ಆಟಗಾರರಲ್ಲಿ ಫುಟ್ಬಾಲ್ ನ ಜಾಣ್ಮೆ ಕೊರತೆ ಇದೆ: ಸ್ಟೀಫನ್

2018 ರ ಫಿಫಾ ವಿಶ್ವಕಪ್ ಆರ್ಹತಾ ಸುತ್ತಿನ ಪಂದ್ಯದಲ್ಲಿ ಮಂಗಳವಾರ ಗುಹಾಮ್ ವಿರುದ್ಧ ಸೋಲನುಭವಿಸಿದ ಭಾರತ ತಂಡದ ಬಗ್ಗೆ ಮಾತನಾಡಿದ ತಂಡದ ಕೋಚ್ ಸ್ಟೀಫನ್ ಕಾನ್ಸ್ ಟಾಂಟೀನ್....
Stephen Constantine
Stephen Constantine

ತಮುನಿಂಗ್: 2018 ರ ಫಿಫಾ ವಿಶ್ವಕಪ್ ಆರ್ಹತಾ ಸುತ್ತಿನ ಪಂದ್ಯದಲ್ಲಿ ಮಂಗಳವಾರ ಗುಹಾಮ್ ವಿರುದ್ಧ ಸೋಲನುಭವಿಸಿದ ಭಾರತ ತಂಡದ ಬಗ್ಗೆ ಮಾತನಾಡಿದ ತಂಡದ ಕೋಚ್ ಸ್ಟೀಫನ್ ಕಾನ್ಸ್ ಟಾಂಟೀನ್, ನಮ್ಮಲ್ಲಿ ಫುಟ್ಬಾಲ್  ಕ್ರೀಡೆಯಲ್ಲಿನ ಜಾಣ್ಮೆಯ ಕೊರತೆ ಇದೆ ಎಂದು ಒಪ್ಪಿಕೊಂಡಿದ್ದಾರೆ.
ಭಾರತ ತಂಡ ಕಳಪೆ ಪ್ರದರ್ಶನ ನೀಡಿದ್ದು, ಸದೃಢ ಎದುರಾಳಿಯ ಮುಂದೆ ಹೇಗೆ ಕಾದಾಟ ನಡೆಸಬೇಕು ಎಂಬುದರ ಬಗ್ಗೆ ಅರಿವಿಲ್ಲ ಎಂದಿದ್ದಾರೆ.
ಗುಹಾಮ್ ತಂಡ ಅಮೆರಿಕಾದ ಏಳು ಆಟಗಾರರನ್ನು ಕಣಕ್ಕಿಳಿಸಿದ್ದು, ಅದರಲ್ಲಿ ಇಬ್ಬರು ಪ್ರಮುಖ ಲೀಗ್ ಸಾಕರ್ ಆಟಗಾರರಾಗಿದ್ದಾರೆ. ಅಲ್ಲದೆ ಕ್ರೀಡೆಯಲ್ಲಿ ಅತ್ಯುತ್ತಮ  ತಂತ್ರಗಾರಿಕೆ ಪ್ರದರ್ಶಿಸಿತ್ತು. ಆದರೆ ಭಾರತದ ಇಂದಿನ ಪ್ರದರ್ಶನ ನಿರಾಸೆ ಮೂಡಿಸಿದೆ, ಎದುರಾಳಿ ತಂಡದ ಆಟಗಾರರು ಫುಟ್ಬಾಲ್ ಬಗೆಗಿನ ಉತ್ತಮ ಜ್ಞಾನ ಹೊಂದಿದ್ದರು.  ಪಂದ್ಯದಲ್ಲಿ  ಎಕರಡು ತಂಡಗಳ ಆಟಗಾರರಲ್ಲಿನ ಜ್ಞಾನದ ವ್ಯತ್ಯಾಸ ಎದ್ದು ಕಾಣುತ್ತಿತ್ತು. ಗುಹಾಮ್ ತಂಡದಲ್ಲಿ ಶೇ. 75 ರಷ್ಟು ಆಟಗಾರರು ಅಮೆರಿಕಾದಲ್ಲಿ ಹುಟ್ಟಿ ತರಬೇತಿ ಪಡೆದಿದ್ದಾರೆ. ಹಾಗಾಗಿ ತಂಡದಲ್ಲಿ ಹೆಚ್ಚಿನ ವ್ಯತ್ಯಾಸ ಮೂಡಿಸಿತು. ನಮ್ಮ ತಂಡದ ಆಟಗಾರರಲ್ಲಿ ಫುಟ್ಬಾಲ್ ಬಗೆಗಿನ ಅರಿವು ಕಡಿಮೆ ಆಗಿತ್ತು. ಪ್ರಮುಖ ಹಂತದಲ್ಲಿ ನಿಯಂತ್ರಣ ಕಳೆದುಕೊಂಡಿದ್ದು, ತಂಡ ಪಂದ್ಯದಲ್ಲಿ ಹಿನ್ನಡೆ ಅನುಭವಿಸಲು ಕಾರಣವಾಯಿತು ಎಂದು ಅಭಿಪ್ರಾಯ ಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com