತು. ಚಿಹ್ನೆಯನ್ನು ಮೈದಾನದಲ್ಲಿ ಅಗೆಯಲಾಗಿತ್ತೋ ಅಥವಾ ಹುಲ್ಲುಹಾಸಿನ ಮೇಲೆ ಬಣ್ಣ ಬಳಿಯಲಗಿತ್ತೋ ಎಂಬುದನ್ನು ಪರೀಕ್ಷಿಸಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com