ಡಿಆರ್ ಎಸ್ ನಿರ್ಧಾರ ಬದಲಿಸಲ್ಲ, ಆದರೂ ಮಾತುಕತೆಗೆ ಸಿದ್ಧ: ದಾಲ್ಮಿಯಾ

ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಂತರ ಅಂಪೈರ್ ಡಿಸಿಷನ್ ರಿವ್ಯೂ ಸಿಸ್ಟಮ್ ಬಗ್ಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಕಾರಾತ್ಮಕ
ಜಗಮೋಹನ್ ದಾಲ್ಮಿಯಾ
ಜಗಮೋಹನ್ ದಾಲ್ಮಿಯಾ

ಕೋಲ್ಕೊತಾ: ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಂತರ ಅಂಪೈರ್ ಡಿಸಿಷನ್ ರಿವ್ಯೂ ಸಿಸ್ಟಮ್ ಬಗ್ಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಕಾರಾತ್ಮಕ ಮಾತನಾಡಿದ್ದರು. ಈ  ಕುರಿತು ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ, ಮಂಡಳಿ ವಿತಾರವಾಗಿ ತನ್ನ ನಿಲುವು ಬದಲಿಸುವುದಿಲ್ಲ. ಆದರೆ ಮಾತುಕತೆಗೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಎನ್ ಶ್ರೀನಿವಾಸನ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬಿಸಿಸಿಐ, ಡಿಆರ್ ಎಸ್ ವಿರುದ್ಧವಾದ ಸ್ವಷ್ಟ ನಿರ್ಧಾರ ತಾಳಿತ್ತು. ಆದರೆ ಜಗಮೋಹನ್ ದಾಲ್ಮಿಯಾ ಅವರು ಮಾತುಕತೆಗೆ ಸಿದ್ಧ ಎಂದು ತಿಳಿಸಿದ್ದಾರೆ. ಈ ಮೂಲಕ ತಂತ್ರಜ್ಞಾನ ಮತ್ತಷ್ಟು ಸುಧಾರಣೆ ಕಂಡ ನಂತರ ಭವಿಷ್ಯದಲ್ಲಿನ ಸರಣಿಗಳಲ್ಲಿ ಬಳಸಲು ಒಪ್ಪಿಗೆ ನೀಡುವ ಸಾಧ್ಯತೆಗಳಿವೆ,

ಡಿಐರ್ ಎಸ್ ಕುರಿತಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿರ್ಧಾರ ಹಾಗೇ ಮುಂದುವರಿಯಲಿದೆ. ಹಾಗೆಂದು ನಾವು ಮಾತುಕತೆ ನಡೆಸಲು ನಿರಾಕರಿಸುವುದಿಲ್ಲ. ಈ ತಂತ್ರಜ್ಞಾನ ಮತ್ತಷ್ಟು ಸುಧಾರಣೆಯಾದರೆ, ಅದರ ಬಗ್ಗೆ ಚರ್ಚಿಸುತ್ತೇವೆ ಎಂದರು.

ಈ ಹಿಂದೆ ಡಿಆರ್ ಎಸ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಕೊಹ್ಲಿ, ಈ ಬಗ್ಗೆ ಎಲ್ಲರು ಕುಳಿತು ಚರ್ಚೆ ನಡೆಸಬೇಕು. ಅಲ್ಲದೇ ಈ ಬಗ್ಗೆ ಬೌಲರ್ ಗಳ ಅಭಿಪ್ರಾಯ ಪಡೆಯಬೇಕು, ಅಲ್ಪ ಸಮಯಾವಕಾಶದಲ್ಲಿ ಈ ಟೆಸ್ಟ್ ನಲ್ಲಿ ಆಡಿದ್ದೇವೆ. ಈಗ ಸಾಕಷ್ಟಪ ಕಾಲವಕಾಶವಿದ್ದು, ಈ ಬಗ್ಗೆ ಚಿಂತನೆ ನಡೆಸಬಹುದು ಎಂದರು. ಡಿಆರ್ ಎಸ್ ಸಂಪೂರ್ಣವಾಗಿ ದೋಷ ಮುಕ್ತವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂಬ ವಿರೋಧದ ಮಾತುಗಳು ಕೇಳಿ ಬಂದಿವೆ.

ಈ ವಿಚಾರದಲ್ಲಿ ತಂತ್ರಜ್ಞಾನ ಹೆಚ್ಚು ಪ್ರಾಮುಖ್ಯತೆ ಪಡೆದಿರುವುದರಿಂದ ಕ್ರಿಕೆಟ್ ಸಲಹಾ ಸಮಿತಿ ಈ ಕುರಿತ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ದಾಲ್ಮಿಯಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com