
ದುಬೈ: ಆಸ್ಟ್ರೇಲಿಯಾದ ಇನ್ ಫಾರ್ಮ್ ಬ್ಯಾಟ್ಸ್ ಮನ್ ಸ್ವೀವನ್ ಸ್ಮಿತ್ ಮೂತನ ಐಸಿಸಿ ಟೆಸ್ಟ್ ಬ್ಯಾಟ್ಸ್ ಮನ್ ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿದಿದ್ದಾರೆ. ಈ ಮೂಲಕ 2012 ರಲ್ಲಿ ಮೈಕಲ್ ಕ್ಲಾರ್ಕ್ ನಂತರ ಈ ಸ್ಥಾನ ಅಲಂಕರಿಸಿದ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಆಗಿದ್ದಾರೆ, ಇನ್ನು ಭಾರತದ ನಾಯಕ ವಿರಾಟ್ ಕೊಹ್ಲಿ 11 ನೇ ಸ್ಥಾನದಲ್ಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 1 ರನ್ ಅಂತರದಲ್ಲಿ ದ್ವಿಶತಕ ವಂಚಿತರಾಗಿದ್ದ ಸ್ಟೀವನ್ ಸ್ಮಿತ್, ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾಗಿದ್ದರು. ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ 4ನೇ ಸ್ಥಾನದಲ್ಲಿದ್ದ ಸ್ಮಿತ್ ಸೋಮವಾರ ಬಿಡುಗಡೆಯಾದ ಹೊಸ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಸ್ಮಿತ್ ಪ್ರಸಕ್ತ ಸಾಲಿನಲ್ಲಿ 102.16 ರ ಸರಾಸರಿಯಲ್ಲಿ 1226 ರನ್ ದಾಖಲಿಸಿದ್ದಾರೆ. ನಂತರದ ಸ್ಥಾನದಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕಾರ, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಮತ್ತು ಹಶೀಂ ಆಮ್ಲಾ ಸ್ಥಾನ ಪಡೆದಿದ್ದಾರೆ.
ಭಾರತದ ಪರ 11ನೇ ಸ್ಥಾವ ಪಡೆದಿರುವ ವಿರಾಟ್ ಕೊಹ್ಲಿ ಉತ್ತಮ ಸಾಧನೆ. ಉಳಿದಂತೆ ಆರಂಭಿಕ ಮುರುಳಿ ವಿಜಯ್, 20ನೇ ಸ್ಥಾನದಲ್ಲಿದ್ದಾರೆ.ರಹಾನೆ 22 ಹಾಗೂ ಪೂಜಾರ 26 ನೇ ಸ್ಥಾನದಲ್ಲಿದ್ದಾರೆ.
ಇನ್ನು ಬೌಲರ್ ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ಅಗ್ರ ಸ್ಥಾನದಲ್ಲಿದ್ದು ಇಂಗ್ಲೆಂಡ್ ನ ಟ್ರೆಂಟ್ ಬೌಲ್ಟ್ ಮತ್ತು ಆಸ್ಟ್ರೇಲಿಯಾದ ರಯಾನ್ ಹ್ಯಾರಿಸ್ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.ಭಾರತದ ಸ್ಪಿನ್ನರ್ ಆರ್. ಅಶ್ವಿನ್, 12ನೇ ಸ್ಥಾನದಲ್ಲಿರುವುದು ಉತ್ತಮ ಸಾಧನೆಯಾಗಿದೆ.
ಉಳಿದಂತೆ ಇಶಾಂತ್ ಶರ್ಮಾ 19 ಮತ್ತು ಜಹೀರ್ ಖಾನ್ 24ನೇ ಸ್ಥಾನದಲ್ಲಿದ್ದಾರೆ. ಆಲ್ ರೌಂಡರ್ ಜಿಂಬಾಬ್ವೆಯ ಶಕಿಬ್ ಅಲ್ ಹಸನ್ ಅಗ್ರ ಸ್ಥಾನ ಗಳಿಸಿದರೇ, ದಕ್ಷಿಣ ಆಫ್ರಿಕಾದ ವರ್ನಾನ್ ಫಿಲ್ಯಾಂಡರ್ ದ್ವಿತೀಯ ಸ್ಥಾನ ಪಡೆದರು. ಭಾರತದ ಆಫ್ ಸ್ಪಿನ್ ಆಲ್ರೌಂಡರ್ ಆರ್. ಅಶ್ವಿನ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
Advertisement